ಅಂತರನಗರ ಬಸ್‌ಗಳಲ್ಲಿ ಪ್ರಯಾಣಿಕರು ಬಿಟ್ಟು ಹೋದ ವಸ್ತುಗಳ ಕುರಿತು ಫ್ಲಿಕ್ಸ್‌ಬಸ್ ಇಂಡಿಯಾದ ಲಾಸ್ಟ್ & ಫೌಂಡ್ ವಿಶ್ಲೇಷಣೆ
ಫ್ಲಿಕ್ಸ್‌ಬಸ್ ಇಂಡಿಯಾದ ಲಾಸ್ಟ್ & ಫೌಂಡ್ ವಿಶ್ಲೇಷಣೆಯಲ್ಲಿ ಚಾರ್ಜರ್‌ಗಳು ಮತ್ತು ಸ್ಟೀಲ್ ಟಿಫಿನ್‌ಗಳಿಂದ ಹಿಡಿದು ಗಂಗಾಜಲ, ದೇವಾಲಯದ ಪ್ರಸಾದ ಮತ್ತು ಆಕ್ಸಿಜನ್ ಪಂಪ್ ಹೊಂದಿದ್ದ ಮೀನುಗಳ ಟ್ಯಾಂಕ್‌ವರೆಗೆ ಪ್ರಯಾಣಿಕರು ಮರೆತುಹೋದ ವಸ್ತುಗಳು ಬೆಳಕಿಗೆ ಬಂದಿವೆ.
-
ಬೆಂಗಳೂರು: ʼಫೋನ್ ಮನೆಗೆ ಹೋಗುತ್ತದೆ. ಆದರೆ ಚಾರ್ಜರ್ ಬಸ್ʼನಲ್ಲೇ ಉಳಿಯುತ್ತದೆʼ. ಜನವರಿ ಯಿಂದ ಜೂನ್ 2026ರ ಅವಧಿಯಲ್ಲಿ ಅಂತರನಗರ ಬಸ್‌ಗಳಲ್ಲಿ ಪ್ರಯಾಣಿಕರು ಬಿಟ್ಟುಹೋದ ವಸ್ತುಗಳ ಕುರಿತು ಫ್ಲಿಕ್ಸ್‌ಬಸ್ ಇಂಡಿಯಾದ ಲಾಸ್ಟ್ & ಫೌಂಡ್ ವಿಶ್ಲೇಷಣೆಯ ಪ್ರಕಾರ, ಮೊಬೈಲ್ ಫೋನ್‌ಗಳಿಗಿಂತ ಫೋನ್ ಚಾರ್ಜರ್‌ಗಳು ಮತ್ತು ಕೇಬಲ್‌ಗಳು ಎಂಟು ಪಟ್ಟು ಹೆಚ್ಚು ಬಾರಿ ಮರೆತುಹೋಗಿವೆ. ಆದರೆ ಕಥೆ ಇಲ್ಲಿಗೇ ಮುಗಿಯುವುದಿಲ್ಲ.
ಫ್ಲಿಕ್ಸ್‌ಬಸ್ ಇಂಡಿಯಾದ ಲಾಸ್ಟ್ & ಫೌಂಡ್ ದಾಖಲೆ ಗಳನ್ನು ಗಮನಿಸಿದಾಗ, ಭಾರತದ ಅಂತರ ನಗರ ರಸ್ತೆ ಪ್ರಯಾಣದ ಒಂದು ಕುತೂಹಲಕಾರಿ ಚಿತ್ರಣ ಸಿಗುತ್ತದೆ. ನೀರಿನ ಬಾಟಲಿಗಳು, ನೆಕ್ ಪಿಲ್ಲೋಗಳು, ಬ್ಯಾಕ್‌ಪ್ಯಾಕ್‌ಗಳು ಮತ್ತು ಜಾಕೆಟ್‌ಗಳಂತಹ ಸಾಮಾನ್ಯ ಪ್ರಯಾಣದ ವಸ್ತುಗಳ ಜೊತೆಗೆ ಸ್ಟೀಲ್ ಟಿಫಿನ್‌ಗಳು, ಉಪ್ಪಿನಕಾಯಿ ಜಾರ್‌ಗಳು, ಪ್ರಸಾದ, ಗೃಹೋಪಯೋಗಿ ವಸ್ತುಗಳು ಹಾಗೂ ಕೆಲವೊಮ್ಮೆ ಮ್ಯಾನಿಕಿನ್ ತಲೆ, ಆಕ್ಸಿಜನ್ ಪಂಪ್ ಹೊಂದಿರುವ ಮೀನುಗಳ ಟ್ಯಾಂಕ್, ಪ್ಲೇಸ್ಟೇಷನ್ 5 ಮತ್ತು ಮೂರು ಹಣ್ಣಾದ ಕಲ್ಲಂಗಡಿಗಳು ಕೂಡ ಲಾಸ್ಟ್ & ಫೌಂಡ್‌ನಲ್ಲಿ ದಾಖಲಾಗಿವೆ.
ಇದನ್ನೂ ಓದಿ: Chitradurga Bus Accident: ಚಿತ್ರದುರ್ಗದ ಬಳಿ ಭೀಕರ ಅಪಘಾತ; ಪ್ರವಾಸಿ ಬಸ್ ಪಲ್ಟಿಯಾಗಿ ಇಬ್ಬರ ಸಾವು, 26 ಮಂದಿಗೆ ಗಾಯ
ಜಾಗತಿಕ ಟ್ರಾವೆಲ್-ಟೆಕ್ ಕಂಪನಿಯಾದ ಫ್ಲಿಕ್ಸ್‌ನ ಭಾರತೀಯ ಅಂಗವಾದ ಫ್ಲಿಕ್ಸ್‌ಬಸ್ ಇಂಡಿಯಾ, ಜನವರಿಯಿಂದ ಜೂನ್ 2026ರವರೆಗೆ ತನ್ನ ಅಂತರನಗರ ಬಸ್ ಜಾಲದಲ್ಲಿ ದಾಖಲಾಗಿರುವ ಮರೆತುಹೋದ ವಸ್ತುಗಳನ್ನು ವಿಶ್ಲೇಷಿಸಿದೆ. ಭಾರತದಲ್ಲಿ 330ಕ್ಕೂ ಹೆಚ್ಚು ನಗರಗಳು ಮತ್ತು 1,400 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಈ ವಿಶ್ಲೇಷಣೆ, ಪ್ರಯಾಣಿಕರು ತಮ್ಮೊಂದಿಗೆ ಏನು ಕೊಂಡೊಯ್ಯುತ್ತಾರೆ, ಏನು ಬಿಟ್ಟು ಹೋಗುತ್ತಾರೆ ಮತ್ತು ಆ ವಸ್ತುಗಳು ಹೇಳುವ ಅನೇಕ ಕಥೆಗಳ ಕುರಿತ ಅಪರೂಪದ ನೋಟವನ್ನು ನೀಡುತ್ತದೆ.
ಅತ್ಯಧಿಕ ವಸ್ತುಗಳು ಬೆಳಗಿನ 4ರಿಂದ 6 ಗಂಟೆಯ ನಡುವೆ ತಲುಪುವ ರಾತ್ರಿ ಪ್ರಯಾಣಗಳಲ್ಲಿ ಬಿಟ್ಟು ಹೋಗಿರುವುದಾಗಿ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಮರೆತುಹೋದ ವಸ್ತುಗಳ ಸಂಖ್ಯೆ ಯಲ್ಲಿ ನವದೆಹಲಿ ಮೊದಲ ಸ್ಥಾನದಲ್ಲಿದ್ದು, ನಂತರ ಬೆಂಗಳೂರು ಇದೆ.
ಫ್ಲಿಕ್ಸ್‌ಬಸ್ ಇಂಡಿಯಾದ ಆಪರೇಷನ್ಸ್ ಮುಖ್ಯಸ್ಥ ಶೋವಿತ್ ಮೆಹ್ರೋತ್ರಾ ಮಾತನಾಡಿ, “ನಮ್ಮ ಲಾಸ್ಟ್ & ಫೌಂಡ್ ಪ್ರಯಾಣಿಕರು ಹೇಗೆ ಪ್ರಯಾಣಿಸುತ್ತಾರೆ ಎಂಬುದರ ಆಸಕ್ತಿದಾಯಕ ಚಿತ್ರಣ ವನ್ನು ನೀಡುತ್ತದೆ. ದೈನಂದಿನ ಪ್ರಯಾಣದ ಅಗತ್ಯ ವಸ್ತುಗಳು ಮತ್ತು ಊಟದ ಡಬ್ಬಿಗಳಿಂದ ಹಿಡಿದು ಧಾರ್ಮಿಕ ವಸ್ತುಗಳು, ಸಂಗೀತ ವಾದ್ಯಗಳು ಮತ್ತು ನಿಜಕ್ಕೂ ಅನಿರೀಕ್ಷಿತ ವಸ್ತುಗಳವರೆಗೆ ನಾವು ಸ್ವೀಕರಿಸುವ ವಸ್ತುಗಳ ವೈವಿಧ್ಯತೆ, ನಮ್ಮ ನೆಟ್‌ವರ್ಕ್‌ನಲ್ಲಿ ನಡೆಯುವ ವಿಭಿನ್ನ ಪ್ರಯಾಣ ಗಳ ಒಂದು ನೋಟವನ್ನು ನೀಡುತ್ತದೆ.
ಇವುಗಳಲ್ಲಿ ಹಲವು ಘಟನೆಗಳು ಹಾಸ್ಯಮಯವಾಗಿರಬಹುದು. ಆದರೆ ಪ್ರತಿಯೊಂದು ಕಳೆದು ಹೋದ ವಸ್ತುವಿನ ಹಿಂದೆ ತನ್ನ ಪ್ರಯಾಣಕ್ಕಾಗಿ ನಮ್ಮ ಮೇಲೆ ನಂಬಿಕೆ ಇಟ್ಟಿರುವ ಒಬ್ಬ ಪ್ರಯಾಣಿಕರಿರುತ್ತಾರೆ. ನಮ್ಮ ಕಾರ್ಯಾಚರಣೆ ತಂಡಗಳು ಮತ್ತು ಬಸ್ ಪಾಲುದಾರರಿಗೆ ಈ ವಸ್ತುಗಳನ್ನು ಗುರುತಿಸುವುದು, ದಾಖಲಿಸುವುದು ಮತ್ತು ನಿರ್ವಹಿಸುವುದು, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರವೂ ಅವರಿಗೆ ಸುಗಮ ಅನುಭವ ಒದಗಿಸುವಲ್ಲಿ ಪ್ರಮುಖ ಭಾಗವಾಗಿದೆ,” ಎಂದರು.
ಚಾರ್ಜರ್‌ಗಳಿಂದ ಟಿಫಿನ್‌ಗಳವರೆಗೆ: ಪ್ರಯಾಣಿಕರು ಹೆಚ್ಚಾಗಿ ಮರೆತು ಹೋಗಿಸುವ ವಸ್ತುಗಳು ಫೋನ್ ಚಾರ್ಜರ್‌ಗಳು ಮತ್ತು ಕೇಬಲ್‌ಗಳು ಮರೆತುಹೋದ ವಸ್ತುಗಳ ಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿದ್ದರೂ, ದೀರ್ಘ ಪ್ರಯಾಣವನ್ನು ಆರಾಮದಾಯಕವಾಗಿಸುವ ವಸ್ತುಗಳನ್ನೂ ಪ್ರಯಾಣಿಕರು ಸಮಾನವಾಗಿ ಬಿಟ್ಟುಹೋಗಿದ್ದಾರೆ.
ನೀರಿನ ಬಾಟಲಿಗಳು, ಇಯರ್‌ಫೋನ್‌ಗಳು, ನೆಕ್ ಪಿಲ್ಲೋಗಳು, ಬ್ಯಾಕ್‌ಪ್ಯಾಕ್‌ಗಳು, ಹೊದಿಕೆಗಳು, ಶಾಲ್‌ಗಳು, ಛತ್ರಿಗಳು ಮತ್ತು ಸ್ಟೀಲ್ ಟಿಫಿನ್‌ಗಳು ಪ್ರಮುಖವಾಗಿ ಕಾಣಿಸಿಕೊಂಡಿದ್ದು, ಅಂತರನಗರ ಬಸ್ ಪ್ರಯಾಣದ ಪರಿಚಿತ ಚಿತ್ರಣವನ್ನು ನೀಡುತ್ತವೆ.
ಪ್ರಯಾಣಿಕರಷ್ಟೇ ಆಹಾರವೂ ಪ್ರಯಾಣಿಸುತ್ತದೆ
ಲಾಸ್ಟ್ & ಫೌಂಡ್ ದಾಖಲೆಗಳಲ್ಲಿ ಒಂದು ವರ್ಗ ವಿಶೇಷವಾಗಿ ಗಮನ ಸೆಳೆದಿದ್ದರೆ ಅದು ಆಹಾರ. ಸ್ಟೀಲ್ ಟಿಫಿನ್‌ಗಳು ಮತ್ತು ಉಪ್ಪಿನಕಾಯಿ ಜಾರ್‌ಗಳಿಂದ ಹಿಡಿದು ಫಿಲ್ಟರ್ ಕಾಫಿ ಫ್ಲಾಸ್ಕ್‌ಗಳು, ಮುರುಕ್ಕು ಡಬ್ಬಿಗಳು, ಪರೋಟಾ ಪಾರ್ಸೆಲ್‌ಗಳು, ಮಿಠಾಯಿ ಬಾಕ್ಸ್‌ಗಳು, ಒಣಹಣ್ಣುಗಳ ಕಂಟೈನರ್‌ಗಳು ಮತ್ತು ಥರ್ಮೋಸ್‌ಗಳವರೆಗೆ ವಿವಿಧ ವಸ್ತುಗಳು ದಾಖಲಾಗಿವೆ.
ಮಾರ್ಗಗಳ ಪ್ರಕಾರವೂ ಈ ವಸ್ತುಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ದಕ್ಷಿಣ ಭಾರತದ ಮಾರ್ಗ ಗಳಲ್ಲಿ ಮರೆತು ಹೋದ ಫಿಲ್ಟರ್ ಕಾಫಿ ಫ್ಲಾಸ್ಕ್‌ಗಳು, ಮುರುಕ್ಕು ಡಬ್ಬಿಗಳು ಮತ್ತು ಸಿಹಿತಿಂಡಿ ಬಾಕ್ಸ್‌ಗಳು ಹೆಚ್ಚಾಗಿ ಕಂಡುಬಂದರೆ, ಉತ್ತರ ಭಾರತದ ಮಾರ್ಗಗಳಲ್ಲಿ ಪರೋಟಾ ಪಾರ್ಸೆಲ್‌ಗಳು, ಅಚ್ಚಾರ್ ಜಾರ್‌ಗಳು, ಒಣಹಣ್ಣುಗಳ ಬಾಕ್ಸ್‌ಗಳು ಮತ್ತು ಥರ್ಮೋಸ್‌ಗಳು ಹೆಚ್ಚಾಗಿ ಕಂಡು ಬಂದಿವೆ.
ದೇವಾಲಯ ನಗರಗಳ ಮಾರ್ಗಗಳು ಹೇಳುವ ವಿಭಿನ್ನ ಕಥೆ
ಕೆಲವು ಪ್ರಯಾಣಗಳಲ್ಲಿ ಸಂಪೂರ್ಣ ವಿಭಿನ್ನ ರೀತಿಯ ವಸ್ತುಗಳು ಬಿಟ್ಟುಹೋಗಿವೆ. ದೇವಾಲಯ ನಗರಗಳ ಮಾರ್ಗಗಳಲ್ಲಿ ಮರೆತುಹೋದ ವಸ್ತುಗಳ ಪೈಕಿ ಸುಮಾರು ಐದರಲ್ಲಿ ಎರಡು ಭಾಗವು ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ವಸ್ತುಗಳಾಗಿದ್ದು, ವಿಶ್ಲೇಷಣೆಯಲ್ಲಿ ಇದು ಪ್ರಾದೇಶಿಕವಾಗಿ ಅತ್ಯಂತ ವಿಶಿಷ್ಟ ವರ್ಗವಾಗಿ ಹೊರಹೊಮ್ಮಿದೆ.
ದಕ್ಷಿಣ ಭಾರತದ ಮಾರ್ಗಗಳಲ್ಲಿ ಪ್ರಸಾದದ ಪ್ಯಾಕೆಟ್‌ಗಳು, ಲಡ್ಡು ಬಾಕ್ಸ್‌ಗಳು, ಅರ್ಚನೆ ತಟ್ಟೆಗಳು, ತೆಂಗಿನಕಾಯಿಗಳು, ಹೂವಿನ ಹಾರಗಳು ಮತ್ತು ಹಿತ್ತಾಳೆಯ ದೀಪಗಳು ದಾಖಲಾಗಿದ್ದರೆ, ಉತ್ತರ ಭಾರತದ ಮಾರ್ಗಗಳಲ್ಲಿ ಗಂಗಾಜಲದ ಕಂಟೈನರ್‌ಗಳು, ರುದ್ರಾಕ್ಷಿ ಮಾಲೆಗಳು ಮತ್ತು ಪೂಜಾ ತಟ್ಟೆಗಳು ಕಂಡುಬಂದಿವೆ.
ಯಾರೂ ನಿರೀಕ್ಷಿಸದ ವಸ್ತುಗಳೂ ಇವೆ
ಲಾಸ್ಟ್ & ಫೌಂಡ್‌ನಲ್ಲಿ ಕಂಡುಬರುವ ಪ್ರತಿಯೊಂದು ವಸ್ತುವಿಗೂ ಸುಲಭವಾಗಿ ವಿವರಣೆ ನೀಡಲು ಸಾಧ್ಯವಿಲ್ಲ.
ಅತ್ಯಂತ ಅಪರೂಪದ ವಸ್ತುಗಳಲ್ಲಿ ಮ್ಯಾನಿಕಿನ್ ತಲೆ, ಪ್ಲೇಸ್ಟೇಷನ್ 5, ಆಕ್ಸಿಜನ್ ಪಂಪ್ ಹೊಂದಿ ರುವ ಮೀನುಗಳ ಟ್ಯಾಂಕ್, ಮುದ್ರಿತ CVಯ 13 ಪ್ರತಿಗಳು, ರಿಮೋಟ್ ಕಂಟ್ರೋಲ್ ಡ್ರೋನ್, ಕೆದಾರನಾಥದ ಗಂಗಾಜಲ ತುಂಬಿದ ತಲಾ 10 ಲೀಟರ್‌ನ ಎರಡು ಕ್ಯಾನ್‌ಗಳು ಮತ್ತು ಎಲ್ಲಕ್ಕಿಂತ ಗಮನಾರ್ಹವಾಗಿ ಮೂರು ಹಣ್ಣಾದ ಕಲ್ಲಂಗಡಿಗಳು ಸೇರಿವೆ.
ಇದಲ್ಲದೆ ಪ್ರೆಶರ್ ಕುಕ್ಕರ್‌ಗಳು, ಇಂಡಕ್ಷನ್ ಕುಕ್‌ಟಾಪ್‌ಗಳು, ಮ್ಯಾಚಾ ವಿಸ್ಕ್‌ನಂತಹ ಗೃಹೋ ಪಯೋಗಿ ವಸ್ತುಗಳಿಂದ ಹಿಡಿದು ಕ್ಯಾಂಡಲ್‌ಗಳೊಂದಿಗೆ ಇರುವ ಹುಟ್ಟುಹಬ್ಬದ ಕೇಕ್‌ವರೆಗೆ ಹಲವು ವಸ್ತುಗಳು ದಾಖಲಾಗಿವೆ. ಖಂಡಿತವಾಗಿಯೂ, ಮರೆತುಹೋದ ವಸ್ತುವನ್ನು ಪತ್ತೆ ಹಚ್ಚುವುದು ಕಥೆಯ ಅರ್ಧ ಭಾಗ ಮಾತ್ರ.
ಜನವರಿಯಿಂದ ಜುಲೈ 2026ರ ನಡುವೆ, ಫ್ಲಿಕ್ಸ್‌ಬಸ್ ಇಂಡಿಯಾದ ಲಾಸ್ಟ್ & ಫೌಂಡ್ ವ್ಯವಸ್ಥೆಯ ಮೂಲಕ 600ಕ್ಕೂ ಹೆಚ್ಚು ಕಳೆದುಹೋದ ವಸ್ತುಗಳ ವಿಚಾರಣೆಗಳಿಗೆ ಪರಿಹಾರ ಒದಗಿಸಲಾಗಿದೆ. ಈ ವ್ಯವಸ್ಥೆಯು ಬಸ್‌ನಲ್ಲಿರುವ ಸಿಬ್ಬಂದಿ, ಬಸ್ ಪಾಲುದಾರರು ಮತ್ತು ಗ್ರಾಹಕ ಸಹಾಯ ತಂಡ ಗಳನ್ನು ಒಗ್ಗೂಡಿಸಿ, ವಸ್ತುಗಳನ್ನು ಪರಿಶೀಲಿಸಿ ಅವುಗಳ ಮಾಲೀಕರಿಗೆ ಹಿಂತಿರುಗಿಸಲು ನೆರವಾಗುತ್ತದೆ.