ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yusuf Pathan: ಬಂಗಾಳ ಹೊತ್ತಿ ಇರಿಯುತ್ತಿರುವಾಗಲೇ "ಗುಡ್‌ ಚಾಯ್‌" ಎಂದು ಪೋಸ್‌ ಕೊಟ್ಟ ಯೂಸುಫ್ ಪಠಾಣ್

ವಕ್ಫ್ (ತಿದ್ದುಪಡಿ) ಕಾಯ್ದೆಯ ಹಿಂಸಾಚಾರ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದಿದ್ದೆ. ಈ ವರೆಗೆ ಬಂಗಾಳದಲ್ಲಿ ಮೂವರು ಮೃತಪಟಿದ್ದಾರೆ. ಇದೀಗ ಹಿಂಸಾಚಾರದಿಂದಾಗಿ ಬಂಗಾಳದ ಮುರ್ಷಿದಾಬಾದ್ ಕುದಿಯುತ್ತಿರುವಾಗ, ಸ್ಥಳೀಯ ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ವಿಶ್ರಾಂತಿ ಪಡೆಯುತ್ತಾ ಚಹಾ ಸೇವಿಸುತ್ತಿರುವ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಾಗಿ ಟೀಕೆಗೆ ಗುರಿಯಾಗಿದ್ದಾರೆ.

ಬಂಗಾಳ ಹಿಂಸಾಚಾರ ನಡುವೆ ಗುಡ್‌ ಚಾಯ್‌ ಎಂದು ಪೋಸ್‌ ಕೊಟ್ಟ ಯೂಸುಫ್ ಪಠಾಣ್

-

Vishakha Bhat Vishakha Bhat Apr 13, 2025 12:04 PM

ಕೊಲ್ಕತ್ತಾ: ವಕ್ಫ್ (ತಿದ್ದುಪಡಿ) ಕಾಯ್ದೆಯ ಹಿಂಸಾಚಾರ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದಿದ್ದೆ. ಈ ವರೆಗೆ ಬಂಗಾಳದಲ್ಲಿ ಮೂವರು ಮೃತಪಟಿದ್ದಾರೆ. ಇದೀಗ ಹಿಂಸಾಚಾರದಿಂದಾಗಿ ಬಂಗಾಳದ ಮುರ್ಷಿದಾಬಾದ್ ಕುದಿಯುತ್ತಿರುವಾಗ, ಸ್ಥಳೀಯ ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ವಿಶ್ರಾಂತಿ ಪಡೆಯುತ್ತಾ ಚಹಾ ಸೇವಿಸುತ್ತಿರುವ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಾಗಿ ಟೀಕೆಗೆ ಗುರಿಯಾಗಿದ್ದಾರೆ. ಪಠಾಣ್ ಅವರ ಕ್ಷೇತ್ರದ ಭಾಗವಾಗಿಲ್ಲದಿದ್ದರೂ, ಮುರ್ಷಿದಾಬಾದ್ ಅವರ ಪಕ್ಕದ ಕ್ಷೇತ್ರವೇ ಆಗಿದೆ. ಸಂಸದ ಈ ಪೋಸ್ಟ್‌ನನ್ನು ಶೇರ್‌ ಮಾಡಿದ ಕೂಡಲೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳ ಹಿಂದೆ ಶ್ರೀ ಪಠಾಣ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದರು, ಅದರಲ್ಲಿ ಅವರು ಒಳ್ಳೆಯ ಚಹಾ ಮತ್ತು ಶಾಂತ ಪರಿಸರ ಈ ಕ್ಷಣದಲ್ಲಿ ಮುಳುಗಿದ್ದೇನೆ" ಎಂಬ ಶೀರ್ಷಿಕೆಯೊಂದಿಗೆ ಶೇರ್‌ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ, ಮುರ್ಷಿದಾಬಾದ್ ಹಿಂಸಾಚಾರದಿಂದಾಗಿ ಉದ್ವಿಗ್ನಗೊಂಡಿದ್ದ ಸಮಯದಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಪೋಸ್ಟ್‌ನನ್ನು ಟೀಕಿಸಿದ್ದಾರೆ. ಒಬ್ಬ ಬಳಕೆದಾರ ಕಮೆಂಟ್‌ ಮಾಡಿ, ನಿಮಗೆ ಏನಾದರೂ ನಾಚಿಕೆ ಇದೆಯೆ? ಎಂದು ಕೇಳಿದ್ದಾರೆ.

ತೃಣಮೂಲ ಸಂಸದರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಮಮತಾ ಬ್ಯಾನರ್ಜಿ ಸರ್ಕಾರವು ಹಿಂಸಾಚಾರವನ್ನು ಪ್ರೋತ್ಸಾಹಿಸುತ್ತಿದೆ. ಸಂಸದ ಯೂಸುಫ್ ಪಠಾಣ್ ಚಹಾ ಹೀರುತ್ತಾ ಹಿಂದೂಗಳ ಹತ್ಯೆಯನ್ನು ಸಂತಸಿಸುತ್ತಿದ್ದಾರೆ. ಹಿಂದೂಗಳ ರಕ್ತ ಹರಿಯುತ್ತಿರುವಾಗ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಇದು ಟಿಎಂಸಿ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಲ್ಲ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.ಎಡಪಕ್ಷಗಳ ಬೆಂಬಲಿಗರು ಕೂಡ ಯೂಸುಫ್ ಪಠಾಣ್ ಅವರ ಪೋಸ್ಟ್‌ಗೆ ಟೀಕೆ ಮಾಡಿದ್ದಾರೆ. ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ನಂತರ ಉತ್ತರ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲು ಕಲ್ಕತ್ತಾ ಹೈಕೋರ್ಟ್ ನಿನ್ನೆ ಆದೇಶಿಸಿದೆ.



ಈ ಸುದ್ದಿಯನ್ನೂ ಓದಿ: West Bengal Violence: ಪಶ್ಚಿಮ ಬಂಗಾಳದಲ್ಲಿ ಭಾರೀ ಹಿಂಸಾಚಾರ; ರೈಲಿಗೆ ಕಲ್ಲು ತೂರಾಟ- ಕಚ್ಚಾ ಬಾಂಬ್‌ ಎಸೆದು ಅಟ್ಟಹಾಸ

ಮುರ್ಷಿದಾಬಾದ್ ಜಿಲ್ಲೆಯ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಕಲ್ಕತ್ತಾ ಹೈಕೋರ್ಟ್ ನೀಡಿದ ನಿರ್ದೇಶನವನ್ನು ರಾಜ್ಯಪಾಲ ಸಿ.ವಿ. ಆನಂದ ಬೋಸ್ ಶನಿವಾರ ರಾತ್ರಿ ಶ್ಲಾಘಿಸಿದ್ದಾರೆ. ಮುರ್ಷಿದಾಬಾದ್ ಸೇರಿದಂತೆ ಬಂಗಾಳದ ಗಲಭೆ ಪೀಡಿತ ಪ್ರದೇಶಗಳಲ್ಲಿ ಸಿಎಪಿಎಫ್ ನಿಯೋಜಿಸುವ ಬಗ್ಗೆ ನನಗೆ ತಿಳಿಸಲಾಗಿದೆ. ಕಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶಿಸಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ನೀಡಿದೆ ಎಂದು ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.