Amir Khan: ಕುಟುಂಬದ ಜೊತೆ ತಾಯಂದಿರ ದಿನ ಆಚರಿಸಿದ ಆಮಿರ್ ಖಾನ್ ; ಯಾರೆಲ್ಲ ಇದಾರೆ ನೋಡಿ
ಬಾಲಿವುಡ್ ನಟ ಆಮಿರ್ ಖಾನ್ ಅವರು ಭಾನುವಾರ ವಿಶ್ವ ತಾಯಂದಿರ ದಿನವನ್ನು ಆಚರಿಸಿದ್ದಾರೆ. ಅವರ ಜೊತೆ ಅವರ ಪ್ರೇಯಸಿ ಗೌರಿ ಖಾನ್ ಅವರ ಜೊತೆಯಿದ್ದರು. ಅವರು ತಮ್ಮ ಮನೆಯಲ್ಲಿಯೇ ತಮ್ಮ ತಾಯಿ ಜೊತೆ ಕೇಕ್ ಕಟ್ ಮಾಡಿ ಆಚರಣೆಯನ್ನು ಮಾಡಿದ್ದಾರೆ.



ಬಾಲಿವುಡ್ ನಟ ಆಮಿರ್ ಖಾನ್ ಅವರು ಭಾನುವಾರ ವಿಶ್ವ ತಾಯಿಯಂದಿರ ದಿನವನ್ನು ಆಚರಿಸಿದ್ದಾರೆ. ಅವರ ಜೊತೆ ಅವರ ಪ್ರೇಯಸಿ ಗೌರಿ ಖಾನ್ ಅವರ ಜೊತೆಯಿದ್ದರು. ಇಡೀ ಖಾನ್ ಕುಟುಂಬವು ತಾಯಂದಿರ ದಿನದಂದು ಜೀನತ್ ಹುಸೇನ್ ಅವರ ಜೊತೆ ಸಂಭ್ರಮದಿಂದ ಆಚರಣೆ ಮಾಡಿದೆ.

ಒಂದು ಫೋಟೋದಲ್ಲಿ ಆಮಿರ್ ತನ್ನ ತಾಯಿ ಜೀನತ್ ಮತ್ತು ಸಹೋದರಿ ನಿಖತ್ ಹೆಗ್ಡೆ ಅವರೊಂದಿಗೆ ಪೋಸ್ ನೀಡುತ್ತಿರುವುದನ್ನು ತೋರಿಸಿದರೆ, ಇನ್ನೊಂದು ಗ್ರೂಪ್ ಫೋಟೋದಲ್ಲಿ ಸೂಪರ್ಸ್ಟಾರ್ ಅವರ ತಾಯಿ ಕೇಕ್ ಕತ್ತರಿಸುವಾಗ ಹಿನ್ನೆಲೆಯಲ್ಲಿ ಅವರ ಪ್ರೇಯಸಿ ಗೌರಿ ಸ್ಪ್ರಾಟ್ ಇತರರೊಂದಿಗೆ ನಿಂತಿದ್ದಾರೆ.

ಒಂದು ಚಿತ್ರದಲ್ಲಿ ಅಮೀರ್ ಅವರ ತಾಯಿ ಜೀನತ್ ಹುಸೇನ್, 'ಮಾಮ್' ಎಂದು ಬರೆದಿರುವ ಚಾಕೊಲೇಟ್ ಕೇಕ್ ಮುಂದೆ ಹರ್ಷಚಿತ್ತದಿಂದ ಕುಳಿತಿರುವುದನ್ನು ತೋರಿಸಲಾಗಿದೆ. ಮೇಜಿನ ಮೇಲೆ ಹಲವಾರು ಹೂಗುಚ್ಛಗಳನ್ನು ಸಹ ಇರಿಸಲಾಗಿದೆ, ಮತ್ತು ನಿಖತ್ ಹೆಗ್ಡೆ ಅವರ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು

ಆಮಿರ್ ಖಾನ್ಗೆ 60ನೇ ಹುಟ್ಟುಹಬ್ಬದ ದಿನದಂದು ತಮ್ಮ ಹೊಸ ಗೆಳತಿ ಗೌರಿಯನ್ನು ಪರಿಚಯಿಸಿದ್ದರು. 25 ವರ್ಷಗಳ ಹಿಂದೆಯೇ ಆಮಿರ್ ಖಾನ್ ಮತ್ತು ಗೌರಿ ಭೇಟಿ ಆಗಿದ್ದರಂತೆ. ಆದರೆ ನಡುವೆ ಟಚ್ ಬಿಟ್ಟುಹೋಗಿತ್ತು. ಇದೀಗ ಮತ್ತೆ ಇವರಿಬ್ಬರು ಒಂದಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಕಳೆದ 18 ತಿಂಗಳಿನಿಂದ ಇವರಿಬ್ಬರು ಒಟ್ಟಿಗೆ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.

1986ರಲ್ಲಿ ರೀನಾ ದತ್ತಾ ಜೊತೆ ಆಮಿರ್ ಖಾನ್ ಮದುವೆ ಆಗಿತ್ತು. ಇವರಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬಿಬ್ಬರು ಮಕ್ಕಳಿದ್ದಾರೆ. 2022ರಲ್ಲಿ ರೀನಾಗೆ ಡಿವೋರ್ಸ್ ನೀಡಿದ ಆಮಿರ್ ಖಾನ್, 2005ರಲ್ಲಿ ಕಿರಣ್ ರಾವ್ ಜೊತೆ ಮದುವೆ ಆಗಿದ್ದರು. 2021ರಲ್ಲಿ ಅವರಿಗೂ ಕೂಡ ಡಿವೋರ್ಸ್ ನೀಡಿದರು. ವಿಶೇಷ ಏನಪ್ಪ ಅಂದ್ರೆ ತಮ್ಮಿಬ್ಬರು ಮಾಜಿ ಪತ್ನಿಯರ ಜೊತೆ ಆಮಿರ್ ಖಾನ್ ಉತ್ತಮ ಬಾಂಡಿಂಗ್ ಹೊಂದಿದ್ದಾರೆ.