Makeup kit Ideas: ಲಾಂಗ್ ಲಾಸ್ಟಿಂಗ್ ಮೇಕಪ್ ಕಿಟ್ಗೆ ಇಲ್ಲಿದೆ 5 ಐಡಿಯಾ
Makeup kit Ideas: ಮೇಕಪ್ ಕಿಟ್ ಅಥವಾ ಪ್ರಾಡಕ್ಟ್ಗಳನ್ನು ಖರೀದಿಸುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಗಷ್ಟೇ ಅವು ದೀರ್ಘ ಕಾಲ ಬಾಳಿಕೆ ಬರಬಲ್ಲವು ಎನ್ನುತ್ತಾರೆ ಬ್ಯೂಟಿ ಎಕ್ಸ್ಪರ್ಟ್ಸ್. ಈ ಕುರಿತಂತೆ 5 ಸಿಂಪಲ್ ಟಿಪ್ಸ್ ನೀಡಿದ್ದಾರೆ. ಪಾಲಿಸಿ ನೋಡಿ.
 
                                ಚಿತ್ರಗಳು: ಪಿಕ್ಸೆಲ್ -
 ಶೀಲಾ ಸಿ ಶೆಟ್ಟಿ
                            
                                Jun 8, 2025 7:00 AM
                                
                                ಶೀಲಾ ಸಿ ಶೆಟ್ಟಿ
                            
                                Jun 8, 2025 7:00 AM
                             
                    ನೀವು ಖರೀದಿಸುವ ಯಾವುದೇ ಮೇಕಪ್ ಕಿಟ್ ಅಥವಾ ಮೇಕಪ್ ಪ್ರಾಡಕ್ಟ್ಗಳು ಹೆಚ್ಚು ದಿನ ಬಾಳಬೇಕೇ! ವದನಕ್ಕೆ ಹಚ್ಚುವ ಮೇಕಪ್ ಪ್ರಸಾದನಗಳು ಹಾಳಾಗದಂತೆ ಇರಿಸಬೇಕೇ? ಹಾಗಾದಲ್ಲಿ ಈ 5 ಟಿಪ್ಸ್ ಪಾಲಿಸಿ ನೋಡಿ ಎನ್ನುತ್ತಾರೆ ಮೇಕಪ್ ತಜ್ಞೆ ಮಾಲಾ ವೆಂಕಟೇಶ್.
ಖರೀದಿಸುವ ಯಾವುದೇ ಮೇಕಪ್ಕಿಟ್ ಅಥವಾ ಆಕ್ಸೆಸರೀಸ್ಗಳನ್ನು ಕೊಳ್ಳುವ ಮೊದಲು ಸಿದ್ಧಪಡಿಸಿದ ದಿನಾಂಕ ಹಾಗೂ ಬಳಸಲು ಯೋಗ್ಯವಲ್ಲದ ದಿನಾಂಕ (ಎಕ್ಸ್ಪೈರಿ ಡೇಟ್) ನೋಡಿ ಖರೀದಿಸಿ. ಆದಷ್ಟೂ ಹೆಚ್ಚು ದಿನಗಳ ಅಂತರ ಇರುವಂತಹ ಪ್ರಾಡಕ್ಟ್ಗಳನ್ನೇ ಖರೀದಿಸಿ. ಅತಿ ಹೆಚ್ಚಾಗಿ ಖರೀದಿಸುವ ಲಿಪ್ಸ್ಟಿಕ್, ಪೌಂಢೇಶನ್ ಕ್ರೀಮ್, ಕಾಂಪಾಕ್ಟ್ ಪೌಡರ್ ಹಾಗೂ ಐ ಲೈನರ್, ಮಸ್ಕರಾ ಕೊನೆಯ ದಿನಾಂಕ ನೋಡಿಯೇ ಖರೀದಿಸುವುದು ಕಡ್ಡಾಯ.
 
                    ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಿ
ಖರೀದಿಸುವ ಯಾವುದೇ ಮೇಕಪ್ ಪ್ರಸಾದನಗಳು ಉತ್ತಮ ಬ್ರಾಂಡ್ ಅಥವಾ ಗುಣಮಟ್ಟದ್ದಾಗಿರಬೇಕು. ಕಡಿಮೆ ಬೆಲೆಯಲ್ಲಿ ಸಿಕ್ಕಿತೆಂದು ಎಂದಿಗೂ ಖರೀದಿಸಬೇಡಿ. ಕಳಪೆ ಗುಣಮಟ್ಟದ್ದು ತ್ವಚೆಗೆ ಸಮಸ್ಯೆಯುಂಟು ಮಾಡಬಹುದು.
 
                    ಸೇಲ್ನಲ್ಲಿ ಕೊಳ್ಳುವಾಗ ಎಚ್ಚರ
ಧರಿಸುವ ಉಡುಪುಗಳನ್ನು ಸೇಲ್ನಲ್ಲಿ ಖರೀದಿಸುವುದು ಲಾಭವಾದೀತು. ಹಾಗೆಂದು ಕಾಸ್ಮೆಟಿಕ್ ಸೇಲ್ನಲ್ಲಿ ಮೇಕಪ್ಗೆ ಸಂಬಂಧಿಸಿದ ಯಾವುದೇ ಪರಿಕರಗಳನ್ನು ಖರೀದಿಸುವುದು ನಾಟ್ ಓಕೆ. ಅದರಲ್ಲೂ ಮುಖಕ್ಕೆ ಲೇಪಿಸುವ, ತುಟಿಗೆ, ಕಣ್ಣಿಗೆ ಹಚ್ಚುವ ಶೇಡ್, ಕ್ರೀಮ್ಗಳನ್ನು ಖರೀದಿಸುವಾಗ ಎಚ್ಚರ. ಯಾಕೆಂದರೆ, ಸೇಲ್ನಲ್ಲಿ ಹಿಂದಿನ ಸೀಸನ್ನ ಉಳಿದ ಪ್ರಾಡಕ್ಟ್ಗಳನ್ನು ಮಾರಾಟ ಮಾಡಲಾಗುತ್ತದೆ. ಖರೀದಿಸಿದರೂ ಮೊದಲು ಬಳಸುವ ಕೊನೆಯ ದಿನಾಂಕ ನೋಡಿಕೊಳ್ಳಿ. ಓಕೆ ಎಂದಾದಲ್ಲಿ ಖರೀದಿಸಿ. ಕೊನೆಯ ದಿನಾಂಕ ಸಮೀಪ ಇದ್ದಲ್ಲಿ ಕೊಳ್ಳುವುದು ಬೇಡ.
 
                    ಮೇಕಪ್ ಕಿಟ್ ಹಂಚಿಕೊಳ್ಳದಿರಿ
ಕುಟುಂಬದವರನ್ನು ಹೊರತುಪಡಿಸಿ ಇತರರೊಂದಿಗೆ ಮೇಕಪ್ ಪರಿಕರಗಳನ್ನು ಹಂಚಿಕೊಳ್ಳದಿರಿ. ಹಂಚಿಕೊಳ್ಳಲೇಬೇಕಾದ ಸಂದರ್ಭ ಬಂದಲ್ಲಿ ಪ್ರತ್ಯೇಕವಾದ ಬ್ರಶ್ ಬಳಸುವಂತೆ ಹೇಳಿ. ತ್ವಚೆಯ ಸಮಸ್ಯೆ ಇದ್ದಲ್ಲಿ ಆದಷ್ಟೂ ಅವಾಯ್ಡ್ ಮಾಡುವುದು ಉತ್ತಮ.
 
                    ಬಳಸುವ ಬ್ರಶ್ಗಳನ್ನು ಸ್ವಚ್ಛವಾಗಿರಿಸಿ
ನೀವು ಬಳಸುವ ಮೇಕಪ್ ಬ್ರಶ್ಗಳನ್ನು ಸ್ವಚ್ಛವಾಗಿರಿಸಿ. ಬಳಸಿದ ನಂತರ ಧೂಳು ಇಲ್ಲದ ಕಬೋರ್ಡ್ನಲ್ಲಿರಿಸಿ. ತಿಂಗಳಿಗೊಮ್ಮೆ ಕ್ಲೀನ್ ಮಾಡಿ. ಇನ್ನು ಕಣ್ಣುಗಳಿಗೆ ಹಚ್ಚುವ ಮಸ್ಕರಾ ಹಾಗೂ ಐ ಶ್ಯಾಡೋ ಮತ್ತು ಐ ಲೈನರ್ಗಳನ್ನು ಹೆಚ್ಚು ಗಾಳಿಯಾಡಲು ಬಿಡಬಾರದು. ಕಣ್ಣಿಗೆ ಕಾಣದ ಮೈಕ್ರೋ ಬ್ಯಾಕ್ಟೀರಿಯಾಗಳು ಒಳ ಸೇರುವ ಸಂಭವವಿರುತ್ತದೆ.
 
            