ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಾರಿಷಸ್ ಬಳಿ ಒಡಿಶಾ ಮೂಲದ ನೌಕಾಪಡೆ ಅಧಿಕಾರಿ ನಾಪತ್ತೆ; ಹುಡುಕಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕುಟುಂಬ ಮನವಿ

ಮಾರಿಷಸ್ ಬಳಿ ಚೀನಾ ಬಂಧಿಸಿದ ಹಡಗಿನಿಂದ ಒಡಿಶಾ ಮೂಲದ ನೌಕಾ ಪಡೆಯ ಅಧಿಕಾರಿಯೊಬ್ಬರು ನಾಪತ್ತೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಕುಟುಂಬವೀಗ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಭದ್ರಕ್‌ನ ಕೇಸ್ಪುರ್ ಗ್ರಾಮದ ನಿವಾಸಿ ಸಾರ್ಥಕ್ ಮಹಾಪಾತ್ರ ನಾಪತ್ತೆಯಾದ ಯುವಕ. 2025ರ ಜುಲೈ ತಿಂಗಳಿನಿಂದ ಆತ ಖಾಸಗಿ ಹಡಗು ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದನು ಎನ್ನಲಾಗಿದೆ.

ಚೀನಾ ಬಂಧಿತ ಹಡಗಿನಿಂದ ಒಡಿಶಾದ ನೌಕಾಪಡೆ ಅಧಿಕಾರಿ ನಾಪತ್ತೆ

ಸಾರ್ಥಕ್ ಮಹಾಪಾತ್ರ (ಸಂಗ್ರಹ ಚಿತ್ರ) -

ನವದೆಹಲಿ: ಮಾರಿಷಸ್ (Mauritius) ಬಳಿ ಚೀನಾ (China) ಬಂಧಿಸಿರುವ ಹಡಗಿನಲ್ಲಿದ್ದ ಒಡಿಶಾ (odisha) ಮೂಲದ ನೌಕಾ ಪಡೆ ಅಧಿಕಾರಿ (Merchant Navy officer) ನಾಪತ್ತೆಯಾಗಿರುವ ಘಟನೆ ನಡೆದಿದೆ. ಭದ್ರಕ್‌ನ ಕೇಸ್ಪುರ್ ಗ್ರಾಮದ ನಿವಾಸಿ ಸಾರ್ಥಕ್ ಮಹಾಪಾತ್ರ ನಾಪತ್ತೆಯಾದ ಯುವಕ. 2025ರ ಜುಲೈ ತಿಂಗಳಿನಿಂದ ಆತ ಖಾಸಗಿ ಹಡಗು ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಫೆಬ್ರವರಿ 2ರಂದು ಸೋಮವಾರ ನಾಪತ್ತೆಯಾಗಿದ್ದಾನೆ. ಹಡಗು ಸಿಂಗಾಪುರ (Singapore) ಬಳಿ ಇದ್ದಾಗ ಆತ ಕೊನೆಯದಾಗಿ ತನ್ನ ಕುಟುಂಬದೊಂದಿಗೆ ಮಾತನಾಡಿದ್ದನು. ಬಳಿಕ ನಾಪತ್ತೆಯಾಗಿದ್ದು ಆತನನ್ನು ಹುಡುಕಿಕೊಡುವಂತೆ ಕುಟುಂಬವೀಗ ಕೇಂದ್ರ ಸರ್ಕಾರದ ಮೊರೆ ಹೋಗಿದೆ.

ವ್ಯಾಪಾರಿ ಹಡಗಿನಲ್ಲಿ ನೌಕಾಪಡೆಯ ಅಧಿಕಾರಿಯಾಗಿದ್ದ ಸಾರ್ಥಕ್ ಕರ್ತವ್ಯದಲ್ಲಿದ್ದಾಗ ಮಾರಿಷಸ್ ಬಳಿ ನಾಪತ್ತೆಯಾಗಿದ್ದಾನೆ. ಆತನನ್ನು ಹುಡುಕಲು ಪಾರದರ್ಶಕವಾಗಿ ತನಿಖೆ ನಡೆಸುವಂತೆ ಕುಟುಂಬವು ಒಡಿಶಾ ಮತ್ತು ಕೇಂದ್ರ ಅಧಿಕಾರಿಗಳಿಗೆ ಮನವಿ ಮಾಡಿದೆ.

ಹಾಡಹಗಲೇ ಆಮ್‌ ಆದ್ಮಿ ನಾಯಕನ ಮೇಲೆ ಗುಂಡಿನ ದಾಳಿ; ಗುರುದ್ವಾರದ ಎದುರೇ ಕೊಲೆ ಮಾಡಿದ ದುಷ್ಕರ್ಮಿಗಳು

ಈ ಕುರಿತು ಮಾಹಿತಿ ನೀಡಿರುವ ಸಾರ್ಥಕ್ ತಾಯಿ ರಶ್ಮಿತಾ ಮಹಾಪಾತ್ರ ಅವರ ಪ್ರಕಾರ, ಹಡಗು ಚೀನಾದಿಂದ ಪಶ್ಚಿಮ ಆಫ್ರಿಕಾಕ್ಕೆ ಪ್ರಯಾಣ ಮುಗಿಸಿ ಸಿಂಗಾಪುರ ಮೂಲಕ ಚೀನಾಕ್ಕೆ ಹಿಂದಿರುಗುತ್ತಿತ್ತು. ಫೆಬ್ರವರಿ 2 ರಂದು ಹಡಗು ಸಿಂಗಾಪುರಕ್ಕೆ ಹತ್ತಿರದಲ್ಲಿದ್ದಾಗ ಕೊನೆಯ ಬಾರಿಗೆ ಸಾರ್ಥಕ್ ತನ್ನ ಕುಟುಂಬದೊಂದಿಗೆ ಮಾತನಾಡಿದ್ದನು. ಇದೀಗ ಆತನ ಹಠಾತ್ ಕಣ್ಮರೆಯಿಂದ ಕುಟುಂಬವು ತೀವ್ರವಾಗಿ ದುಃಖಿತವಾಗಿದೆ ಎಂದು ಅವರು ತಿಳಿಸಿದರು.



ಸಾರ್ಥಕ್ ನಾಪತ್ತೆಯಿಂದ ನಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಮಧ್ಯಪ್ರವೇಶಿಸಿ ಮಗನನ್ನು ರಕ್ಷಿಸಿ ಸುರಕ್ಷಿತವಾಗಿ ಮನೆಗೆ ಕರೆತರುವಂತೆ ನಾವು ಒಡಿಶಾ ಸರ್ಕಾರಕ್ಕೆ ಇಮೇಲ್‌ಗಳನ್ನು ಕಳುಹಿಸಿದ್ದೇವೆ ಎಂದು ಅವ್ರು ಹೇಳಿದರು.

ಈ ಕುರಿತು ಅವರು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮೇಲ್ಮನವಿಗಳನ್ನು ಪೋಸ್ಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಡಿಶಾ ಮುಖ್ಯಮಂತ್ರಿ, ಶಿಪ್ಪಿಂಗ್ ಮಹಾನಿರ್ದೇಶಕರು ಮತ್ತು ವಿದೇಶಾಂಗ ಸಚಿವಾಲಯ ಕೂಡ ಹಸ್ತಕ್ಷೇಪ ನಡೆಸುವಂತೆ ತಿಳಿಸಿದರು.

ಮಹಿಳಾ ಅಧಿಕಾರಿ ಮನೆಯಲ್ಲಿ ಸೀಕ್ರೆಟ್‌ ಕ್ಯಾಮೆರಾ ಇಟ್ಟು ಖಾಸಗಿ ವಿಡಿಯೊ ಚಿತ್ರೀಕರಣ; ಬ್ಲ್ಯಾಕ್‌ಮೇಲ್‌ ಮಾಡಿದ 3 ಯೂಟ್ಯೂಬರ್‌ಗಳ ಅರೆಸ್ಟ್‌

ಘಟನೆಯ ಕುರಿತು ಪಾರದರ್ಶಕ ತನಿಖೆ ನಡೆಸಿ ಹಡಗಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿ ತನ್ನ ಮಗ ಮತ್ತು ಆತನ ವಸ್ತುಗಳ ಬಗ್ಗೆ ಮಾಹಿತಿ ನೀಡುವಂತೆ ಅವರು ಕೋರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಒಡಿಶಾ ಸರ್ಕಾರ, ಸಾರ್ಥಕ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ನಾವು ನವದೆಹಲಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಅಲ್ಲದೇ ಘಟನೆಯ ಕುರಿತು ತನಿಖೆ ನಡೆಸುವಂತೆ ವಿನಂತಿಸಿದ್ದೇವೆ ಎಂದು ತಿಳಿಸಿದೆ.