Gen Z Fashion 2026: ಜೆನ್ ಜಿ ಯುವತಿಯರ ಸ್ಟ್ರೀಟ್ಸ್ಟೈಲ್ಗೆ ಸೇರಿದ ದೊಗಲೆ ಔಟ್ಫಿಟ್ಸ್
ಓವರ್ ಸೈಜ್ನ ದೊಗಲೆ ಪ್ಯಾಂಟ್ ಹಾಗೂ ಜಾಕೆಟ್ಗಳು ಇದೀಗ ಜೆನ್ ಜಿ ಹುಡುಗಿಯರ ಸ್ಟ್ರೀಟ್ ಸ್ಟೈಲ್ಗೆ ಎಂಟ್ರಿ ನೀಡಿವೆ. ಈ ಸೀಸನ್ನಲ್ಲಿ ಟೀನೇಜ್ ಹಾಗೂ ಕಾಲೇಜ್ ಹುಡುಗಿಯರ ವಾರ್ಡ್ರೋಬ್ನಲ್ಲಿ, ಓವರ್ ಸೈಜ್ನ ದೊಗಲೆ ವೈಡ್ ಲೆಗ್ ಅಥವಾ ಸ್ಟ್ರೇಟ್ ಕಟ್ ಲೂಸ್ ಪ್ಯಾಂಟ್ಗಳು ಹಾಗೂ ಜಾಕೆಟ್ಗಳು ಲಗ್ಗೆ ಇಟ್ಟಿವೆ. ಇದ್ಯಾವ ಬಗೆಯ ಸ್ಟೈಲಿಂಗ್? ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ವಾಮಿಕಾ ಗಬ್ಬಿ, ನಟಿ -
ಈ ಸೀಸನ್ನ ಸ್ಟ್ರೀಟ್ ಸ್ಟೈಲ್ ಕೆಟಗರಿಯಲ್ಲಿ ದೊಗಲೆ ಪ್ಯಾಂಟ್ ಹಾಗೂ ಜಾಕೆಟ್ಗಳು ಜೆನ್ ಜಿ ಯುವತಿಯರ ಜತೆಯಾಗಿವೆ.
ಓವರ್ ಸೈಜ್ ಸ್ಟ್ರೀಟ್ ಸ್ಟೈಕ್ವೇರ್ಸ್
ಹೌದು, ಈ ಸೀಸನ್ನಲ್ಲಿ ಟೀನೇಜ್ ಹಾಗೂ ಕಾಲೇಜ್ ಹುಡುಗಿಯರ ವಾರ್ಡ್ರೋಬ್ನಲ್ಲಿ, ಓವರ್ ಸೈಜ್ನ ದೊಗಲೆ ವೈಡ್ ಲೆಗ್ ಅಥವಾ ಸ್ಟ್ರೇಟ್ ಕಟ್ ಲೂಸ್ ಪ್ಯಾಂಟ್ಗಳು ಹಾಗೂ ಜಾಕೆಟ್ಗಳು ಲಗ್ಗೆ ಇಟ್ಟಿವೆ.
ನಟಿ ವಾಮಿಕಾರ ಸ್ಟ್ರೀಟ್ಸ್ಟೈಲ್ ಲುಕ್
ಅಂದಹಾಗೆ, ನಟಿ ವಾಮಿಕಾ ಫ್ಯಾಷನ್ ಶೂಟ್ವೊಂದರಲ್ಲಿ ಧರಿಸಿದ್ಧ ಅರ್ತ್ ಟೋನ್ ಬಣ್ಣದ ದೊಗಲೆ ಜಾಕೆಟ್ ಹಾಗೂ ವೈಡ್ ಲೆಗ್ ಪ್ಯಾಂಟ್ ಹಾಗೂ ಅದರೊಂದಿಗೆ ಮ್ಯಾಚ್ ಮಾಡಿದ್ದ ನ್ಯೂಟ್ರಲ್ ಶೇಡ್ನ ಕಾರ್ಸೆಟ್ ಕ್ರಾಪ್ ಟಾಪ್ ಫ್ಯಾಷನ್, ಜೆನ್ ಜಿ ಹುಡುಗಿಯರನ್ನು ಆಕರ್ಷಿಸಿತ್ತು. ಅಲ್ಲದೇ ಹೊಸ ಪ್ರಯೋಗಾತ್ಮಕ ಕಲರ್ಗಳಲ್ಲಿ ಈ ಸ್ಟೈಲಿಂಗ್ ಮಾಡುವವರನ್ನು ಪ್ರಚೋದಿಸಿತು ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ತ್ರೀ ಪೀಸ್ ಸ್ಟ್ರೀಟ್ ಸ್ಟೈಲ್ ಉಡುಗೆಗಳು
ಈ ಸೀಸನ್ನಲ್ಲಿ ಡಾರ್ಕ್ ಶೇಡ್ಗಳ ಪ್ಯಾಂಟ್ ಹಾಗೂ ಜಾಕೆಟ್ ಬದಲಿಗೆ ಜೆನ್ ಜಿ ಹುಡುಗಿಯರು ತ್ರೀ ಪೀಸ್ ಸ್ಟ್ರೀಟ್ವೇರ್ಗಳನ್ನು ಧರಿಸಲಾರಂಭಿಸಿದ್ದಾರೆ. ಇವು ಹುಡುಗಿಯರನ್ನು ಹೈಲೈಟ್ ಮಾಡುವ ಬದಲು, ಅವರಿಗೆ ಡಿಫರೆಂಟ್ ಲುಕ್ ನೀಡುತ್ತಿವೆ. ಹಾಗಾಗಿ ಈ ಶೈಲಿಯ ಔಟ್ಫಿಟ್ಗಳು ಯುವತಿಯರನ್ನು ಸವಾರಿ ಮಾಡುತ್ತಿವೆ. ಅಷ್ಟೇಕೆ? ಯೂನಿಸೆಕ್ಸ್ ಡಿಸೈನ್ನಲ್ಲೂ ಬಿಡುಗಡೆಗೊಳ್ಳುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಜ್.
ದೊಗಲೆ ಪ್ಯಾಂಟ್-ಜಾಕೆಟ್ ಪ್ರಿಯರಿಗೆ ಸಲಹೆಗಳು
- ಈ ಲುಕ್ಗಾಗಿ ದೊಗಲೆ ಹಾಗೂ ಲೂಸಾಗಿರುವ ಉಡುಗೆಗಳನ್ನೇ ಮ್ಯಾಚ್ ಮಾಡಬೇಕು.
- ಮಿನಿಮಲ್ ಆಕ್ಸೆಸರೀಸ್ ಧರಿಸಬೇಕು.
- ನ್ಯೂಟ್ರಲ್ ಕಲರ್ಸ್ ಆಯ್ಕೆ ಮಾಡಬೇಕು.
- ಮೇಕಪ್ ಹೆಚ್ಚಾಗಿ ಮಾಡಬಾರದು.