ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yeshu Yeshu Prophet: ಲೈಂಗಿಕ ಕಿರುಕುಳ ಪ್ರಕರಣ; ಯೇಶು ಯೇಸು ಪ್ರವಾದಿ ದೋಷಿ ಎಂದು ತೀರ್ಪು ಪ್ರಕಟ

ಯೇಶು ಯೇಸು ಪ್ರವಾದಿ' ಎಂದೇ ಜನಪ್ರಿಯರಾಗಿರುವ ಪಂಜಾಬ್‌ನ ಸ್ವಯಂ ಘೋಷಿತ ಕ್ರಿಶ್ಚಿಯನ್ ಪಾದ್ರಿ ಬಜಿಂದರ್ ಸಿಂಗ್ 2018 ರ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಶುಕ್ರವಾರ ಸಾಬೀತಾಗಿದೆ. ಪಂಜಾಬ್‌ನ ಜಿರಾಕ್‌ಪುರದ ಮಹಿಳೆಯೊಬ್ಬರು ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಯೇಶು ಯೇಸು ಪ್ರವಾದಿ ಬಂಧನ

Profile Vishakha Bhat Mar 28, 2025 4:08 PM

ಚಂಡೀಗಢ: ಯೇಶು ಯೇಸು ಪ್ರವಾದಿ' (Yeshu Yeshu Prophet) ಎಂದೇ ಜನಪ್ರಿಯರಾಗಿರುವ ಪಂಜಾಬ್‌ನ ಸ್ವಯಂ ಘೋಷಿತ ಕ್ರಿಶ್ಚಿಯನ್ ಪಾದ್ರಿ ಬಜಿಂದರ್ ಸಿಂಗ್ 2018 ರ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಶುಕ್ರವಾರ ಸಾಬೀತಾಗಿದೆ. ಪಂಜಾಬ್‌ನ ಜಿರಾಕ್‌ಪುರದ ಮಹಿಳೆಯೊಬ್ಬರು ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 42 ವರ್ಷದ ಸಿಂಗ್ ಲಂಡನ್‌ಗೆ ಪ್ರಯಾಣಿಸುತ್ತಿದ್ದಾಗ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಸದಾ ವಿವಾದಗಳಿಂದಲೇ ಯೇಶು ಯೇಸು ಪ್ರವಾದಿ ಗುರುತಿಸಿಕೊಂಡಿದ್ದಾನೆ.

ಫೆಬ್ರವರಿ 28 ರಂದು, 22 ವರ್ಷದ ಮಹಿಳೆಯ ದೂರಿನ ಆಧಾರದ ಮೇಲೆ ಸ್ವಯಂ ಘೋಷಿತ ಪಾದ್ರಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಯಿತು. ತನ್ನ ದೂರಿನಲ್ಲಿ, ಮಹಿಳೆ ತನ್ನ ಹೆತ್ತವರೊಂದಿಗೆ ಅಕ್ಟೋಬರ್ 2017 ರಲ್ಲಿ ಯೇಶು ಯೇಸು ಪ್ರವಾದಿ ಚರ್ಚ್‌ಗೆ ತೆರಳಿದ್ದಳು. ನಂತರ ಪಾದ್ರಿ ಆಕೆಯ ನಂಬರ್‌ ತೆಗೆದುಕೊಂಡು ಆಕೆಗೆ ದಿನನಿತ್ಯ ಸಂದೇಶ ಕಳುಹಿಸುತ್ತಿದ್ದ. ಸಿಂಗ್‌ಗೆ ಹೆದರಿ ತನ್ನ ಪೋಷಕರಿಗೆ ಅದರ ಬಗ್ಗೆ ಹೇಳಲಿಲ್ಲ ಎಂದು ಆಕೆ ಆರೋಪಿಸಿದ್ದಾಳೆ. 2022 ರಿಂದ, ಪಾದ್ರಿ ಭಾನುವಾರಗಳಂದು ಚರ್ಚ್‌ನ ಕ್ಯಾಬಿನ್‌ನಲ್ಲಿ ಅವಳನ್ನು ಒಂಟಿಯಾಗಿ ಇರಿಸಿಕೊಂಡು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪಾದ್ರಿ ಅವಳನ್ನು ತಬ್ಬಿಕೊಂಡು ಅನುಚಿತವಾಗಿ ಸ್ಪರ್ಶಿಸುತ್ತಿದ್ದನು. ತನ್ನ ವಿರುದ್ಧ ದೂರು ದಾಖಲಿಸಿದರೆ ತನ್ನನ್ನು ಮತ್ತು ತನ್ನ ಕುಟುಂಬ ಸದಸ್ಯರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. 2022 ರಲ್ಲಿ, ಸಿಂಗ್ ತಮ್ಮ ಮಗಳ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ದೆಹಲಿಯ ಕುಟುಂಬದಿಂದ ಹಣ ಪಡೆದ ಆರೋಪ ಮಾಡಲಾಗಿತ್ತು. 2023 ರಲ್ಲಿ, ಆದಾಯ ತೆರಿಗೆ ಇಲಾಖೆ ಚರ್ಚ್‌ ಮೇಲೆ ದಾಳಿ ನಡೆಸಿತ್ತು.

ಈ ಸುದ್ದಿಯನ್ನೂ ಓದಿ: 2036 Olympics : ಅತ್ಯಾಚಾರ ಅಪರಾಧಿ ಅಸಾರಾಂ ಬಾಪು ಆಶ್ರಮದ ಭೂಮಿ ಒಲಂಪಿಕ್ಸ್‌ಗೆ ಬಳಕೆ? ಗುಜರಾತ್‌ ಸರ್ಕಾರದ ಹೇಳಿದ್ದೇನು?

ಕೆಲ ದಿನಗಳ ಹಿಂದೆ ಬಜಿಂದರ್ ಸಿಂಗ್ ಪಂಜಾಬ್‌ನ ಮೊಹಾಲಿಯಲ್ಲಿರುವ ತಮ್ಮ ಕಚೇರಿಯಲ್ಲಿ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿ, ಕುತ್ತಿಗೆ ಹಿಸುಕುತ್ತಿರುವುದನ್ನು ತೋರಿಸಿದ ವೀಡಿಯೊ ವೈರಲ್ ಆಗಿತ್ತು. ಕಳೆದ ಎರಡು ದಿನದ ಹಿಂದೆ , 35 ವರ್ಷದ ಮಹಿಳೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ನೀಡಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಗಳಂತೆ ಕಾಣುತ್ತಿದ್ದ ಈ ವೀಡಿಯೊದಲ್ಲಿ, ಸಿಂಗ್ ಮೊದಲು ಮಹಿಳೆಯೊಂದಿಗೆ ವಾಗ್ವಾದ ನಡೆಸಿ, ಆಕೆಯ ಮೇಲೆ ಕಾಗದಗಳ ಗುಂಪನ್ನು ಎಸೆದು, ನಂತರ ಆಕೆಗೆ ಕಪಾಳಮೋಕ್ಷ ಮಾಡುವುದು ಕಂಡು ಬಂದಿತ್ತು.