ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಈ ಫೋಟೋದಲ್ಲಿರುವ ಸುಂದರ ಮಹಿಳೆ ನಾನಲ್ಲʼ;‌ ಡಿಸಿಎಂ ಪವನ್‌ ಕಲ್ಯಾಣ್‌ 3ನೇ ಪತ್ನಿ ಅನ್ನಾ ಹೀಗ್ಯಾಕೆ ಹೇಳಿದ್ರು?

Anna Konidela Fake Photo Clarification: ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊನಿಡೇಲಾ ಅವರು ದಶಕಗಳಿಂದ ಇಂಟರ್‌ನೆಟ್‌ನಲ್ಲಿ ತಮ್ಮ ಹೆಸರಿನಲ್ಲಿ ಚಲಾವಣೆಯಾಗುತ್ತಿದ್ದ ಫೋಟೋದ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದ್ದಾರೆ. ಪವನ್ ಕಲ್ಯಾಣ್ ಪಕ್ಕದಲ್ಲಿ ಕುಳಿತಿರುವ ವಿದೇಶಿ ಯುವತಿಯ ಫೋಟೋ ತನ್ನದಲ್ಲ, ಅದು 'ತೀನ್ ಮಾರ್' ಸಿನಿಮಾ ನಟಿ ಡಾನಾ ಮಾರ್ಕ್ಸ್ ಅವರದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ಆ ಸುಂದರ ಮಹಿಳೆ ನಾನಲ್ಲ'; ಫೇಕ್ ಫೋಟೋ ಬಗ್ಗೆ ಪವನ್‌ ಪತ್ನಿ ಸ್ಪಷ್ಟನೆ

-

Avinash GR
Avinash GR Apr 16, 2026 12:33 PM

ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ನಟ ಪವನ್‌ ಕಲ್ಯಾಣ್‌ ಅವರ ಮೂರನೇ ಪತ್ನಿ ಅನ್ನಾ ಕೊನಿಡೇಲಾ ಅವರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ತಮ್ಮ ದೈನಂದಿನ ಚಟುವಟಿಕೆಗಳನ್ನು ಪೋಸ್ಟ್‌ ಮಾಡುತ್ತಾ ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಈ ಮಧ್ಯೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ಮಹಿಳೆಯೊಬ್ಬರ ಫೋಟೋದ ಬಗ್ಗೆ ಅನ್ನಾ ಕೊನಿಡೇಲಾ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಆ ಫೋಟೋ ಯಾರದ್ದು? ಮುಂದೆ ಓದಿ.

ಅನ್ನಾ ಹೆಸರಿನಲ್ಲಿ ಫೇಕ್‌ ಫೋಟೋ ವೈರಲ್‌

ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿಗಳು ಎಷ್ಟು ವೇಗವಾಗಿ ಹರಡುತ್ತದೆ ಎಂಬುದಕ್ಕೆ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊನಿಡೇಲಾ ಎದುರಿಸಿದ ಈ ಅನುಭವವೇ ಸಾಕ್ಷಿ. ಕಳೆದ ಕೆಲವು ವರ್ಷಗಳಿಂದ ಇಂಟರ್‌ನೆಟ್‌ನಲ್ಲಿ ಪವನ್ ಕಲ್ಯಾಣ್ ಪತ್ನಿಯ ಬಗ್ಗೆ ಹುಡುಕಿದರೆ, ಅವರ ಪಕ್ಕದಲ್ಲಿ ಒಬ್ಬ ವಿದೇಶಿ ಯುವತಿ ಕುಳಿತಿರುವ ಫೋಟೋಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ, ಆ ಫೋಟೋದಲ್ಲಿ ಇರುವುದು ನಾನಲ್ಲ ಎಂದು ಅನ್ನಾ ಕೊನಿಡೇಲಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. ಅನ್ನಾ ಹೆಸರಿನಲ್ಲಿ ಬೇರೆ ಯುವತಿಯೊಬ್ಬರ ಫೇಕ್ ಫೋಟೋ ವೈರಲ್‌ ಆಗಿದೆ.

ಬಾಲಯ್ಯ, ಶಾರುಖ್‌ ಖಾನ್‌ ಬಳಿಕ ʻಜೈಲರ್‌ 2ʼ ಚಿತ್ರಕ್ಕೆ ಶಾಕ್‌ ನೀಡಿದ ಪವನ್‌ ಕಲ್ಯಾಣ್‌; ರಜನಿಕಾಂತ್‌ ಸಿನಿಮಾಕ್ಕೆ ಗೆಸ್ಟ್‌ ರೋಲ್‌ನದ್ದೇ ಸಮಸ್ಯೆ!

ಸುಂದರ ಮಹಿಳೆ ನಾನಲ್ಲ ಎಂದ ಅನ್ನಾ

ಪವನ್‌ ಕಲ್ಯಾಣ್‌ ಜೊತೆಗೆ ಇರುವ ಯುವತಿಯ ಫೋಟೋ ಬಗ್ಗೆ ಪ್ರತಿಕ್ರಿಯಿಸಿರುವ ಅನ್ನಾ, "ಈ ಸುಂದರ ಮಹಿಳೆ ನಾನಲ್ಲ" ಎಂದು ಬರೆದುಕೊಂಡಿದ್ದಾರೆ. "ಈ ತಪ್ಪನ್ನು ಮೊದಲು ಯಾರು ಮಾಡಿದರೋ ನನಗೆ ತಿಳಿಯದು. ಫೋಟೋದಲ್ಲಿರುವ ಈ ಮಹಿಳೆಯ ಹೆಸರು ಡಾನಾ ಮಾರ್ಕ್ಸ್. ನಾನು ನನ್ನ ಜೀವನದಲ್ಲಿ ಎಂದಿಗೂ ಮಾಡೆಲ್ ಆಗಲಿ ಅಥವಾ ನಟಿಯಾಗಲಿ ಆಗಿರಲಿಲ್ಲ" ಎಂದು ಅನ್ನಾ ಹೇಳಿದ್ದಾರೆ.‌

ಸಿನಿಮಾಗಳಿಂದ ಬ್ರೇಕ್‌ ತೆಗೆದುಕೊಳ್ತಾರಾ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್?‌ ಎಲ್ಲಾ ಊಹಾಪೋಹಗಳಿಗೆ ಒಂದೇ ಮಾತಲ್ಲಿ ಫುಲ್‌ಸ್ಟಾಪ್!

ಅಷ್ಟಕ್ಕೂ ಆ ಮಹಿಳೆ ಯಾರು?

ವಾಸ್ತವವಾಗಿ ಆ ಫೋಟೋದಲ್ಲಿರುವ ಆ ಮಹಿಳೆ ಯಾರು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ವೈರಲ್‌ ಆಗಿರುವ ಫೋಟೋ 'ತೀನ್ ಮಾರ್' ಸಿನಿಮಾ ಆಡಿಯೋ ಫಂಕ್ಷನ್ ಸಮಯದ್ದು. ಅದರಲ್ಲಿ ಪವನ್ ಪಕ್ಕದಲ್ಲಿ ಕುಳಿತಿರುವುದು ಆ ಸಿನಿಮಾದಲ್ಲಿ 'ಮಿಚೆಲ್' ಎಂಬ ಪಾತ್ರ ನಿರ್ವಹಿಸಿದ್ದ ಅಮೆರಿಕನ್ ನಟಿ ಡಾನಾ ಮಾರ್ಕ್ಸ್. ಇಬ್ಬರೂ ವಿದೇಶಿಯರಾಗಿದ್ದರಿಂದ ಪ್ರೇಕ್ಷಕರು ಡಾನಾ ಅವರನ್ನೇ ಅನ್ನಾ ಲೆಜಿನೋವಾ ಎಂದು ಇಷ್ಟು ದಿನ ತಪ್ಪಾಗಿ ಭಾವಿಸಿದ್ದರು. ಡಾನಾ ಮಾರ್ಕ್ಸ್ ಅಮೆರಿಕದ ಪ್ರಸಿದ್ಧ ಥಿಯೇಟರ್ ಆರ್ಟಿಸ್ಟ್ ಮತ್ತು ಗಾಯಕಿ. ಪವನ್ ಕಲ್ಯಾಣ್ ನಟನೆಯ 'ತೀನ್ ಮಾರ್' ಚಿತ್ರದ "ಬಾರ್ಬಿ ಬೊಮ್ಮಕಿ" ಹಾಡಿನಲ್ಲಿ ಇವರು ನಟಿಸಿದ್ದರು. ಸದ್ಯ ಇವರು ಅಮೆರಿಕಾದ ಡ್ಯೂಕ್ ಯೂನಿವರ್ಸಿಟಿಯಲ್ಲಿ ನಟನಾ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ.

ಅನ್ನಾ - ಪವನ್ ಕಲ್ಯಾಣ್ ಪರಿಚಯ ಆಗಿದ್ದೆಲ್ಲಿ?

ಅನ್ನಾ ಲೆಜಿನೋವಾ ಮತ್ತು ಪವನ್ ಕಲ್ಯಾಣ್ ಅವರು 2011ರಲ್ಲಿ 'ತೀನ್ ಮಾರ್' ಸಿನಿಮಾದ ಚಿತ್ರೀಕರಣದ ವೇಳೆಯೇ ಮೊದಲ ಬಾರಿಗೆ ಭೇಟಿಯಾಗಿದ್ದರು. ಅನ್ನಾ ಅವರು ಆ ಸಿನಿಮಾದಲ್ಲಿ ನಟಿಯಾಗಿ ಅಲ್ಲದೆ, ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪರಿಚಯ ಪ್ರೇಮಕ್ಕೆ ತಿರುಗಿ, 2013ರ ಸೆಪ್ಟೆಂಬರ್ 30 ರಂದು ಹೈದರಾಬಾದ್‌ನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹಿಂದೂ ವಿವಾಹ ಕಾಯ್ದೆಯಡಿ ಮದುವೆಯಾಗಿದ್ದರು.

ಅನ್ನಾ ಮತ್ತು ಪವನ್‌ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪುತ್ರಿಯ ಹೆಸರು ಪೊಲೆನಾ ಅಂಜನಾ ಪವನೋವಾ ಮತ್ತು ಪುತ್ರನ ಹೆಸರು ಮಾರ್ಕ್ ಶಂಕರ್ ಪವನೋವಿಚ್. ಪುತ್ರಿಗೆ ಪವನ್ ಕಲ್ಯಾಣ್ ಅವರ ತಾಯಿಯ ಹೆಸರು ಹಾಗೂ ಪುತ್ರನಿಗೆ ಅಣ್ಣ ಚಿರಂಜೀವಿಯವರ (ಶಿವಶಂಕರ ವರಪ್ರಸಾದ್) ಹೆಸರು ಬರುವಂತೆ ನಾಮಕರಣ ಮಾಡಲಾಗಿದೆ.