AI Movie: ಕನ್ನಡದಲ್ಲೇ ಸಿದ್ಧವಾಯ್ತು ಮೊದಲ ಎಐ ಸಿನಿಮಾ; ಬಿಡುಗಡೆ ಯಾವಾಗ?.
ಸಂಪೂರ್ಣ ಎಐ ಮೂಲಕವೇ ಕನ್ನಡದಲ್ಲಿ ‘ಲವ್ ಯೂ’ ಸಿನಿಮಾ ಸಿದ್ಧವಾಗಿದೆ.ಸಿನಿಮಾದ ನಿರ್ದೇಶನ ಮತ್ತು ನಿರ್ಮಾಪಕರನ್ನು ಹೊರತು ಪಡಿಸಿದರೆ, ಮತ್ತೆಲ್ಲ ಕೆಲಸಗಳನ್ನೂ ಎಐ ತಂತ್ರಜ್ಞಾನವೇ ಮಾಡಿರುವುದು ಈ ಸಿನಿಮಾದ ಮೊದಲ ವಿಶೇಷತೆ. ಸೆನ್ಸಾರ್ ಬೋರ್ಡ್ನವರೂ ಸಿನಿಮಾವನ್ನು ಕುತೂಹಲದಿಂದ ನೋಡಿ ಯು/ಎ ಸರ್ಟಿಫಿಕೆಟ್ ಕೂಡ ನೀಡಿದ್ದಾರೆ.



ಸದ್ಯ ಎಲ್ಲ ಕ್ಷೇತ್ರದಲ್ಲಿಯೂ ಎಐ ತಂತ್ರಜ್ಞಾನ ಬಳಕೆ ಹೆಚ್ಚಾಗಿದೆ.ಈ ತಂತ್ರಜ್ಞಾನ ಈಗ ಸಿನಿಮಾ ರಂಗದಲ್ಲೂ ಬಳಕೆ ಆಗುತ್ತಿದೆ. ಇದೀಗ ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣ ಎಐನಿಂದಲೇ ಕನ್ನಡ ಸಿನಿಮಾವೊಂದನ್ನು ತಯಾರಿಸಲಾಗಿದೆ. ಕೇವಲ 10 ಲಕ್ಷ ಬಜೆಟ್ ಗೆ ನಿರ್ಮಿಸಲಾದ ಈ ಸಿನಿಮಾವನ್ನು ನಿರ್ದೇಶಕ ನರಸಿಂಹ ಮೂರ್ತಿ ಮತ್ತು ಎಐ ತಂತ್ರಜ್ಞಾನಿ ನೂತನ್, ನಟನೆ, ಸಂಗೀತ ಸೇರಿದಂತೆ ಎಲ್ಲವನ್ನೂ ಎಐ ಬಳಸಿ ರಚಿಸಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಕೂಡ ಸಿಕ್ಕಿದ್ದು ಸದ್ಯದಲ್ಲೇ ಬಿಡುಗಡೆ ಆಗಲಿರುವ ‘ಲವ್ ಯೂ’ ಸಿನಿಮಾ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ...

ಈಗಾಗಲೇ ಕೆಲವು ಚಿತ್ರಗಳ ಪ್ರೀ-ಪ್ರೊಡಕ್ಷನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಎಐ ಬಳಸಲಾಗುತ್ತಿದೆ. ಆದರೆ, ಈ ಚಿತ್ರತಂಡವು ಸಂಪೂರ್ಣವಾಗಿ ಎಐ ಮೂಲಕವೇ ಇಡೀ ಚಿತ್ರವನ್ನು ಸಂಪೂರ್ಣವಾಗಿ ಸೃಷ್ಟಿ ಮಾಡಿದೆ. ಕೃತಕ ಬುದ್ಧಿಮತ್ತೆ (AI) ಮೂಲಕವೇ ‘ಲವ್ ಯು’ ಹೆಸರಿನ ಕನ್ನಡದ ಮೊದಲ ಸಿನಿಮಾವನ್ನು ರೆಡಿ ಮಾಡಿದ್ದು ಈ ಚಿತ್ರವೀಗ ರಿಲೀಸ್ಗೂ ಸಿದ್ಧವಾಗಿದ್ದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಚಿತ್ರದಲ್ಲಿ 30 ಎಐ ಟೂಲ್ಗಳನ್ನು ಬಳಸಲಾಗಿದ್ದು, ಕೇವಲ ಇಬ್ಬರು ಇಡೀ ಸಿನಿಮಾ ಮಾಡಿದ್ದಾರೆ. ಚಿತ್ರದ ನಾಯಕ ನಾಯಕಿಗೂ ಎಐ ತಂತ್ರಜ್ಞಾನ ಬಳಕೆ ಮಾಡಿದ್ದು ಈ ಸಿನಿಮಾ 95 ನಿಮಿಷಗಳ ಕಥೆ ಹೊಂದಿದೆ.

ಈ ಚಿತ್ರದ ಕುರಿತು ಮಾತನಾಡಿರುವ ನಿರ್ದೆಶಕ ನರಸಿಂಹಮೂರ್ತಿ, ‘ಕಥೆ, ಸಾಹಿತ್ಯ, ಸಂಭಾಷಣೆ ಹೊರತು ಪಡಿಸಿದರೆ, ಮಿಕ್ಕೆಲ್ಲವನ್ನೂ ಎಐ ತಂತ್ರಜ್ಞಾನದ ಮೂಲಕವೇ ಮಾಡಿರುವುದು ಈ ಚಿತ್ರದ ವಿಶೇಷತೆ ಅಂದಿದ್ದಾರೆ. ಕೇವಲ ಆರು ತಿಂಗಳಿ ನಲ್ಲಿಯೇ 10 ಲಕ್ಷ ಬಜೆಟ್ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಇದು ವಿಶ್ವದಲ್ಲಿಯೇ ಸಂಪೂರ್ಣ AI ನಿರ್ಮಿತ ಮೊದಲ ಸಿನಿಮಾ ವಾಗಿದ್ದು ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳು, ಆ ಪಾತ್ರಗಳ ಸಂಭಾಷಣೆ, ಹಾಡುಗಳು , ಧ್ವನಿ ವಿನ್ಯಾಸ, ಸೀನ್ನಲ್ಲಿ ಬರುವ ಸ್ಥಳಗಳು, ಕಲರಿಂಗ್ ಹೀಗೆ ಎಲ್ಲಾ ಕೆಲಸಗಳಿಗೂ ಎಐ ಬಳಕೆ ಮಾಡಲಾಗಿದೆ. ನೂತನ್ ಎಂಬ ಎಐ ಇಂಜಿನಿಯರ್ ಅವರ ತಾಂತ್ರಿಕ ನಾಯಕತ್ವ ಹಾಗೂ ಸುಂದರ್ ರಾಜ್ ಗುಂಡೂರಾವ್ ಯೋಜನೆಯ ನೇತೃತ್ವದಲ್ಲಿ ಈ ಸಿನಿಮಾ ಸಿದ್ಧವಾಗಿದೆ’ ಎಂದಿದ್ದಾರೆ ನಿರ್ದೇಶಕ ಎಸ್. ನರಸಿಂಹ ಮೂರ್ತಿ.

ಈ ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ನರಸಿಂಹ ಮೂರ್ತಿ ಮೂಲತಃ ಬೆಂಗಳೂರಿನ ಬಗಲಗುಂಟೆ ಆಂಜನೇಯ ದೇವಾಲಯದ ಅರ್ಚಕರು ಆಗಿದ್ದಾರೆ. ಈ ಹಿಂದೆ ಎರಡು ಸಿನಿಮಾಗಳ ನಿರ್ದೇಶನ ವನ್ನೂ ಮಾಡಿ ಹೆಸರು ಗಳಿಸಿದ್ದರು.ಇಡೀ ಸಿನಿಮಾದ ಎಐ ಕೆಲಸ ನಿರ್ವಹಿಸಿರುವ ನೂತನ್ ಓದಿದ್ದು ಎಲ್ಎಲ್ಬಿ. ಕಳೆದೊಂದು ದಶಕದಿಂದ ಸ್ಯಾಂಡಲ್ವುಡ್ನಲ್ಲಿ ಸಹ ನಿರ್ದೇಶನ, ಎಡಿಟಿಂಗ್ ಕೆಲಸ ಮಾಡುತ್ತಿದ್ದಾರೆ.

ಎಐ ತಂತ್ರಜ್ಞಾನದಲ್ಲೇ ಮೂಡಿಬಂದಿರುವ ಲವ್ ಯು' ಸಿನಿಮಾದಲ್ಲಿ12 ಹಾಡುಗಳಿದ್ದು, 95 ನಿಮಿಷಗಳ ಅವಧಿಯನ್ನು ಹೊಂದಿದೆ. ಚಿತ್ರದಲ್ಲಿ ಒಟ್ಟು 15 ಪಾತ್ರಗಳಿವೆಯಂತೆ. ಅವೆಲ್ಲವೂ ಎಐ ಜನರೇಟೆಡ್ ಪಾತ್ರ ಗಳಿವೆ.ಸಿನಿಮಾದಲ್ಲಿ ರಿಯಲ್ ಸಿನಿಮಾದಲ್ಲಿರುವ ಎಲ್ಲ ಅಂಶಗಳೂ ಇದ್ದು. ಡ್ರೋನ್ ಶಾಟ್ಗಳೂ ಇವೆ. ಸೆನ್ಸಾರ್ ಮಂಡಳಿ ಕೂಡ ಈ ಸಿನಿಮಾವನ್ನು ವೀಕ್ಷಣೆ ಮಾಡಿ, ಯು/ಎ ಪ್ರಮಾಣ ಪತ್ರವನ್ನು ಸಹ ನೀಡಿದೆ. ನೇರವಾಗಿ ಥಿಯೇಟರ್ನಲ್ಲೇ ಸಿನಿಮಾವನ್ನು ಲವ್ ಯೂ’ ಸಿನಿಮಾವನ್ನು ಮೇ ಅಥವಾ ಜೂನ್ ತಿಂಗಳಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ..