ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naxal Encounter: ಛತ್ತೀಸ್‌ಗಢದಲ್ಲಿ ಮತ್ತೊಂದು ಎನ್‌ಕೌಂಟರ್‌; 25 ಲಕ್ಷ ರೂ. ಇನಾಮು ಹೊಂದಿದ್ದ ಮಹಿಳಾ ನಕ್ಸಲ್‌ ಹತ

ಛತ್ತೀಸ್‌ಗಢದಲ್ಲಿ ಕಳೆದೊಂದು ವಾರದಿಂದ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದೆ. ಇದೀಗ ದಂತೇವಾಡದಲ್ಲಿ ತಲೆಗೆ 25 ಲಕ್ಷ ರೂ. ಇನಾಮು ಹೊಂದಿದ್ದ ಮಹಿಳಾ ನಕ್ಸಲ್‌ ಹತಳಾಗಿದ್ದಾಳೆ ಎಂದು ತಿಳಿದು ಬಂದಿದೆ. ರೇಣುಕಾ ಅಲಿಯಾಸ್ ಬಾನು ಎಂದು ಗುರುತಿಸಲಾದ ಮಹಿಳೆ ಇಂದು ಬೆಳಿಗ್ಗೆ 9 ಗಂಟೆಯಿಂದ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ನಿರಂತರ ಗುಂಡಿನ ಚಕಮಕಿಯಲ್ಲಿ ಹತಳಾಗಿದ್ದಾಳೆ.

ಛತ್ತೀಸ್‌ಗಢದಲ್ಲಿ ಮತ್ತೊಂದು ಎನ್‌ಕೌಂಟರ್‌; ಮಹಿಳಾ ನಕ್ಸಲ್‌ ಹತ

Profile Vishakha Bhat Mar 31, 2025 1:34 PM

ರಾಯ್ಪುರ್‌: ಛತ್ತೀಸ್‌ಗಢದಲ್ಲಿ ಕಳೆದೊಂದು ವಾರದಿಂದ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದೆ. ಇದೀಗ ದಂತೇವಾಡದಲ್ಲಿ ತಲೆಗೆ 25 ಲಕ್ಷ ರೂ. ಇನಾಮು ಹೊಂದಿದ್ದ ಮಹಿಳಾ ನಕ್ಸಲ್‌ ಹತಳಾಗಿದ್ದಾಳೆ (Naxal Encounter) ಎಂದು ತಿಳಿದು ಬಂದಿದೆ. ರೇಣುಕಾ ಅಲಿಯಾಸ್ ಬಾನು ಎಂದು ಗುರುತಿಸಲಾದ ಮಹಿಳೆ ಇಂದು ಬೆಳಿಗ್ಗೆ 9 ಗಂಟೆಯಿಂದ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ನಿರಂತರ ಗುಂಡಿನ ಚಕಮಕಿಯಲ್ಲಿ ಹತಳಾಗಿದ್ದಾಳೆ ಎಂದು ತಿಳಿದು ಬಂದಿದೆ. ಛತ್ತೀಸ್‌ಗಢ-ಕರ್ನಾಟಕ ರಾಜ್ಯ ಗಡಿ ಪ್ರದೇಶಗಳಾದ ದಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿದ್ದ ಜಿಲ್ಲಾ ಮೀಸಲು ಪಡೆ ಹಾಗೂ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ.

ಮೂಲಗಳ ಪ್ರಕಾರ, ಬಾನು ನಕ್ಸಲರ ಮಾಧ್ಯಮ ತಂಡದ ಉಸ್ತುವಾರಿ ವಹಿಸಿದ್ದಳು. ಆಕೆ ತೆಲಂಗಾಣದ ವಾರಂಗಲ್ ಜಿಲ್ಲೆಯ ನಿವಾಸಿಯಾಗಿದ್ದಳು ಎಂದು ತಿಳಿದು ಬಂದಿದೆ. ಎನ್‌ಕೌಂಟರ್ ಸ್ಥಳದಿಂದ ಒಂದು INSAS ರೈಫಲ್ ಜೊತೆಗೆ ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. 2025 ರಲ್ಲಿ ಇಲ್ಲಿಯವರೆಗೆ, ಬಸ್ತಾರ್ ವ್ಯಾಪ್ತಿಯಲ್ಲಿ ವಿವಿಧ ಎನ್‌ಕೌಂಟರ್‌ಗಳಲ್ಲಿ 119 ನಕ್ಸಲರು ಹತರಾಗಿದ್ದಾರೆ.

ಬಸ್ತಾರ್ ಪ್ರದೇಶದ ದಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಕಾಡಿನಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ನಕ್ಸಲೈಟ್ ವಿರೋಧಿ ಕಾರ್ಯಾಚರಣೆಗೆ ಭದ್ರತಾ ಸಿಬ್ಬಂದಿಯ ತಂಡ ಹೊರಟಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ತಿಳಿಸಿದ್ದಾರೆ. ಕಳೆದ ವಾರ, ಛತ್ತೀಸ್‌ಗಢದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರು ಸುಕ್ಮಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉನ್ನತ ನಕ್ಸಲ್ ನಾಯಕನ ಹತ್ಯೆಯನ್ನು ದೃಢಪಡಿಸಿದ್ದರು. ಶನಿವಾರ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಕೆರ್ಲಾಪಾಲ್ ಪ್ರದೇಶದಲ್ಲಿ ನಡೆದ ಪ್ರಮುಖ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು 16 ನಕ್ಸಲರನ್ನು ಹೊಡೆದುರುಳಿಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು. ಎನ್‌ಕೌಂಟರ್ ನಂತರ, ಛತ್ತೀಸ್‌ಗಢ ಉಪಮುಖ್ಯಮಂತ್ರಿ ಅರುಣ್ ಸಾವೊ ಅವರು ಸಶಸ್ತ್ರ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದರು.

ಈ ಸುದ್ದಿಯನ್ನೂ ಓದಿ: PM Modi Chhattisgarh Visit: ಮಾವೋವಾದಕ್ಕೆ ಉತ್ತೇಜನ ನೀಡಿದ್ದೇ ಕಾಂಗ್ರೆಸ್‌ ಆಡಳಿತ: ಛತ್ತೀಸ್‌ಗಢದಲ್ಲಿ ಮೋದಿ ವಾಗ್ದಾಳಿ

ಕಳೆದ ವಾರ ಸುಕ್ಮಾ ಜಿಲ್ಲೆಯಲ್ಲಿ ಎನ್‌ಕೌಂಟರ್‌ ಹಲವು ನಕ್ಸಲರನ್ನು ಭದ್ರತಾಪಡೆಗಳು ಹೊಡೆದುರುಳಿಸಿದ್ದವು. ಆ ಪ್ರದೇಶದಿಂದ ಎಕೆ-47 ರೈಫಲ್‌ಗಳು, ಸೆಲ್ಫ್-ಲೋಡಿಂಗ್ ರೈಫಲ್‌ಗಳು (ಎಸ್‌ಎಲ್‌ಆರ್‌ಗಳು) ಮತ್ತು ಐಎನ್‌ಎಸ್‌ಎಎಸ್ ರೈಫಲ್‌ಗಳು ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಂಡಿದ್ದವು.