Father’s Day 2025: ಫಾದರ್ಸ್ ಡೇಗೆ ತಂದೆ ಜೊತೆಗಿನ ವಿಶೇಷ ಪೊಟೋ ಶೇರ್ ಮಾಡಿದ ಸೆಲೆಬ್ರಿಟಿಗಳು
ಜೀವನದಲ್ಲಿ ನಮಗೆ ಪ್ರೇರಣೆಯಾಗಬಲ್ಲ ವ್ಯಕ್ತಿಗಳಲ್ಲಿ ತಂದೆ ಕೂಡ ಒಬ್ಬರು. ಅವರ ತ್ಯಾಗ, ಪ್ರೀತಿ , ತಾಳ್ಮೆಗೆ ಗೌರವಾರ್ಥವಾಗಿ ಪ್ರತೀ ವರ್ಷ ಜೂನ್ ಮೂರನೇ ರವಿವಾರದಂದು ವಿಶ್ವ ತಂದೆಯಂದಿರ ದಿನ ಆಚರಿಸಲಾಗುತ್ತಿದೆ. ಮಗ ಅಥವಾ ಮಗಳು ದೊಡ್ಡ ಹುದ್ದೆಯಲ್ಲಿರಲಿ, ದೊಡ್ಡ ಸೆಲೆಬ್ರಿಟಿಯೇ ಆಗಿರಲಿ ಅಪ್ಪನ ಪಾಲಿಗೆ ಅವರೆಂದಿಗೂ ಮುದ್ದು ಮಗುವೇ ಆಗಿರುತ್ತಾರೆ. ಈ ನಿಟ್ಟಿನಲ್ಲಿ ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳು ತಮ್ಮ ತಂದೆ ಜೊತೆಗೆ, ಮಕ್ಕಳ ಜೊತೆಗೆ ತೆಗಿಸಿಕೊಂಡ ಅಪರೂಪದ ಫೋಟೊವನ್ನು ಶೇರ್ ಮಾಡಿಕೊಂಡಿದ್ದು ಸದ್ಯ ಈ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.



ಗೀತೆರಚನೆಕಾರ ಮತ್ತು ಕವಿ ಜಾವೇದ್ ಅಖ್ತಾರ್ ಅವರು ತಮ್ಮ ಮಕ್ಕಳಾದ ಫರ್ಹಾನ್ ಮತ್ತು ಜೋಯಾ ಅವರ ಜೊತೆಗಿನ ಅವಿಸ್ಮರಣೀಯ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಂದೆಯಾಗಿ ತಮ್ಮ ಮಕ್ಕಳ ಜೊತೆಗೆ ಕಳೆದ ಆನಂದದ ಕ್ಷಣಕ್ಕೆ ಈ ಫೋಟೋ ಸಾಕ್ಷಿಯಾಗಿದೆ.

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರು ತಮ್ಮ ತಂದೆ ಸಲೀಂ ಖಾನ್ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. ತಂದೆಯನ್ನು ಆತ್ಮೀಯ ಸ್ನೇಹಿತರಂತೆ ಕಾಣುವ ನಟ ಸಲ್ಮಾನ್ ಖಾನ್ ಅವರು ಈ ಫೋಟೊದಲ್ಲಿ ತಂದೆ ಬೈಕ್ ಓಡಿಸುತ್ತಿರುವುದನ್ನು ನೋಡುತ್ತಿದ್ದು ಕ್ಯಾಂಡಿಡ್ ಫೋಟೊಗೆ ಪೋಸ್ ನೀಡಿದ್ದಾರೆ..

ಬಾಲಿವುಡ್ ನ ಖ್ಯಾತ ನಟಿ ಸೋನಾಕ್ಷಿ ಸಿಂಗ್ ಕೂಡ ತಮ್ಮ ತಂದೆಯೊಂದಿಗಿನ ಫೋಟೊ ಹಂಚಿಕೊಂಡಿದ್ದಾರೆ. ನಟಿ ಸೋನಾಕ್ಷಿ ಅವರ ತಂದೆ, ನಟ ಹಾಗೂ ರಾಜಕಾರಣಿಯಾದ ಶತ್ರುಘ್ನ ಸಿಂಗ್ ಅವರ ಜೊತೆಗೆ ಸಾಂಪ್ರದಾಯಿಕ ಬಟ್ಟೆಯಲ್ಲಿ ಭಾವನಾತ್ಮಕವಾಗಿ ಫೋಟೊಗೆ ಪೋಸ್ ನೀಡಿದ್ದಾರೆ. ತನ್ನ ತಂದೆ ತನಗೆ ಬಹಳ ಆಪ್ತರು ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.

ಬಾಲಿವುಡ್ ಖ್ಯಾತ ನಟ ಬಾಬಿ ಡಿಯೋಲ್ ಕೂಡ ತನ್ನ ತಂದೆಯೊಂದಿಗೆ ಬಾಂಧವ್ಯವನ್ನು ಸಾರುವ ಫೋಟೊವನ್ನು ಹಂಚಿ ಕೊಂಡಿದ್ದಾರೆ. ಪದ್ಮಭೂಷಣ ಪುರಸ್ಕೃತರಾದ ನಟ ಧರ್ಮೇಂದ್ರ ಅವರೊಂದಿಗೆ ಅವರ ಮಗನ ಬಾಬಿ ಡಿಯೋಲ್ ಆತ್ಮೀಯ ವಾಗಿ ಫೋಟೊ ತೆಗಿಸಿಕೊಂಡಿದ್ದಾರೆ. ಈ ಬಾಂಧವ್ಯವನ್ನು ರೂಪಿಸಿದ್ದು ಭಯವಲ್ಲ, ಬದಲಿಗೆ ಗೌರವ ಎಂದು ಬರೆದುಕೊಂಡ ಪೋಸ್ಟ್ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೂಡ ತಮ್ಮ ತಂದೆ ಖ್ಯಾತ ನಟ ಅಮಿತಾ ಬಚ್ಚನ್ ಜೊತೆಗಿನ ಫೋಟೊ ಹಂಚಿ ಕೊಂಡಿದ್ದಾರೆ. ನಟನಾ ಕ್ಷೇತ್ರದಿಂದ ಹೊರಬರಬೇಕೆಂದು ಅಭಿಷೇಕ್ ದೃಢ ನಿರ್ಧಾರ ಮಾಡಿದ್ದಾಗ ಅವರನ್ನು ಅಮಿತಾಬ್ ಬಚ್ಚನ್ ಬೆಂಬಲಿಸಿ ಧೈರ್ಯ ತುಂಬಿದ್ದರಂತೆ ಈ ಪ್ರೀತಿಯ ಕ್ಷಣ ಅಭಿಷೇಕ್ ನೆನಪಿಸಿಕೊಂಡು ಈ ಫೋಟೊ ಹಂಚಿಕೊಂಡಿದ್ದಾರೆ.

ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಅವರು ತಮ್ಮ ತಂದೆ ಮಹೇಶ್ ಭಟ್ ಅವರ ಹುಟ್ಟುಹಬ್ಬದ ಹಳೆಯ ಫೋಟೊವನ್ನೇ ಹಂಚಿಕೊಂಡು ಶುಭ ಹಾರೈಸಿದ್ದಾರೆ. ರಾತ್ರಿಯಲ್ಲಿ ಚಂದ್ರನ ಬೆಳಕಿನಲ್ಲಿ ಅಪ್ಪ ಮಗಳ ಬಾಂಧವ್ಯವನ್ನು ಸಾರುವ ಈ ಫೋಟೊ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.

ಬಾಲಿವುಡ್ ಖ್ಯಾತ ನಟ ಸೈಫಲಿ ಖಾನ್ ಅವರು ಅವರ ಮಕ್ಕಳ ಜೊತೆಗೆ ತೆಗಿಸಿಕೊಂಡ ಅಪರೂಪದ ಫೋಟೊ ಕೂಡ ವೈರಲ್ ಆಗಿದೆ. ಮಕ್ಕಳಾದ ಸಾರಾ, ಇಬ್ರಾಹಿಂ, ತೈಮೂರ್ ಮತ್ತು ಜೆಹ್ ಜೊತೆಗೆ ನಟ ಸೈಫಲಿ ಖಾನ್ ಫೋಟೊಗೆ ಪೋಸ್ ನೀಡಿದ್ದಾರೆ.

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಕೂಡ ತಮ್ಮ ಮಗಳು ಸುಹಾನಾ ಖಾನ್ ಮತ್ತು ಆರ್ಯನ್ ಖಾನ್ ಜೊತೆಗಿನ ಫೋಟೊಗೆ ಫೋಸ್ ನೀಡಿದ್ದಾರೆ. ಮಗಳು ಸುಹಾನಾ ಅವರು ಇತ್ತೀಚೆಗಷ್ಟೆ ಅಡೀಡಾಸ್ ಕಂಪೆನಿಯ ಅಂಬಾಸಿಡರ್ ಆಗಿದ್ದು ಅದರ ಪ್ರಮೋಶನಲ್ ಶೂಟಿಂಗ್ ಸೆಟ್ ನ ಫೋಟೊ ಇದೀಗ ವೈರಲ್ ಆಗಿದೆ.

ಬಾಲಿವುಡ್ ನಟ ಶಾಹಿದ್ ಕಪೂರ್ ಕೂಡ ಮಗಳ ಜೊತೆಗಿನ ಫನ್ನಿ ಫೋಟೊ ಹಂಚಿಕೊಂಡಿದ್ದಾರೆ. ನಟ ಶಾಹಿದ್ ಕಪೂರ್ ಅವರು ಪೋಷಕರು ಮಕ್ಕಳೊಂದಿಗೆ ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ವಿಕಸನಗೊಳ್ಳಬೇಕು ಎಂಬ ನೆಲೆಯಲ್ಲಿ ಫೋಟೊ ಹಂಚಿಕೊಂಡಿದ್ದನ್ನು ಕಾಣಬಹುದು.

ಖ್ಯಾತ ನಟ ರಣಬೀರ್ ಕಪೂರ್ ಅವರು ತಮ್ಮ ಮಗಳ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಪತ್ನಿ ಆಲಿಯಾ ಭಟ್ ಹಾಗೂ ಮಗಳು ರಾಹಾ ಜೊತೆಗೆ ನಟ ರಣಬೀರ್ ಆಗಾಗ್ಗೆ ವಿದೇಶ ಪ್ರವಾಸ ಹೋಗುತ್ತಿರುತ್ತಾರೆ. ಮಗಳ ಜೊತೆಗೆ ನಟ ರಣಬೀರ್ ಕಪೂರ್ ಹಂಚಿಕೊಂಡ ಫೋಟೊ ಸದ್ಯ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.