ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಮಹಿಳೆಯರನ್ನು ಕೇವಲ ಗೃಹಿಣಿ ಎನ್ನುವುದು ತುಂಬಾ ಸಣ್ಣ ಮಾತು: ಸ್ತ್ರೀಯರ ಘನತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ವೇತನವಿಲ್ಲದೆ ಮನೆಯಲ್ಲಿ ದುಡಿಯುವ ಮಹಿಳೆಯರನ್ನು ಕೇವಲ ಗೃಹಿಣಿಯರೆನ್ನುವುದು ತುಂಬಾ ಸಣ್ಣ ಮಾತು. ಅವರ ನಿಜವಾದ ರಾಷ್ಟ್ರನಿರ್ಮಾಣಕಾರರು. ಅವರ ಕೆಲಸ, ಆರೈಕೆಯನ್ನು ಗುರುತಿಸಬೇಕು. ವೇತನವಿಲ್ಲದೆ ದುಡಿಯುವ ಅವರಿಂದಾಗಿ ಕುಟುಂಬಗಳು ನೆಮ್ಮದಿಯಾಗಿರುತ್ತದೆ, ಭವಿಷ್ಯದ ಪೀಳಿಗೆಯ ನಿರ್ಮಾಣವಾಗುತ್ತದೆ ಎಂದು ಅಪಘಾತ ಪರಿಹಾರ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೇಳಿದೆ.
ಸಂಗ್ರಹ ಚಿತ್ರ -
ನವದೆಹಲಿ: ಗೃಹಿಣಿಯರು (Home makers) ನಡೆಸುವ ಮನೆ ಕೆಲಸ, ಆರೈಕೆಯನ್ನು ಗುರುತಿಸಬೇಕು. ವೇತನವಿಲ್ಲದೆ ದುಡಿಯುವ ಅವರಿಂದಾಗಿ ಕುಟುಂಬಗಳು ಉಳಿಯುತ್ತದೆ, ಭವಿಷ್ಯದ ಪೀಳಿಗೆ ನಿರ್ಮಾಣವಾಗುತ್ತದೆ. ಅವರನ್ನು ಕೇವಲ ಗೃಹಿಣಿಯರು ಎನ್ನುವುದು ತುಂಬಾ ಸಣ್ಣ ಮಾತು. ಅವರು ನಿಜವಾದ ರಾಷ್ಟ್ರ ನಿರ್ಮಾಣಕಾರರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಅಪಘಾತ ಪರಿಹಾರ ಪ್ರಕರಣದ (accident compensation case) ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ, ಮನೆಯಲ್ಲಿರುವ ಮಹಿಳೆಯರನ್ನು ಕೇವಲ ಗೃಹಿಣಿಯರು ಎನ್ನುವುದು ಅವರ ಕೊಡುಗೆಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕರೋಲ್ ನೇತೃತ್ವದ ಪೀಠವು, ಗೃಹಿಣಿಯರನ್ನು ಒಳಗೊಂಡ ಮೋಟಾರ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸುವ ವೇಳೆ ಮಹಿಳೆಯರು ಮನೆಯಲ್ಲಿ ಮಾಡುವ ಕೆಲಸ, ಆರೈಕೆ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಭವಿಷ್ಯದ ಪೀಳಿಗೆಯನ್ನು ಬೆಳೆಸುವಲ್ಲಿ, ಕುಟುಂಬಗಳನ್ನು ಬಲಪಡಿಸುವಲ್ಲಿ ಮತ್ತು ಮಾನವ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಅವರು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾರೆ.
ಮೀನಾಕ್ಷಿ ನಟರಾಜನ್ ರಾಜ್ಯಸಭಾ ಅಭ್ಯರ್ಥಿ ನಾಮಪತ್ರ ತಿರಸ್ಕಾರ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್
ಮಹಿಳೆಯರನ್ನು ಕೇವಲ ಗೃಹಿಣಿ ಎಂದು ಕರೆಯುವ ಬದಲು ರಾಷ್ಟ್ರ ನಿರ್ಮಾಣಕಾರರು ಎಂದು ಕರೆಯಬೇಕು. ಯಾಕೆಂದರೆ ಮನೆಯಲ್ಲಿ ಅವರು ಮಾಡುವ ಕೆಲಸವೂ ಮನೆಯ ನಾಲ್ಕು ಗೋಡೆಗಳನ್ನು ಮೀರಿರುತ್ತದೆ. ಮದುವೆ ಎಂದರೆ ಮನೆ ಕೆಲಸದವಳನ್ನು ನೇಮಿಸಿಕೊಳ್ಳುವುದು ಎಂದರ್ಥವಲ್ಲ ಎಂದು ಹೇಳಿದೆ.
ಮದುವೆ ಎಂದರೆ ಮಹಿಳೆಯು ಮನೆಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಒಂದು ವ್ಯವಸ್ಥೆಯಾಗಿ ನೋಡಬಾರದು. ಮನೆಯ ಜವಾಬ್ದಾರಿಗಳು ಇಬ್ಬರ ನಡುವಿನ ಹಂಚಿಕೆಯ ಬಾಧ್ಯತೆಗಳಾಗಿವೆ. ವಿವಾಹಿತ ಮಹಿಳೆಯ ಆಕಾಂಕ್ಷೆ, ವೃತ್ತಿಪರ ಮಹತ್ವಾಕಾಂಕ್ಷೆಗಳನ್ನು ತ್ಯಾಗ ಮಾಡಲು ಹೇಳಲಾಗುವುದಿಲ್ಲ ಎಂದು ಕೂಡ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಒಬ್ಬ ಮಹಿಳೆ ತನ್ನ ಮಕ್ಕಳಿಗೆ ಸ್ಥಿರ ವಾತಾವರಣ ಕೊಡಿಸಲು ವೃತ್ತಿಜೀವನವನ್ನು ಮುಂದುವರಿಸಲು ಬಯಸಿದರೆ ಅದು ಕೌಟುಂಬಿಕ ಕ್ರೌರ್ಯ ಎಂದು ಅರ್ಥೈಸಲಾಗುವುದಿಲ್ಲ. ಮದುವೆಯಾದ ಬಳಿಕ ಮಹಿಳೆಯ ಗುರುತು ಕೊನೆಗೊಳ್ಳುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ಗೃಹಿಣಿಯರು ಗಮನಾರ್ಹವಾಗಿ ವೈಯಕ್ತಿಕ ತ್ಯಾಗಗಳನ್ನು ಮಾಡುತ್ತಾರೆ. ಆದರೆ ಅದು ಗುರುತಿಸಲ್ಪಡುವುದಿಲ್ಲ. ಅವರು ಕುಟುಂಬದ ಸಂಪತ್ತು ಮತ್ತು ಸ್ಥಿರತೆಗೆ ಗಣನೀಯ ಕೊಡುಗೆ ನೀಡುತ್ತಾರೆ. ಅವರ ಈ ಪ್ರಯತ್ನಗಳನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಸೂಕ್ತವಾಗಿ ಗುರುತಿಸಬೇಕು. ಪತಿ, ಪತ್ನಿ ಜಂಟಿಯಾಗಿ ಸಂಪಾದಿಸಿದ ಕುಟುಂಬದ ಆಸ್ತಿಗಳಲ್ಲಿ ಅವರಿಬ್ಬರಿಗೂ ಸಮಾನ ಅಧಿಕಾರವಿದೆ ಎಂದು ನ್ಯಾಯಾಲಯ ತಿಳಿಸಿದೆ.
ಗೃಹಿಣಿಯರನ್ನು ಒಳಗೊಂಡ ಮೋಟಾರ್ ಅಪಘಾತ ಪ್ರಕರಣಗಳಲ್ಲಿ ಪರಿಹಾರವನ್ನು ನಿರ್ಧರಿಸಲು ನ್ಯಾಯಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದರ ಪ್ರಕಾರ, ಆರ್ಥಿಕ ನಷ್ಟವನ್ನು ಸೀಮಿತಗೊಳಿಸಬಾರದು, ನಷ್ಟವಾಗಿರುವ ಗೃಹ ಆರೈಕೆ ಮತ್ತು ಸೇವೆಗಳ ಮೌಲ್ಯವನ್ನು ಕೂಡ ಲೆಕ್ಕಹಾಕಬೇಕು. ಗೃಹ ಆರೈಕೆಯ ನಷ್ಟದ ಮೌಲ್ಯ ತಿಂಗಳಿಗೆ 30,000 ರೂ. ಎಂದು ನ್ಯಾಯಾಲಯ ನಿಗದಿಪಡಿಸಿದೆ.
ಎಐ ಆಧರಿತ ಡೇಟಾ ಸೆಂಟರ್ ಅಭಿವೃದ್ಧಿಪಡಿಸಲು ರಿಲಯನ್ಸ್-ಮೆಟಾ ಪಾಲುದಾರಿಕೆ
ಮೋಟಾರ್ ಅಪಘಾತ ಪರಿಹಾರ ಪ್ರಕರಣಗಳನ್ನು ಸಕಾಲಿಕ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರು ಮೇಲ್ವಿಚಾರಣೆ ಮಾಡಬೇಕು. ಸಂತ್ರಸ್ತರು ಇದಕ್ಕಾಗಿ ದೀರ್ಘಕಾಲದ ಕಾನೂನು ಹೋರಾಟಗಳಿಗೆ ಒತ್ತಾಯಿಸಲ್ಪಡದಂತೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 169 ರ ಅಡಿಯಲ್ಲಿ ಸೂಚಿಸಲಾದ "ಸಾರಾಂಶ ಕಾರ್ಯವಿಧಾನ"ವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ನಿರ್ದೇಶನ ನೀಡಿದೆ.