Photos: ʻನಾನು ಅಂದುಕೊಂಡಿದ್ದು ಈಡೇರಿದೆ, ಥ್ಯಾಂಕ್ಯೂ ಯುನಿವರ್ಸ್..ʼ; ಹೊಸ ಮನೆಗೆ ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿದ ʻಬಿಗ್ ಬಾಸ್ʼ ರಿಷಾ ಗೌಡ
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಸದ್ದು ಮಾಡುವುದರ ಜೊತೆಗೆ ʻಬಿಗ್ ಬಾಸ್ʼ ಮನೆಯಲ್ಲಿ ಗಿಲ್ಲಿ ನಟನ ಜೊತೆಗಿನ ಜಗಳ ಹಾಗೂ ವಿವಾದಗಳಿಂದ ಹೆಚ್ಚು ಸುದ್ದಿಯಾಗಿದ್ದ ನಟಿ ರಿಷಾ ಗೌಡ, ಇದೀಗ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಹೌದು, ರಿಷಾ ಇದೀಗ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅವರೀಗ ಸ್ವಂತ ಮನೆಯ ಒಡತಿಯಾಗಿದ್ದು, ನೂತನ ಮನೆಯ ಗೃಹಪ್ರವೇಶ ಸಮಾರಂಭವನ್ನು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿಸಿದ್ದಾರೆ. ರಿಷಾ ಗೌಡ ಅವರ ಹೊಸ ಮನೆಯ ಸಂಭ್ರಮದ ಗೃಹಪ್ರವೇಶದ ಸುಂದರ ಫೋಟೋ ಆಲ್ಬಂ ಇಲ್ಲಿದೆ ನೋಡಿ...
-
ನಟಿ ಹಾಗೂ ಮಾಡೆಲ್ ಆಗಿರುವ ರಿಷಾ ಗೌಡ ತಮ್ಮ ಬಹುಕಾಲದ ಕನಸಿನ ಸ್ವಂತ ಮನೆಯನ್ನು ಖರೀದಿಸಿದ್ದು, ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮವನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅದ್ಧೂರಿಯಾಗಿ ನೆರವೇರಿಸಿದ್ದಾರೆ.
ಗೃಹಪ್ರವೇಶದ ಅಂಗವಾಗಿ ನೂತನ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಗಣಪತಿ ಹೋಮ ನೆರವೇರಿಸಲಾಗಿದ್ದು, ಈ ಸಂಭ್ರಮದ ಕ್ಷಣಗಳ ಫೋಟೋಗಳನ್ನು ರಿಷಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಫೋಟೋಗಳ ಜೊತೆಗೆ, "ನನ್ನದೇ ಮನೆ... ಒಂದು ಕನಸು ಇಂದು ನನಸಾಗಿದೆ. ಇಂದು ನನ್ನದೇ ಮನೆಯಲ್ಲಿದ್ದೇನೆ ಎನ್ನುವಾಗ ಕೃತಜ್ಞತೆ ಹಾಗೂ ಅಪಾರ ಹೆಮ್ಮೆ ಎನಿಸುತ್ತಿದೆ" ಎಂದು ರಿಷಾ ಭಾವುಕರಾಗಿ ಬರೆದುಕೊಂಡಿದ್ದಾರೆ.
"ನಾನು 20ರ ಹರೆಯದಲ್ಲಿದ್ದಾಗಲೇ ಸ್ವಂತ ಮನೆಯ ಕನಸು ಕಂಡಿದ್ದೆ.." ಎಂದು ರಿಷಾ ಗೌಡ ಅವರು ಹೇಳಿಕೊಂಡಿದ್ದಾರೆ.
"ಇದು ಕೇವಲ ಒಂದು ಮನೆಯಲ್ಲ; ನನ್ನ ಪರಿಶ್ರಮ ಹಾಗೂ ನಾನು ಕ್ರಮಿಸಿ ಬಂದ ಹಾದಿಗೆ ಸಾಕ್ಷಿ. ಹಲವು ಸವಾಲು-ಹೋರಾಟಗಳನ್ನು ದಾಟಿ ಬಂದಿರುವ ನನ್ನ ಈ ಪಯಣಕ್ಕೆ ದೇವರು ಪ್ರತಿಫಲ ನೀಡಿದ್ದಾರೆ. ನಿಜ ಜೀವನದಲ್ಲಿ ಇಂದು ನಾನು ಗೆದ್ದಿದ್ದೇನೆ" ಎಂದು ರಿಷಾ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಸ್ವಂತ ಮನೆಯ ಒಡತಿಯಾದ ರಿಷಾ ಗೌಡ ಅವರ ಸಾಧನೆಗೆ ಆಪ್ತರು, ಗಣ್ಯರು ಹಾಗೂ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.