Evil Eye Accessories 2026: ಹೊಸ ವರ್ಷದ ಫ್ಯಾಷನ್ನಲ್ಲಿ ಹಂಗಾಮ ಎಬ್ಬಿಸಿದ ಇವಿಲ್ ಐ ಆಕ್ಸೆಸರೀಸ್
ಇದೀಗ ಇವಿಲ್ ಆಕ್ಸೆಸರೀಸ್ಗಳು ಯುವತಿಯರ ಹೊಸ ವರ್ಷದ ಫ್ಯಾಷನ್ನಲ್ಲಿ ಹಂಗಾಮ ಎಬ್ಬಿಸಿವೆ. ನ್ಯೂ ಲುಕ್ಗೆ ಸಾಥ್ ನೀಡುತ್ತಿವೆ. ಮೊದಲೆಲ್ಲಾ ಕೇವಲ ಪೆಂಡೆಂಟ್, ಕಾಲಿನ ಆಂಕ್ಲೆಟ್ ಹಾಗೂ ಬ್ರೇಸ್ಲೇಟ್ಗಳಲ್ಲಿ ಮಾತ್ರ ಲಭ್ಯವಿದ್ದ, ಇವುಗಳ ಡಿಸೈನ್ಗಳು ಇಂದು ಹೆಚ್ಚಿನ ಆಭರಣಗಳ ಆಕಾರದಲ್ಲಿ ಕಂಡು ಬಂದಿವೆ.ಹಾಗಾದಲ್ಲಿ, ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಆಯ್ಕೆ ಹೇಗೆ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಚಿತ್ರಕೃಪೆ: ಪಿಕ್ಸೆಲ್ -
ಹೊಸ ವರ್ಷದಲ್ಲಿ ಇವಿಲ್ ಐ ಆಕ್ಸೆಸರೀಸ್ಗಳು ಯುವತಿಯರನ್ನು ಸವಾರಿ ಮಾಡತೊಡಗಿದ್ದು, ಹಂಗಾಮ ಎಬ್ಬಿಸಿವೆ. ಹೌದು, ಕೆಲವು ವರ್ಷಗಳ ಹಿಂದೆಯೇ ಈ ಇವಿಲ್ ಆಕ್ಸೆಸರೀಸ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ ಕೂಡ ಆಫಿಷಿಯಲ್ ಆಗಿ ಯುವತಿಯರ ಜ್ಯುವೆಲರಿ ಲಿಸ್ಟ್ನಲ್ಲಿ ಸೇರಿರಲಿಲ್ಲ. ಆದರೆ, ಈ ಹೊಸ ವರ್ಷದಲ್ಲಿ ಜ್ಯುವೆಲ್ ಟ್ರೆಂಡ್ ಲಿಸ್ಟ್ಗೆ ಸೇರಿಕೊಂಡಿವೆ ಎನ್ನುತ್ತಾರೆ ಜ್ಯುವೆಲ್ ಎಕ್ಸ್ಪರ್ಟ್ಸ್.
ಏನಿದು ಇವಿಲ್ ಐ ಆಕ್ಸೆಸರೀಸ್?
ಸಿಂಪಲ್ಲಾಗಿ ಹೇಳುವುದಾದಲ್ಲಿ, ಹೊಟ್ಟೆಕಿಚ್ಚು ಪಡುವವರ ಅಥವಾ ಶತ್ರುಗಳ ಕಣ್ಣಿನ ದೃಷ್ಠಿಯಿಂದ ಕಾಪಾಡುವ ಇಲ್ಲವೇ ನೆಗೆಟಿವ್ ಎನರ್ಜಿಯನ್ನು ಅವರಿಗೆ ತಿರುಗಿಸುವಂತಹ ಶಕ್ತಿ ಹೊಂದಿರುವ ಕಣ್ಣಿನಂತಹ ಸಿಂಬಲ್ ಇರುವಂತಹ ಆಭರಣಗಳಿವು. ನೋಡಲು ನೀಲಿ ಕಣ್ಣಿನಂತಹ ಚಿತ್ತಾರ ಒಳಗೊಂಡಿರುತ್ತವೆ.
ಟ್ರೆಂಡಿಯಾಗಿರುವ ಇವಿಲ್ ಐ ಜ್ಯುವೆಲರಿಗಳು
ಮೊದಲೆಲ್ಲಾ ಕೇವಲ ಪೆಂಡೆಂಟ್, ಕಾಲಿನ ಆಂಕ್ಲೆಟ್ ಹಾಗೂ ಬ್ರೇಸ್ಲೇಟ್ಗಳಲ್ಲಿ ಮಾತ್ರ ಲಭ್ಯವಿದ್ದ, ಇವುಗಳ ಡಿಸೈನ್ಗಳು ಇಂದು ಹೆಚ್ಚಿನ ಆಭರಣಗಳ ಆಕಾರದಲ್ಲಿ ಕಂಡು ಬಂದಿವೆ. ಲೇಯರ್ ಲುಕ್ ನೆಕ್ಲೇಸ್ ಮಲ್ಟಿ ಲೇಯರ್ ಹಾರ ಸೇರಿದಂತೆ ನಾನಾ ಜ್ಯುವೆಲರಿ ಡಿಸೈನ್ನೊಳಗೆ ಸೇರಿಕೊಂಡಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಜ್.
ಬೆಳ್ಳಿ-ಬಂಗಾರದಲ್ಲೂ ಬಂತು ಇವಿಲ್ ಐ ಡಿಸೈನ್
ಆರ್ಟಿಫಿಷಿಯಲ್ ಜ್ಯುವೆಲರಿ ಡಿಸೈನ್ನಲ್ಲಿ ಮಾತ್ರವಲ್ಲ, ಇದೀಗ ಬೆಳ್ಳಿ –ಬಂಗಾರದ ಜ್ಯುವೆಲರಿ ಡಿಸೈನ್ನಲ್ಲೂ ಇವು ಕಾಣಿಸಿಕೊಂಡಿವೆ ಎನ್ನುತ್ತಾರೆ ಬಂಗಾರದ ವಿನ್ಯಾಸಕಾರರು.
ಇವಿಲ್ ಐ ಜ್ಯುವೆಲರಿ ಆಯ್ಕೆ
- ಸಿಂಪಲ್ ಡಿಸೈನ್ನವನ್ನು ಪ್ರತಿನಿತ್ಯ ಧರಿಸಬಹುದು.
- ಫಂಕಿ ಲುಕ್ ನೀಡುತ್ತದೆ.
- ಆದಷ್ಟೂ ಮಿನಿ ಡಿಸೈನ್ನವನ್ನೇ ಪ್ರಿಫರ್ ಮಾಡಿ ಧರಿಸಿ.
- ಕಪ್ಪು ದಾರದಿಂದ ಸೇರಿಸಿ ವಿನ್ಯಾಸ ಮಾಡಲಾದ ಡಿಸೈನ್ನ ಇವಿಲ್ ಐ ಆಕ್ಸೆಸರೀಸ್ ಕೈಗೆಟಕುವ ದರದಲ್ಲಿ ದೊರೆಯುತ್ತವೆ.
- ಹ್ಯಾಂಡ್ಮೇಡ್ ಇವಿಲ್ ಐ ಆಕ್ಸೆಸರೀಸ್ ಕೂಡ ಕಡಿಮೆ ಬೆಲೆಯಲ್ಲಿ ದೊರಕುತ್ತವೆ.