ʼಹೀರೊಪಂತಿʼಯಿಂದ ʼಬಾಘಿʼಯವರೆಗೆ: ಟೈಗರ್ ಶ್ರಾಫ್ ಅಭಿನಯದ ಟಾಪ್ 10 ಚಿತ್ರಗಳು
ಮುಂಬೈಯಲ್ಲಿ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಬಾಲಿವುಡ್ ಅನ್ನೇ ಬೆಚ್ಚಿ ಬೀಳಿಸಿದೆ. ಹತ್ಯೆಯ ಪ್ರಯತ್ನದಿಂದ ಕೂದಲೆಳೆ ಅಂತರದಲ್ಲಿ ಅವರು ಪಾರಾಗಿದ್ದಾರೆ. ಈ ನಡುವೆ ಅವರು ನಟಿಸಿದ ಟಾಪ್ ಸಿನಿಮಾಗಳ ಬಗ್ಗೆಯೂ ಸಿನಿ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. 2014ರಲ್ಲಿ 'ಹೀರೊಪಂತಿ' ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟಿದ್ದು ಅಂದಿನಿಂದ ಹಿಡಿದು ಇಲ್ಲಿಯವರೆಗೆ ಅವರು ಹಲವು ಆ್ಯಕ್ಷನ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಟಾಪ್ ಲಿಸ್ಟ್ನಲ್ಲಿರುವ ಪ್ರಮುಖ 10 ಚಲನಚಿತ್ರಗಳ ಮಾಹಿತಿ ಇಲ್ಲಿದೆ.
ಟೈಗರ್ ಶ್ರಾಫ್ (ಸಂಗ್ರಹ ಚಿತ್ರ) -
ʼಹೀರೊಪಂತಿʼ
ಟೈಗರ್ ಶ್ರಾಫ್ ಮತ್ತು ಕೃತಿ ಸನೋನ್ ಜೋಡಿಯಾಗಿ ನಟಿಸಿದ ಆ್ಯಕ್ಷನ್ ಹಾಗೂ ಪ್ರೇಮಕಥೆಯುಳ್ಳ ಚೊಚ್ಚಲ ಚಿತ್ರ ಇದಾಗಿದೆ. ಸಬ್ಬೀರ್ ಖಾನ್ ನಿರ್ದೇಶಿಸಿದ ಈ ಚಿತ್ರದಲ್ಲಿ ಸಾಂಪ್ರದಾಯಿಕ ಕಥೆ ಇದೆ. ಹಳ್ಳಿಯ ಶ್ರೀಮಂತ ವ್ಯಕ್ತಿ ಚೌಧರಿ (ಪ್ರಕಾಶ್ ರಾಜ್) ಸುತ್ತ ಕಥೆ ಸುತ್ತುತ್ತದೆ. ಚೌಧರಿಯ ಹಿರಿಯ ಮಗಳು ರೇಣು, ತನ್ನ ಮದುವೆಯ ದಿನವೇ ಪ್ರೇಮಿಯೊಂದಿಗೆ ಓಡಿಹೋಗುತ್ತಾಳೆ. ಅವಳನ್ನು ಹುಡುಕುವ ಕಥೆ ಇದರಲ್ಲಿದೆ.
ʼಸ್ಟೂಡೆಂಟ್ ಆಫ್ ದಿ ಇಯರ್ 2ʼ
ಕರಣ್ ಜೋಹರ್ ನಿರ್ದೇಶನದ, ಕಾಲೇಜು ಹಿನ್ನೆಲೆಯ ಯುವಜನತೆಯನ್ನು ಮೆಚ್ಚಿಸಿದ ಆ್ಯಕ್ಷನ್ ಡ್ರಾಮ ಸಿನಿಮಾ ಇದಾಗಿದೆ. 2019ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ತಾರಾ ಸುತಾರಿಯಾ, ಅನನ್ಯ ಪಾಂಡೆ ಮತ್ತು ಆದಿತ್ಯ ಸೀಲ್ ಕೂಡ ನಟಿಸಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕೂಡ ಕಂಡಿತ್ತು.
ʼಬಾಘಿʼ
ಸಬ್ಬೀರ್ ಖಾನ್ ನಿರ್ದೇಶನದ 2016ರ ಬಾಲಿವುಡ್ನ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಟೈಗರ್ ಮಿಂಚಿದ್ದರು. ಅಪಹರಿಸ್ಪಟ್ಟ ಮಾಜಿ ಪ್ರೇಯಸಿ ಸಿಯಾಳನ್ನು ಉಳಿಸಲು ಪ್ರಯತ್ನಿಸುವ ರೋನಿ ಪಾತ್ರದಲ್ಲಿ ಟೈಗರ್ ಮಿಂಚಿದ್ದರು. ಈ ಚಿತ್ರವು 2004ರ ತೆಲುಗು ಚಿತ್ರ ʼವರ್ಷಂʼ ರಿಮೇಕ್ ಆಗಿತ್ತು. ಇದರಲ್ಲಿ ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸಿದ್ದರು.
ʼವಾರ್ʼ
ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಒಟ್ಟಿಗೆ ನಟಿಸಿ ಭಾರಿ ದಾಖಲೆ ಬರೆದ ವೈಆರ್ಎಫ್ ಸ್ಪೈ ಯೂನಿವರ್ಸ್ನ ಬ್ಲಾಕ್ಬಸ್ಟರ್ ಸಿನಿಮಾ ಇದಾಗಿದೆ.
ʼಬಾಘಿ 3ʼ
2020ರಲ್ಲಿ ಬಿಡುಗಡೆಯಾದ ʼಬಾಘಿʼ ಸರಣಿಯ ಮೂರನೇ ಪಾರ್ಟ್ ಇದಾಗಿದೆ. ತಮಿಳು ಚಿತ್ರ ʼವೆಟ್ಟೈʼಯಿಂದ ಸ್ಫೂರ್ತಿ ಪಡೆದ ಅಹ್ಮದ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಟೈಗರ್ ಶ್ರಾಫ್ ರೋನಿ ಎಂದು ಕರೆಯಲ್ಪಡುವ ರಣವೀರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ʼಬಡೆ ಮಿಯಾನ್ ಚೋಟೆ ಮಿಯಾನ್ʼ
ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜತೆಗೆ ಟೈಗರ್ ಚೋಟೆ ಮಿಯಾನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಮಾನುಷಿ ಚಿಲ್ಲರ್, ಅಲಯಾ ಎಫ್ ಮತ್ತು ಪೃಥ್ವಿರಾಜ್ ಸುಕುಮಾರ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ʼಎ ಫ್ಲೈಯಿಂಗ್ ಜಾಟ್ʼ
ಟೈಗರ್ ಶ್ರಾಫ್ ಅವರ ಮತ್ತೊಂದು ಗಮನ ಸೆಳೆದ ಚಿತ್ರವೆಂದರೆ ಸೂಪರ್ ಹೀರೋ ಹಾಸ್ಯ ಚಿತ್ರ ʼಎ ಫ್ಲೈಯಿಂಗ್ ಜಾಟ್ʼ. ರೆಮೋ ಡಿ'ಸೋಜಾ ಸಹ-ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ನಾಥನ್ ಜೋನ್ಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಕಥಾವಸ್ತುವು ಮಾರ್ಷಲ್ ಆರ್ಟ್ಸ್ ಬೋಧಕ ಅಮನ್ ಧಿಲ್ಲನ್ ಅವರ ಕಥೆಯನ್ನು ಹೇಳುತ್ತದೆ.
ʼಗಣಪತ್: ಎ ಹೀರೋ ಈಸ್ ಬಾರ್ನ್ʼ
2023ರ ಆ್ಯಕ್ಷನ್ ಚಿತ್ರದಲ್ಲಿ ಟೈಗರ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಕೃತಿ ಸನೋನ್, ಅಮಿತಾಬ್ ಬಚ್ಚನ್, ಎಲ್ಲಿ ಅವ್ರ್ ರಾಮ್ ಮತ್ತು ರೆಹಮಾನ್ ಕಾಣಿಸಿಕೊಂಡಿದ್ದಾರೆ. ವಿಕಾಸ್ ಬಹ್ಲ್ ಬರೆದು ನಿರ್ದೇಶಿಸಿದ್ದಾರೆ.
ʼಬಾಘಿ 4ʼ
ಟೈಗರ್ ಶ್ರಾಫ್ ಇತ್ತೀಚೆಗೆ ಕನ್ನಡಿಗ ಎ. ಹರ್ಷ ನಿರ್ದೇಶನದ ʼಬಾಘಿʼಯ ನಾಲ್ಕನೇ ಪಾರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್, ಹರ್ನಾಜ್ ಸಂಧು ಮತ್ತು ಸೋನಮ್ ಬಜ್ವಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ʼಬಾಘಿ 4ʼ 2013ರ ತಮಿಳು ಚಿತ್ರ ʼಐಂತು ಐಂತು ಐಂತುʼನ ರಿಮೇಕ್.
ʼಸಿಂಘಮ್ ಅಗೇನ್ʼ
ರೋಹಿತ್ ಶೆಟ್ಟಿ ಅವರ ಆ್ಯಕ್ಷನ್-ಡ್ರಾಮ ಚಿತ್ರ ʼಸಿಂಘಮ್ ಅಗೇನ್ʼನಲ್ಲಿ ಟೈಗರ್ ಎಸಿಪಿ ಸತ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಟೈಗರ್ ಒಂದು ಸಣ್ಣ ಪಾತ್ರವನ್ನು ಹೊಂದಿದ್ದರೂ ಅದು ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್ ಖಾನ್, ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ ಅವರಂತಹ ಸ್ಟಾರ್ಗಳು ಸಹ ಕಾಣಿಸಿಕೊಂಡಿದ್ದಾರೆ.