ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗುರುದ್ವಾರ ಪ್ರವೇಶಿಸಲು ಕ್ರಿಶ್ಚಿಯನ್ ಸೇನಾ ಅಧಿಕಾರಿ ನಿರಾಕರಣೆ; ತರಾಟೆಗೆ ತೆಗದುಕೊಂಡ ಸುಪ್ರೀಂ ಕೋರ್ಟ್‌!

ರೆಜಿಮೆಂಟ್‌ನ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ನಿರಾಕರಿಸಿದ ಕ್ರಿಶ್ಚಿಯನ್ ಸೇನಾ ಅಧಿಕಾರಿಯ ವಜಾವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಸೇನೆಯು ಒಂದು ಸಂಸ್ಥೆಯಾಗಿ ಜಾತ್ಯತೀತವಾಗಿದೆ ಮತ್ತು ಅದರ ಶಿಸ್ತಿನಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

ಸುಪ್ರೀಂ ಕೋರ್ಟ್‌ (ಸಾಂದರ್ಭಿಕ ಚಿತ್ರ)

ನವದೆಹಲಿ: ರೆಜಿಮೆಂಟ್‌ನ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ನಿರಾಕರಿಸಿದ ಕ್ರಿಶ್ಚಿಯನ್ ಸೇನಾ (Christian Army Officer) ಅಧಿಕಾರಿಯ ವಜಾವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ. ಸೇನೆಯು ಒಂದು ಸಂಸ್ಥೆಯಾಗಿ ಜಾತ್ಯತೀತವಾಗಿದೆ ಮತ್ತು ಅದರ ಶಿಸ್ತಿನಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ. ಗುರುದ್ವಾರ ಪ್ರವೇಶಿಸಲು ಒತ್ತಾಯಿಸುವುದು ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂಬ ವಾದವನ್ನು ಮುಂದಿಟ್ಟುಕೊಂಡು ಅಧಿಕಾರಿ ಅಮಾನತು ಕ್ರಮವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಇದೀಗ ನ್ಯಾಯಾಲಯವು ಅವರ ನಡವಳಿಕೆಯು ಕಾನೂನುಬದ್ಧ ಆಜ್ಞೆಯ ಅವಿಧೇಯತೆಗೆ ಸಮಾನವಾಗಿದೆ ಎಂದು ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಅಧಿಕಾರಿ ಸ್ಯಾಮ್ಯುಯೆಲ್ ಕಮಲೇಶನ್ ಅವರನ್ನು ಸೇವೆಯಿಂದ ವಜಾಗೊಳಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಅವರು ಯಾವ ರೀತಿಯ ಸಂದೇಶವನ್ನು ರವಾನಿಸುತ್ತಿದ್ದಾರೆ? ಸೇನಾ ಅಧಿಕಾರಿಯೊಬ್ಬರು ಅಶಿಸ್ತು ತೋರಿಸುತ್ತಿದ್ದಾರೆ. ಅವರನ್ನು ವಜಾಗೊಳಿಸಬೇಕಿತ್ತು. ಈ ರೀತಿಯ ಹಿಂಸಾತ್ಮಕ ವ್ಯಕ್ತಿಗಳು ಮಿಲಿಟರಿಯಲ್ಲಿರಲು ಅರ್ಹರೇ?" ಎಂದು ನೂತನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠ ಸ್ಯಾಮ್ಯುಯೆಲ್ ಕಮಲೇಶನ್ ಅವರ ಅರ್ಜಿಯನ್ನು ವಜಾಗೊಳಿಸಿರುವುದಾಗಿ ಹೇಳಿತು.

ಮಸೂದೆ ಅಂಗೀಕರಿಸಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಕಾಲಮಿತಿ ಇಲ್ಲ; ಸುಪ್ರೀಂ ಕೋರ್ಟ್‌ ಖಡಕ್‌ ಆದೇಶ

ಅಧಿಕಾರಿಯ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ನ್ಯಾಯಾಲಯದ ಎದುರು ವಾದ ನಡೆಸಿ, ಹೆಚ್ಚಿನ ರೆಜಿಮೆಂಟಲ್ ಪ್ರಧಾನ ಕಚೇರಿಗಳಲ್ಲಿ ಸರ್ವಧರ್ಮ ಸ್ಥಳವಿದೆ, ಆದರೆ, ಪಂಜಾಬ್‌ನ ಮಾಮುಮ್‌ನಲ್ಲಿ ಮಾತ್ರ ದೇವಾಲಯ ಮತ್ತು ಗುರುದ್ವಾರವಿದೆ ಎಂದು ವಾದಿಸಿದರು. ಅಧಿಕಾರಿ ಗರ್ಭಗುಡಿಯನ್ನು ಪ್ರವೇಶಿಸುವುದು ನನ್ನ ನಂಬಿಕೆಗೆ ವಿರುದ್ಧವಾಗಿದೆ ಎಂದು ಹೇಳಿ ದೇವಾಲಯವನ್ನು ಪ್ರವೇಶಿಸಲು ನಿರಾಕರಿಸಿದರು. ನಾನು ಹೊರಗಿನಿಂದ ಹೂವುಗಳನ್ನು ಅರ್ಪಿಸುತ್ತೇನೆ ಆದರೆ ಒಳಗೆ ಹೋಗುವುದಿಲ್ಲ ಎಂದು ಉನ್ನತ ಅಧಿಕಾರಿಗಳ ಬಳಿ ಹೇಳಿದ್ದರು. ಆದ ಒಬ್ಬ ಉನ್ನತ ಅಧಿಕಾರಿ ಮಾತ್ರ ಇದಕ್ಕೆ ಒಪ್ಪದೆ ಅಮಾನತು ಆದೇಶ ಹೊರಡಿಸಿದರು ಎಂದು ಕೋರ್ಟ್‌ನಲ್ಲಿ ವಾದ ಮಂಡಿಸಲಾಗಿತ್ತು.

3 ನೇ ​​ಕ್ಯಾವಲ್ರಿ ರೆಜಿಮೆಂಟ್‌ನಲ್ಲಿ ಈ ಹಿಂದೆ ಲೆಫ್ಟಿನೆಂಟ್ ಆಗಿದ್ದ ಕಮಲೇಶನ್ ಅವರನ್ನು ಮಿಲಿಟರಿ ಶಿಸ್ತನ್ನು ಧಿಕ್ಕರಿಸಿದ್ದಕ್ಕಾಗಿ ವಜಾಗೊಳಿಸಲಾಗಿದೆ. ಪೂಜೆ ನಡೆಸಲು ದೇವಾಲಯದ ಗರ್ಭಗುಡಿ ಪ್ರವೇಶಿಸಲು ಅವರು ತಮ್ಮ ಉನ್ನತ ಅಧಿಕಾರಿಯ ಆದೇಶವನ್ನು ನಿರಾಕರಿಸಿದ್ದರು. ಇದು ಅವರ ಏಕದೇವತಾವಾದಿ ಕ್ರಿಶ್ಚಿಯನ್ ನಂಬಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೋರ್ಟ್‌ ಎದುರು ಹೇಳಲಾಗಿತ್ತು. ಇದೀಗ ಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿದೆ.