ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತನ್ನ ಜೀವವನ್ನೇ ಪಣಕ್ಕಿಟ್ಟು ಕರಡಿಯೊಂದಿಗೆ ಹೋರಾಡಿ ಪತಿಯನ್ನು ರಕ್ಷಿಸಿದ ಪತ್ನಿ!

brave wife saves husband: ಪತ್ನಿಯೊಬ್ಬಳು ಪತಿಯ ಮೇಲೆ ದಾಳಿ ಮಾಡಿದ ಕರಡಿಯೊಂದಿಗೆ ಹೋರಾಡಿ ಆತನನ್ನು ರಕ್ಷಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ. 41 ವರ್ಷದ ಬುಡಕಟ್ಟು ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ದಟ್ಟವಾದ ಕಾಡಿನಲ್ಲಿದ್ದಾಗ ಕರಡಿ ದಾಳಿ ಮಾಡಿದೆ. ಅರಣ್ಯ ಅಧಿಕಾರಿಗಳು ಮಹಿಳೆಯ ಧೈರ್ಯವನ್ನು ಗಂಭೀರ ಅಪಾಯದ ನಡುವೆಯೂ ಧೈರ್ಯವಂತೆ ಎಂದು ಶ್ಲಾಘಿಸಿದರು.

ಸಾಂದರ್ಭಿಕ ಚಿತ್ರ

ಭುವನೇಶ್ವರ, ಫೆ.20: ಪತ್ನಿಯೊಬ್ಬಳು ಪತಿಯ ಮೇಲೆ ದಾಳಿ ಮಾಡಿದ ಕರಡಿಯೊಂದಿಗೆ (wild animal attack) ಹೋರಾಡಿ ಆತನನ್ನು ರಕ್ಷಿಸಿದ ಘಟನೆ ನಡೆದಿದೆ. ಒಡಿಶಾದ (Odisha) 41 ವರ್ಷದ ಬುಡಕಟ್ಟು ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ದಟ್ಟವಾದ ಕಾಡಿನಲ್ಲಿದ್ದಾಗ ಕರಡಿ ದಾಳಿ ಮಾಡಿದೆ. ಇದರಿಂದ ಧೃತಿಗೆಡದ ಮಹಿಳೆಯು ತನ್ನ ಗಂಡನ ಜೀವವನ್ನು ಉಳಿಸಲು ಕೊಡಲಿಯಿಂದ ಕ್ರೂರ ಕರಡಿಯ ವಿರುದ್ಧ ಹೋರಾಡುವ ಮೂಲಕ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ್ದಾರೆ.

ಇದು ಗಂಡ-ಹೆಂಡತಿಯ ದಿನನಿತ್ಯದ ಹೊಟ್ಟೆಪಾಡಿಗಾಗಿ ಹೋರಾಟದ ಬದುಕಾಗಿದೆ. ಅರಣ್ಯ ಅಧಿಕಾರಿಗಳು ಮಹಿಳೆಯ ಧೈರ್ಯವನ್ನು ಗಂಭೀರ ಅಪಾಯದ ನಡುವೆಯೂ ಧೈರ್ಯವಂತೆ ಎಂದು ಶ್ಲಾಘಿಸಿದರು. ಕಾರಂಜಿಯಾ ಅರಣ್ಯ ವ್ಯಾಪ್ತಿಯ ಮಿಲು ಗ್ರಾಮದ ಬಳಿಯ ಹತಿಸಲಬೇಡ ಅರಣ್ಯದಲ್ಲಿ ಮಂಗಳವಾರ (ಫೆ.17) ಈ ಘಟನೆ ನಡೆದಿದೆ.

ಲಿಲಿ ಸೊರೆನ್ ಮತ್ತು ಅವರ ಪತಿ 48 ವರ್ಷದ ಮಾಲ್ಡೆ ಸೊರೆನ್ ಸೊಪ್ಪನ್ನು ಸಂಗ್ರಹಿಸಲು ಕಾಡಿಗೆ ತೆರಳಿದ್ದಾರೆ. ಈ ವೇಳೆ ಆರು ಕಾಡು ಕರಡಿಗಳ ಗುಂಪು ಆ ಪ್ರದೇಶದಲ್ಲಿದ್ದವು. ಕರಡಿಯೊಂದು ಇದ್ದಕ್ಕಿದ್ದಂತೆ ಮಾಲ್ಡೆ ಮೇಲೆ ದಾಳಿ ಮಾಡಿ, ಆತನನ್ನು ಕೆಡವಿ ತಲೆಗೆ ತೀವ್ರ ಗಾಯಗಳನ್ನುಂಟುಮಾಡಿತು. ತನ್ನ ಗಂಡನ ನೆತ್ತಿಯ ಮೇಲೆ ಆಳವಾದ ಗಾಯಗಳಿಂದ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ ಲಿಲಿ ಓಡಿಹೋಗುವ ಕರಡಿಯೊಂದಿಕ್ಕೆ ಹೋರಾಟಕ್ಕೆ ಇಳಿದಳು.

Bear Attack: ಟೊಮೇಟೊ ತೋಟದಲ್ಲಿ ಕರಡಿ ದಾಳಿ; ಇಬ್ಬರು ರೈತರಿಗೆ ಗಂಭೀರ ಗಾಯ

ತನ್ನ ಬಳಿಯಿದ್ದ ಸಾಂಪ್ರದಾಯಿಕ ಕೊಡಲಿಯಿಂದ ಶಸ್ತ್ರಸಜ್ಜಿತಳಾಗಿ, ಕರಡಿಯನ್ನು ಓಡಿಸಲು ಪದೇ ಪದೇ ಹೊಡೆದಿದ್ದಾಳೆ. ಇದರಿಂದ ಹೆದರಿದ ಕರಡಿ ಅಲ್ಲಿಂದ ಕಾಲ್ಕಿತ್ತಿತ್ತು. ದಾಳಿಯ ಬಗ್ಗೆ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಮಾಲ್ಡೆಯನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದರು.

ಮಾಲ್ಡೆ ತಲೆಗೆ ಗಂಭೀರವಾದ ಗಾಯಗಳಾಗಿದ್ದರಿಂದ, ನಂತರ ಅವರನ್ನು ಕಿಯೋಂಜಾರ್ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಸಮಯದಲ್ಲಿ ಲಿಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

ಅರಣ್ಯ ಅಧಿಕಾರಿಗಳು ಆಕೆಯ ಧೈರ್ಯವನ್ನು ಶ್ಲಾಘಿಸಿದರು. ಕಾರಂಜಿಯಾ ವಲಯ ಅಧಿಕಾರಿ ಪ್ರಶಾಂತ್ ಕುಮಾರ್ ಸ್ವೈನ್, ಅರಣ್ಯ ಆವಾಸಸ್ಥಾನಗಳ ಬಳಿ ವಾಸಿಸುವ ಸಮುದಾಯಗಳು ಎದುರಿಸುತ್ತಿರುವ ಅಪಾಯಗಳನ್ನು ಎತ್ತಿ ತೋರಿಸುತ್ತಾ, ಗಂಭೀರ ಅಪಾಯದ ಸಂದರ್ಭದಲ್ಲಿ ಮಹಿಳೆಯ ಪ್ರತಿಕ್ರಿಯೆ ಗಮನಾರ್ಹವಾಗಿದೆ ಎಂದು ಬಣ್ಣಿಸಿದರು.

ಅರಣ್ಯಗಳಿಗೆ ಪ್ರವೇಶಿಸುವಾಗ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಗ್ರಾಮಸ್ಥರನ್ನು ಒತ್ತಾಯಿಸಿದ್ದಾರೆ. ಅಂತಹ ಅಪಾಯಗಳನ್ನು ಕಡಿಮೆ ಮಾಡಲು ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.