Ananya Panday: ಬಾಲಿವುಡ್ ನಟಿ ಅನನ್ಯಾ ಪಾಂಡೆ ಸಿಂಪಲ್ ಲುಕ್ ಗೆ ನೆಟ್ಟಿಗರು ಫಿದಾ
ಬಾಲಿವುಡ್ ನಟ ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ ಮಾದಕ ನೋಟ, ಮುದ್ದಾದ ಮೈಮಾಟದಿಂದಲೇ ಅನೇಕರ ಗಮನ ಸೆಳೆಯುತ್ತಿದ್ದಾರೆ. ʼಸ್ಟುಡೆಂಟ್ ಆಫ್ ದಿ ಇಯರ್ 2ʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಇವರು ʼಲೈಗರ್ʼ ಚಿತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಅನನ್ಯಾ ಪಾಂಡೆ ವೈಯಕ್ತಿಕ ವಿಚಾರಗಳಲ್ಲಿಯೂ ಸದಾ ಹಾಟ್ ಟಾಪಿಕ್ ಆಗಿರುತ್ತಾರೆ. ಇತ್ತೀಚೆಗಷ್ಟೇ ಮುಂಬೈಯ ಸಲೂನ್ ಒಂದಕ್ಕೆ ಭೇಟಿ ನೀಡಿದ್ದ ಇವರ ಕೆಲ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Ananya Panday


ನಟಿ ಅನನ್ಯಾ ಪಾಂಡೆ ವೈಯಕ್ತಿಕ ಮತ್ತು ಸಿನಿಮಾ ವಿಚಾರದಿಂದ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಅವರು ಮುಂಬೈಯ ಪ್ರತಿಷ್ಠಿತ 'ಮಾಗ' ಸಲೂನ್ ಒಂದಕ್ಕೆ ಭೇಟಿ ನೀಡಿದ್ದು, ಸದ್ಯ ಅವರ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿನಿಮಾದಲ್ಲಿ ಮಾಡರ್ನ್ ಮತ್ತು ಟ್ರೆಡಿಶನಲ್ ಲುಕ್ನಿಂದ ಜನ ಮನ ಸೆಳೆಯುವ ಈ ಬೆಡಗಿ ವೈರಲ್ ಫೋಟೊದಲ್ಲಿ ಬಹಳ ಸಿಂಪಲ್ ಆಗಿ ಕಂಡಿದ್ದಾರೆ.

ನಟಿ ಅನನ್ಯಾ ಪಾಂಡೆ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಸುದ್ದಿಯಲ್ಲಿದ್ದರು. ಇದರ ಬೆನ್ನಲ್ಲೆ ಇತ್ತೀಚೆಗಷ್ಟೇ ನಟಿ ಅನನ್ಯಾ ಪಾಂಡೆ ತನಗೆ ಚಿತ್ರರಂಗಕ್ಕೆ ಪ್ರವೇಶಿಸುವ ಮುನ್ನವೇ ಸಾಕಷ್ಟು ಬಾಡಿ ಶೇಮಿಂಗ್ ಮಾಡಲಾಗಿದೆ ಎಂಬ ಕರಾಳ ಸತ್ಯವನ್ನು ಖಾಸಗಿ ಸಂದರ್ಶನದ ಮೂಲಕ ತಿಳಿಸಿದ್ದರು. ಈ ನಡುವೆ ಮುಂಬೈ ಸಲೂನ್ಗೆ ಸಾಮಾನ್ಯರಂತೆ ಭೇಟಿ ನೀಡಿದ್ದ ಸ್ಟಾರ್ ಕಿಡ್ ಅನನ್ಯ ಮತ್ತೆ ಸುದ್ದಿಯಲ್ಲಿದ್ದಾರೆ.

ನಟಿ ಅನನ್ಯಾ ಪಾಂಡೆ ಸಲೂನ್ ಒಳ ಪ್ರವೇಶಿಸುವಾಗ ಕ್ರಾಪ್ ವೆಸ್ಟರ್ನ್ ಲುಕ್ನಲ್ಲಿ ಇರುವುದನ್ನು ಫೋಟೊದಲ್ಲಿ ಕಾಣಬಹುದು. ತಿಳಿ ಹಸಿರು ಬಣ್ಣದ ಸ್ಲೀವ್ ಲೆಸ್ ಕ್ರಾಪ್ಡ್ ಟಾಪ್ ಜತೆಗೆ ನೀಲಿ ಡೆನಿಮ್ ಪ್ಯಾಂಟ್ ಧರಿಸಿದ್ದರು. ಸಿಂಪಲ್ ಮೇಕಪ್ ಮತ್ತು ಕ್ಯಾಶುವಲ್ ಹೇರ್ ಸ್ಟೈಲ್ ನಲ್ಲಿ ನಟಿ ಅನನ್ಯಾ ಪಾಂಡೆ ಸಖತ್ತಾಗಿ ಕಂಡುಬಂದಿದ್ದಾರೆ.

ʼಸ್ಟುಡೆಂಟ್ ಆಫ್ ದಿ ಇಯರ್ 2ʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗಿದ್ದ ನಟಿ ಅನನ್ಯಾ ಪಾಂಡೆ ಅವರಿಗೆ ಹೆಚ್ಚು ಸಕ್ಸಸ್ ಸಿಕ್ಕಿಲ್ಲ. ʼಪತಿ ಪತ್ನಿ ಔರ್ ವೋʼ, ʼಲೈಗರ್ʼ, ʼಗೆಹರಾಯಿಯಾʼ, ʼಖಾಲಿ ಪೀಲಿʼ, ʼಡ್ರೀಮ್ ಗರ್ಲ್ 2ʼ, ʼಬ್ಯಾಡ್ ನ್ಯೂಸ್ʼ ಸಿನಿಮಾಗಳು ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದೆ ಫ್ಲಾಪ್ ಲಿಸ್ಟ್ಗೆ ಸೇರುವಂತಾಯ್ತು. ಇದೇ ಕಾರಣಕ್ಕೆ ನಟಿ ಅನನ್ಯಾ ಪಾಂಡೆ ಸ್ಟಾರ್ ಕಿಡ್, ನೆಪೋ ಕಿಡ್ ಎಂದು ಹೆಚ್ಚಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ.

ಇತ್ತೀಚೆಗೆ ನಟಿ ಅನನ್ಯಾ ಪಾಂಡೆ ಇತ್ತೀಚೆಗೆ ರಿಲೀಸ್ ಆದ ಅಕ್ಷಯ್ ಕುಮಾರ್ ಅವರ ʼಕೇಸರಿ ಚಾಪ್ಟರ್ 2ʼ ಸಿನಿಮಾದಲ್ಲಿ ನಟಿಸಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದಾರೆ. ʼಕೇಸರಿ 2ʼ ಚಿತ್ರದಲ್ಲಿನ ಅನನ್ಯಾ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಸದ್ಯ ಇವರ ಅಭಿನಯದ ʼಚಾಂದ್ ಮೇರಾ ದಿಲ್ʼ ಸಿನಿಮಾ ಶೂಟಿಂಗ್ ಕಂಪ್ಲಿಟ್ ಆಗಿದ್ದು ರಿಲೀಸ್ ಗೆ ರೆಡಿ ಆಗಿದೆ. ಈ ಸಿನಿಮಾ ಯಶಸ್ಸು ಕಾಣುತ್ತಾ ಎಂದು ಕಾದು ನೋಡಬೇಕಿದೆ.