Thimmamma Marrimanu: ಬರೋಬ್ಬರಿ 5 ಎಕ್ರೆಯಲ್ಲಿ ಹರಡಿಕೊಂಡಿದೆ ಈ ಮರ; ಮಹಾವೃಕ್ಷದ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇಲ್ಲಿದೆ

ಬೃಹತ್‌ ಮರ ಎಷ್ಟು ಅಗಲವಿರಬಹುದು ಎನ್ನುವುದನ್ನು ಊಹಿಸಿ. ಆದರೆ ನಿಮ್ಮ ಊಹೆಯನ್ನೂ ಮೀರಿದ ಆಲದ ಮರವೊಂದಿದೆ. ಇದೊಂದೇ ಮರ ಬರೋಬ್ಬರಿ 5 ಎಕ್ರೆಯಲ್ಲಿ ವ್ಯಾಪಿಸಿದೆ. ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪುಟ್ಟ ಗ್ರಾಮ ಕದಿರಿಯಲ್ಲಿರುವ ತಿಮ್ಮಮ್ಮ ಮರ‍್ರಿಮಾನು ಎಂಬ ಮರ ಬೃಹತ್‌ ಗಾತ್ರದಿಂದಲೇ ಗಮನ ಸೆಳೆಯುತ್ತಿದೆ. ಇದು ವಿಶ್ವದ ಅತೀ ದೊಡ್ಡ ಆಲದ ಮರ ಎನಿಸಿಕೊಂಡಿದೆ. ಅದೇ ರೀತಿ ಬೆಂಗಳೂರಿನಲ್ಲೂ ಬೃಹತ್‌ ಆಲದ ಮರವಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕೇತೋಹಳ್ಳಿಯಲ್ಲಿರುವ ಇದು ಭಾರತದ ಪುರಾತನ ಆಲದ ಮರಗಳಲ್ಲೇ 4ನೇ ಸ್ಥಾನ ಪಡೆದಿದೆ.

Thimmamma Marrimanu
Profile Ramesh B Feb 5, 2025 2:05 PM

ಹೈದರಾಬಾದ್‌: ಒತ್ತೊತ್ತಾಗಿ ಮರಗಳು ಬೆಳೆದಿರುವ ಕಾಡನ್ನು ನೀವೆಲ್ಲ ನೋಡಿರುತ್ತೀರಿ. ಸೂರ್ಯ ರಶ್ಮಿ ನೆಲಕ್ಕೆ ಸೋಕದಷ್ಟು ದಟ್ಟವಾಗಿ ಮರಗಳಿಂದ ಕೂಡಿರುವ ಅರಣ್ಯದ ಬಗ್ಗೆಯೂ ನಿಮಗೆ ಗೊತ್ತಿರಬಹುದು. ಆದರೆ ಒಂದೇ ಒಂದು ಮರ ಬರೋಬ್ಬರಿ 5 ಎಕ್ರೆಯಲ್ಲಿ ವ್ಯಾಪ್ತಿಯಲ್ಲಿ ವಿಸ್ತಾರವಾಗಿ ಹರಡಿರುವುದನ್ನು ಕೇಳಿದ್ದೀರಾ? ಹೌದು, ಇದು ಕಲ್ಪನೆಯಲ್ಲ ಅಥವಾ ಇದು ಅಸಾಧ್ಯ ಎಂದು ನೀವು ಮೂಗು ಮುರಿಯುವಂತಿಲ್ಲ (World’s largest banyan tree). ಇಂತಹ ವಿಸ್ಮಯಕಾರಿ ಮರ ಭಾರತದಲ್ಲೇ ಇದೆ. ಈ ಪ್ರಕೃತಿ ಸೋಜಿಗದ ವಿವರ ಇಲ್ಲಿದೆ.

ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪುಟ್ಟ ಗ್ರಾಮ ಕದಿರಿ ಇಂತಹದ್ದೊಂದು ಅಚ್ಚರಿಯನ್ನು ತನ್ನೊಡಲಲ್ಲಿ ಹೊತ್ತುಕೊಂಡು ಹೆಮ್ಮೆಯಿಂದ ತಲೆ ಎತ್ತಿ ನಿಂತುಕೊಂಡಿದೆ. ತಿಮ್ಮಮ್ಮ ಮರ‍್ರಿಮಾನು (ತಿಮ್ಮಮ್ಮ ಆಲದ ಮರ) ಎಂದು ಕರೆಯಲ್ಪಡುವ ಆಲದ ಮರದ ಕೊಂಬೆಗಳು ವಿವಿಧ ಕಡೆಗೆ ಚಾಚಿಕೊಂಡು ಪರಿಸರ ಪ್ರೇಮಿಗಳು ಮತ್ತು ವಿಜ್ಞಾನಿಗಳನ್ನು ಕೈಬೀಸಿ ಕರೆಯುತ್ತಿದೆ (Thimmamma Marrimanu). ವಿಶೇಷ ಎಂದರೆ ಜಗತ್ತಿನ ಅತೀ ದೊಡ್ಡ ಆಲದ ಮರ ಎನ್ನುವ ಖ್ಯಾತಿಯೂ ಇದಕ್ಕಿದೆ. ಈ ಮರದ ವರ್ಷ, ಇತಿಹಾಸ, ವೈಶಿಷ್ಟ್ಯಗಳ ವಿವರ ಇಲ್ಲಿದೆ.

5 ಎಕ್ರೆ ವ್ಯಾಪ್ತಿ!

ನೀವು ಈ ಮರದ ಬುಡದಲ್ಲಿ ನಿಂತಾಗ ಇದರ ಅಗಾಧ ಗಾತ್ರ ಗಮನಕ್ಕೆ ಬರುತ್ತದೆ. ಸುಮಾರು 4 ಫುಟ್ಬಾಲ್‌ ಮೈದಾನ ಅಂದರೆ 5 ಎಕ್ರೆ ವ್ಯಾಪ್ತಿಯಲ್ಲಿ ಇದು ಹರಡಿಕೊಂಡಿದೆ. ಇದರ ಕೊಂಬೆಗಳು ಮತ್ತು ಎಲೆಗಳು ಗ್ರಾಮದ ಎಲ್ಲೆಡೆ ಕಂಡು ಬರುತ್ತಿದೆ. ಫೋರ್ಬ್ಸ್ ವರದಿಯ ಪ್ರಕಾರ, ಈ ಬೃಹತ್ ಆಲದ ಮರವು 19,107 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ಇದು ಆವರಿಸಿರುವ ಪ್ರದೇಶದ ದೃಷ್ಟಿಯಿಂದ ವಿಶ್ವದ ಅತಿದೊಡ್ಡ ಮರ ಎನಿಸಿಕೊಂಡಿದೆ. ಕ್ಯಾಲಿಫೋರ್ನಿಯಾದ ಜನರಲ್ ಶೆರ್ಮನ್ ಮರವು ಅದರ ಗಾತ್ರದಿಂದಲೇ ಗಮನ ಸೆಳೆದರೂ, ತಿಮ್ಮಮ್ಮ ಮರ‍್ರಿಮಾನುವಿನ ಕೊಂಬೆಗಳ ವಿಸ್ತಾರದ ಮುಂದೆ ಸಣ್ಣದೆನಿಕೊಳ್ಳುತ್ತದೆ.

ಆಲದ ಮರವು ಎಷ್ಟು ಎತ್ತರ ಅಥವಾ ದಪ್ಪವಾಗಿದೆ ಎನ್ನುವುದಕ್ಕಿಂತ ಹೇಗೆ ಹರಡುತ್ತದೆ ಎಂಬುದೇ ವಿಶೇಷ. ಒಂದು ಮುಖ್ಯ ಕಾಂಡದಿಂದ ಮೇಲಕ್ಕೆ ಬೆಳೆಯುವ ಬದಲು, ಅದು ಅಗಲವಾಗಿ ಹರಡುತ್ತದೆ. ಅದು ತನ್ನ ಕೊಂಬೆಗಳಿಂದ ನೇತಾಡುವ ಬಿಳಲುಗಳನ್ನು ನೆಲಕ್ಕೆ ಇಳಿಸುತ್ತದೆ. ಈ ಬೇರುಗಳು ನೆಲವನ್ನು ತಲುಪಿದಾಗ, ಅವು ಹೊಸ ಕಾಂಡಗಳಾಗಿ ಬೆಳೆಯುತ್ತವೆ. ಈ ಕಾಂಡ ಮತ್ತೆ ಬಿಳಲು ಹರಡುತ್ತದೆ. ಇದು ಮರವು ಅಗಲವಾಗಿ ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಈ ವಿಶಿಷ್ಟ ಬೆಳೆಯುವ ವಿಧಾನವೇ ಅದು ಇಷ್ಟು ದೊಡ್ಡ ಪ್ರದೇಶವನ್ನು ಆವರಿಸಲು ಕಾರಣವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.

ಯಾಕಾಗಿ ಈ ಹೆಸರು ಬಂತು?

ಈ ಆಲದ ಮರಕ್ಕೆ ತಿಮ್ಮಮ್ಮ ಮರ‍್ರಿಮಾನು ಎನ್ನುವ ಹೆಸರು ಬರಲು ಕುತೂಹಲಕಾರಿ ಹಿನ್ನೆಲೆ ಇದೆ. ಇಲ್ಲಿ ವಾಸಿಸುತ್ತಿದ್ದ ಪ್ರಭಾವಿಯೊಬ್ಬರ ಕಾರಣದಿಂದ ಮರಕ್ಕೆ ಈ ಹೆಸರು ಬಂತು ಎನ್ನುತ್ತಾರೆ ಸ್ಥಳೀಯರು. 15ನೇ ಶತಮಾನದಲ್ಲಿ ಇಲ್ಲಿ ತಿಮ್ಮಮ್ಮ ಎನ್ನುವ ಮಹಿಳೆ ಇದ್ದರಂತೆ. ಪತಿ ನಿಧನ ಹೊಂದಿದಾಗ ತಿಮ್ಮಮ್ಮ ಕೂಡ ಅಂದಿನ ಸತಿ ಸಹಗಮನ ಪದ್ಧತಿಯಂತೆ ಚಿತೆಗೆ ಹಾರಿ ಪ್ರಾಣ ಅರ್ಪಿಸಿದ್ದರಂತೆ. ಅವರ ಚಿತೆಗೆ ಬಳಸಲಾದ ಮರದ ಕಂಬಗಳ ಪೈಕಿ ಒಂದರಿಂದ ಒಂದು ಸಣ್ಣ ಸಸಿ ಮೊಳಕೆಯೊಡೆಯಿತು. ಆ ಸಣ್ಣ ಸಸಿ ಇಂದು ಬೃಹತ್ ಆಲದ ಮರವಾಗಿ ಬೆಳೆದಿದೆ ಎನ್ನುತ್ತಾರೆ ಹಿರಿಯರು.

ಈ ದಂತಕಥೆಯ ಕಾರಣದಿಂದ ಸ್ಥಳೀಯ ಸಮುದಾಯಕ್ಕೆ ಈ ಮರವನ್ನು ಬಹಳ ಪೂಜ್ಯನೀಯ ಭಾವದಿಂದ ನೋಡುತ್ತಾರೆ. ಜನರು ತಿಮ್ಮಮ್ಮ ಮರ‍್ರಿಮಾನುವನ್ನು ಭಕ್ತಿ ಮತ್ತು ತ್ಯಾಗದ ಸಂಕೇತವಾಗಿ ಪರಿಗಣಿಸುತ್ತಾರೆ. ಅನೇಕರು ಮರದ ಬಳಿಗೆ ಬಂದ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಸಂತಾನ ಭಾಗ್ಯವಿಲ್ಲದ ದಂಪತಿ ಇಲ್ಲಿಗೆ ಭೇಟಿ ನೀಡಿ ಮನಸಾರೆ ಪ್ರಾರ್ಥಿಸಿದರೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆ ಇದೆ. ಜತೆಗೆ ಅದರ ಕೊಂಬೆ, ಎಲೆ ಕೀಳುವುದರಿಂದ ಕೆಡುಕುಂಟಾಗುತ್ತದೆ ಎನ್ನುವ ಭಯವೂ ‍ಸ್ಥಳೀಯರಲ್ಲಿದೆ.

ಪರಿಸರಕ್ಕೆ ಬಹುದೊಡ್ಡ ಕೊಡುಗೆ

ಮರ್ರಿಮಾನು ತನ್ನ ಗಾತ್ರದ ಕಾರಣದಿಂದ ಮಾತ್ರವಲ್ಲ ಪರಿಸರಕ್ಕೆ ನೀಡುವ ಕೊಡುಗೆಯಿಂದಲೂ ಬಹು ಮುಖ್ಯ ಎನಿಸಿಕೊಂಡಿದೆ. ಪರಿಸರ ಸಮತೋಲನದಲ್ಲಿ ಆಲದ ಮರಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳ ಶಕ್ತಿಯುತ ಬೇರುಗಳು ಮಣ್ಣಿನ ಸವಕಳಿಯನ್ನು ತಪ್ಪಿಸುತ್ತವೆ, ವಿಶಾಲವಾಗಿ ಹರಡಿರುವ ಕೊಂಬೆಗಳು ಅದೆಷ್ಟೋ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ಒಡಗಿಸುತ್ತವೆ. ಜತೆಗೆ ಇದರ ಹಣ್ಣನ್ನು ಆಹಾರವಾಗಿಯೂ ಹಲವು ಜೀವಿಗಳು ಬಳಸುತ್ತವೆ. ಚಂಡ ಮಾರುತ, ಹವಾಮಾನ ವೈಪರೀತ್ಯಗಳನ್ನು ಎದುರಿಸಿ ಹಲವು ವರ್ಷಗಳಿಂದ ಗಟ್ಟಿಯಾಗಿ ನಿಂತಿರುವ ತಿಮ್ಮಮ್ಮ ಇನ್ನೂ ಬೆಳೆಯುತ್ತಲೇ ಇದೆ.

ಈ ಸುದ್ದಿಯನ್ನೂ ಓದಿ: Global Firepower Index 2025: ಜಾಗತಿಕ ಟಾಪ್ 10 ಸೇನಾ ವ್ಯವಸ್ಥೆಯಲ್ಲಿ ಭಾರತಕ್ಕೆ 5ನೇ ಸ್ಥಾನ

ಇದರ ವರ್ಷ ಎಷ್ಟು ಗೊತ್ತೆ?

ತಿಮ್ಮಮ್ಮ ಮರ‍್ರಿಮಾನು ಮರಕ್ಕೆ ಈಗ 550 ವರ್ಷ ಎಂದು ಅಂದಾಜಿಸಲಾಗಿದೆ. ಅಸಂಖ್ಯಾತ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಗಟ್ಟಿಯಾಗಿ ನಿಂತು ಈಗಲೂ ಬೆಳೆಯುತ್ತಿರುವ ಈ ಮರ ಹಲವರಿಗೆ ಸ್ಫೂರ್ತಿಯೂ ಹೌದು. ಒಟ್ಟಿನಲ್ಲಿ ತಿಮ್ಮಮ್ಮ ಮರ‍್ರಿಮಾನು ವಿಶ್ವದ ಅತಿದೊಡ್ಡ ಆಲದ ಮರ ಮಾತ್ರವಲ್ಲ, ಸ್ಥಿತಿಸ್ಥಾಪಕತ್ವ, ಸಹಿಷ್ಣುತೆ ಮತ್ತು ಆಧ್ಯಾತ್ಮಿಕ ಮಹತ್ವದ ಸಂಕೇತವೂ ಆಗಿದೆ. ಅದರ ವಿಶಾಲವಾದ ಮೇಲಾವರಣ, ಆಕರ್ಷಕ ಬೆಳವಣಿಗೆಯ ಪ್ರಕ್ರಿಯೆ ಮತ್ತು ಸ್ಥಳೀಯ ದಂತಕಥೆಗಳೊಂದಿಗೆ ಇದು ನೈಸರ್ಗಿಕ ಅದ್ಭುತವಾಗಿ ನಿಂತಿದೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?