Bollywood Celebrity Fitness: ಫಿಟ್ ಆಗಿರಲು ಬಾಲಿವುಡ್ ಸೆಲೆಬ್ರಿಟಿಗಳ ಫಿಟ್ನೆಸ್ ಚಾಲೆಂಜ್ ಹೇಗಿದೆ?
ಸೆಲೆಬ್ರಿಟಿಗಳು ತಮ್ಮ ದೇಹ ಸ್ಥಿತಿ ಯಥಾವತ್ತಾಗಿ ಇಡಲು ವ್ಯಾಯಾಮ, ವರ್ಕೌಟ್ ಇತ್ಯಾದಿ ಮಾಡಿ ಹೆಚ್ಚು ಫಿಟ್ ಆ್ಯಂಡ್ ಫೈನ್ ಆಗಿರಲು ಬಯಸುತ್ತಾರೆ. ಕೆಲವು ಸಿನಿಮಾಗಳಲ್ಲಿ ಹೆಚ್ಚು ದೇಹ ತೂಕ ಬೇಕಾದರೆ ಇನ್ನು ಕೆಲವು ಸಿನಿಮಾಕ್ಕೆ ಸ್ಲಿಂ ಆಗಿರಬೇಕಾಗುತ್ತದೆ. ಹೀಗಾಗಿ ತಮಗೆ ಬೇಕಾದಂತೆ ದೇಹ ಸ್ಥಿತಿ ಮಾರ್ಪಡಿಸುವುದು ಕಷ್ಟದ ಕೆಲಸವಾದರೂ ಕೂಡ ಬಾಲಿವುಡ್ ನ ಕೆಲವು ಸೆಲೆಬ್ರಿಟಿಗಳು ಅದ್ಭುತವಾದ ಫಿಟ್ನೆಸ್ ಅನ್ನು ಕಾಯ್ದುಕೊಂಡಿದ್ದಾರೆ.



ವಿದ್ಯಾ ಬಾಲನ್: ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಇತ್ತೀಚಿನ ಸಿನಿಮಾದಲ್ಲಿ ಹಾಟ್ ಲುಕ್ ನಿಂದಲೇ ಸಾಕಷ್ಟು ಫೇಮ್ ಗಿಟ್ಟಿಸಿಕೊಂಡಿದ್ದಾರೆ. ಕೆಲ ಸಿನಿಮಾದಲ್ಲಿ ಟ್ರೆಡಿಶನಲ್ ಆಗಿ ಕಾಣಿಸಿಕೊಂಡಿದ್ದರೆ, ಇನ್ನು ಕೆಲ ಸಿನಿಮಾಕ್ಕೆ ಅವರು ಮಾಡರ್ನ್ ಲುಕ್ನಲ್ಲೂ ಮಿಂಚಿದ್ದು ಇದೆ. ಈ ಫಿಟ್ನೆಸ್ ಗಾಗಿ ಸೇವಿಸುವ ಕೆಲ ಆಹಾರ ಇವರ ಮೇಲೆ ನೆಗೆಟಿವ್ ಎಫೆಕ್ಟ್ ಸಹ ಬೀರಿದೆಯಂತೆ. ಹೀಗಾಗಿ ತಜ್ಞ ವೈದ್ಯರ ಸಲಹೆಯಂತೆ ಫಿಟ್ನೆಸ್, ವರ್ಕೌಟ್ , ಡಯೆಟ್ ಮಾಡುತ್ತಿದ್ದಾರೆ. ಸರಿಯಾದ ಆಹಾರ ಕ್ರಮ ಮತ್ತು ನಿಯಮಿತ ಯೋಗ ಹಾಗೂ ವ್ಯಾಯಾಮಗಳು ಇವರ ಫಿಟ್ನೆಸ್ ಸಿಕ್ರೆಟ್ ಆಗಿದೆ.

ಭೂಮಿ ಪೆಡ್ನೇಕರ್: ಭೂಮಿ ಪೆಡ್ನೇಕರ್ ದಮ್ ಲಗಾ ಕೆ ಹೈಶಾ ಚಿತ್ರದಲ್ಲಿ ವಿವಾಹಿತ ಮಹಿಳೆಯ ಪಾತ್ರದಲ್ಲಿ ಅಭಿನಯಿಸುವ ಸಲುವಾಗಿ ಅಧಿಕ ತೂಕ ಹೊಂದುವುದು ಅನಿವಾರ್ಯವಾಗಿತ್ತು. ಆದರೆ ಸಿನಿಮಾ ಬಳಿಕ ಅವರ ದೇಹದ ತೂಕ ಇಳಿಸುವುದೆ ದೊಡ್ಡ ಚಾಲೆಂಜ್ ಆಗಿತ್ತು. ಹೀಗಾಗಿ ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರದ ಮೇಲೆ ನಿಗಾವಹಿಸುವ ಮೂಲಕ 33 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

ಪರಿಣಿತಿ ಚೋಪ್ರಾ: ಪರಿಣಿತಿ ಚೋಪ್ರಾ ಅವರು ಆರಂಭದಲ್ಲಿ ಸ್ವಲ್ಪ ಫ್ಯಾಟ್ ಇದ್ದರು. ಇತ್ತೀಚೆಗೆ ಅಮರ್ ಸಿಂಗ್ ಚಮ್ಕಿಲಾ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳಬೇಕಾಯ್ತು. ಇದಕ್ಕಾಗಿ ಅವರು ವರ್ಕೌಟ್, ವ್ಯಾಯಾಮ, ಯೋಗ, ಡಯೆಟ್ ಫುಡ್ ಇತರವನ್ನು ನಿರಂತರವಾಗಿ ಪಾಲನೆ ಮಾಡಿ ತೂಕ ಇಳಿಸಿಕೊಂಡರು. ಈ ತರನಾಗಿ ದೈಹಿಕ ರೂಪಾಂತರದೊಂದಿಗೆ ಪರಿಣಿತಿ ಚೋಪ್ರಾ ಅವರು ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.

ಸಾರಾ ಅಲಿ ಖಾನ್: ಬಾಲಿವುಡ್ಗೆ ಪಾದಾರ್ಪಣೆ ಮಾಡುವ ಮೊದಲಿನಿಂದಲೂ ನಟಿ ಸಾರಾ ಅಲಿ ಖಾನ್ ಫಿಟ್ನೆಸ್ ನಲ್ಲಿ ಚಾಪು ಮೂಡಿಸಿದ್ದಾರೆ. ಆರಂಭಿಕ ದಿನದಲ್ಲಿ ಸುಮಾರು 96 ಕೆಜಿ ತೂಕ ಹೊಂದಿದ್ದು ತೂಕ ಇಳಿಸುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಸರಿಯಾದ ಆಹಾರ ಕ್ರಮ, ಉತ್ತಮ ವ್ಯಾಯಾಮಗಳನ್ನು ನಿತ್ಯ ಮಾಡಿ ಸಾರಾ ಅಲಿ ಖಾನ್ ಅವರು 46 ಕೆಜಿ ತೂಕ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕರಣ್ ಜೋಹರ್ : ಕರಣ್ ಜೋಹರ್ ತೂಕ ಇಳಿಸಿಕೊಳ್ಳುವ ಬಗ್ಗೆ ಕಳೆದ ವರ್ಷ ಅನೇಕ ಗಾಸಿಪ್ ಹರಿದಾಡಿತ್ತು. ನಿರ್ದೇಶಕ ಕರಣ್ ಜೋಹರ್ ಅವರು ಆರೋಗ್ಯಕರ ಜೀವನಶೈಲಿಯಿಂದ ತೂಕ ಇಳಿಸಿಕೊಂಡಿದ್ದಾರೆ. ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುವುದು, ಪ್ಯಾಡಲ್ಬಾಲ್ ಆಡುವುದು, ಈಜುವುದರ ಇತ್ಯಾದಿಗಳ ಮೇಲೆ ಹೆಚ್ಚು ಗಮನಹರಿಸಿದ್ದಾರೆ ಎಂದು ಸ್ವತಃ ಅವರೇ ತಿಳಿಸಿದ್ದಾರೆ.