Monsoon Nail Art 2025: ಈ ಸೀಸನ್ನಲ್ಲಿ ಟ್ರೆಂಡಿಯಾದ ಮಾನ್ಸೂನ್ ನೇಲ್ ಆರ್ಟ್ಗಳಿವು!
Monsoon Nail Art 2025: ಮಾನ್ಸೂನ್ ಸೀಸನ್ ನೇಲ್ ಆರ್ಟ್ ಈಗಾಗಲೇ ಲಗ್ಗೆ ಇಟ್ಟಿದ್ದು, ಮೋಡ, ಕೊಡೆ, ಮಳೆಹನಿ ಸೇರಿದಂತೆ ಮಳೆಗಾಲದ ಚಿತ್ರಣವನ್ನೊಳಗೊಂಡ ಡಿಸೈನ್ಗಳು ಟ್ರೆಂಡಿಯಾಗಿವೆ. ಅವು ಯಾವುವು? ಆಯ್ಕೆ ಹೇಗೆ? ಈ ಕುರಿತಂತೆ ನೇಲ್ ಆರ್ಟ್ ಡಿಸೈನರ್ಸ್ ಒಂದಿಷ್ಟು ಮಾಹಿತಿ ನೀಡಿದ್ದಾರೆ.

ಚಿತ್ರಕೃಪೆ: ಇನ್ಸ್ಟಾಗ್ರಾಮ್


ಮಾನ್ಸೂನ್ ಸೀಸನ್ ನೇಲ್ ಆರ್ಟ್ ಈ ಸೀಸನ್ನಲ್ಲಿ ಲಗ್ಗೆ ಇಟ್ಟಿದೆ. ಹೌದು, ಮಳೆಗಾಲವನ್ನು ಬಿಂಬಿಸುವಂತಹ ನಾನಾ ಬಗೆಯ ಚಿತ್ತಾರಗಳು ಹುಡುಗಿಯರ ಉಗುರುಗಳ ಮೇಲೆ ರಾರಾಜಿಸುತ್ತಿವೆ. ಮಳೆ ಹನಿ, ಮೋಡದ ಹನಿ, ಬಗೆಬಗೆಯ ಛತ್ರಿಗಳ ಚಿತ್ರಗಳು ಸೇರಿದಂತೆ ನಾನಾ ಶೈಲಿಯ ಮಳೆ ಕಾನ್ಸೆಪ್ಟ್ ಅನ್ನು ಒಳಗೊಂಡ ಮಾನ್ಸೂನ್ ನೇಲ್ ಆರ್ಟ್ ಡಿಸೈನ್ಸ್ ಇದೀಗ ಫ್ಯಾಷನ್ ಪ್ರಿಯರನ್ನು ಸೆಳೆದಿವೆ.

ನೇಲ್ ಮೇಲೂ ಮಳೆಗಾಲದ ಚಿತ್ತಾರ
ಪ್ರತಿ ಮಾನ್ಸೂನ್ನಲ್ಲೂ ಮಳೆಗಾಲದ ಚಿತ್ತಾರವನ್ನೊಳಗೊಂಡ ಥೀಮ್ ನೇಲ್ ಆರ್ಟ್ನಲ್ಲಿ ಕಾಣಿಸಿಕೊಳ್ಳುತ್ತದೆ. ಮಾನ್ಸೂನ್ಗೆ ಸಂಬಂಧಪಟ್ಟಂತೆ ಕಸ್ಟಮೈಸ್ಡ್ ನೇಲ್ ಆರ್ಟ್ ಗರಿಗೆದರುತ್ತದೆ. ಕಾಲೇಜು ಹುಡುಗಿಯರು ಮಾತ್ರವಲ್ಲ, ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರು ಸೀಸನ್ವೈಸ್ ನೇಲ್ ಆರ್ಟ್ ಮಾಡಿಸುತ್ತಾರೆ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ರಂಜಿತಾ.

ನೇಲ್ ಆರ್ಟ್ ಡಿಸೈನರ್ ರಂಜಿತಾ ಅವರ ಪ್ರಕಾರ, ಮಾನ್ಸೂನ್ ನೇಲ್ ಆರ್ಟ್ ಎಂದಾಕ್ಷಣಾ ಒಂದೇ ಬಗೆಯದ್ದಾಗಿರುವುದಿಲ್ಲ! ಮಳೆಗಾಲದ ಸಿಂಬಲ್ ಹೊಂದಿರುವಂತದ್ದು ಯಾವುದಾದರೂ ಆಗಿರಬಹುದು. ಉದಾಹರಣೆಗೆ, ಸಿಂಪಲ್ ಆಗಿ ಪೋಲ್ಕಾ ಡಾಟ್ಸ್ನಂತೆ ಕಾಣುವ ಮಳೆಹನಿಗಳ ನೇಲ್ ಆರ್ಟ್ ಅಥವಾ ಮೋಡದಿಂದ ಸುರಿಯುತ್ತಿರುವ ಹನಿಗಳು. ಹೀಗೆ ಅವರವರ ಕ್ರಿಯೇಟಿವಿಟಿಗೆ ತಕ್ಕಂತೆ ಇವು ಬದಲಾಗುತ್ತವೆ ಎನ್ನುತ್ತಾರೆ.

ನೀವೂ ಮಾನ್ಸೂನ್ ನೇಲ್ ಆರ್ಟ್ ಮಾಡಿ, ನೋಡಿ
ಮನೆಯಲ್ಲಿ ಹೆಚ್ಚು ಖರ್ಚಿಲ್ಲದೆ ನೀವೇ ನೇಲ್ ಆರ್ಟ್ ಮಾಡಿಕೊಳ್ಳಬಹುದು. ಮತ್ತೊಬ್ಬರ ಸಹಾಯ ಬೇಕಾಗಬಹುದು. ನೀವು ಒಂದು ಕೈಗಳ ಉಗುರುಗಳಿಗೆ ಚಿತ್ರಿಸಬಹುದು. ಮತ್ತೊಂದನ್ನು ಇತರರು ಚಿತ್ರಿಸಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಬಳಿ ನೇಲ್ ಆರ್ಟ್ ಕಿಟ್ ಇರುವುದು ಅಗತ್ಯ. ಇದಕ್ಕಾಗಿ ನಿಮ್ಮ ಬಳಿ ಕನಿಷ್ಠ ಪಕ್ಷ ಅಗತ್ಯವಿರುವ ಬಣ್ಣದ ನೇಲ್ ಪಾಲಿಶ್ಗಳು, ಕೋಟ್ ಪಾಲಿಶ್, ನಿಬ್ನಂತಿರುವ ಬ್ರಶ್ ಇರಬೇಕಾಗುತ್ತದೆ ಎನ್ನುತ್ತಾರೆ ನೇಲ್ ಡಿಸೈನರ್ ರಂಜಿತಾ. ಈ ಕುರಿತಂತೆ ಸಿಂಪಲ್ ಟಿಪ್ಸ್ ನೀಡಿದ್ದಾರೆ.

- ಮೆನಿಕ್ಯೂರ್ ನಂತರ ನೇಲ್ ಆರ್ಟ್ ಮಾಡುವುದು ಉತ್ತಮ.
- ಮಾನ್ಸೂನ್ ಚಿತ್ರಣಕ್ಕೆ ಹೊಂದುವಂತಹ ನೇಲ್ ಕಲರ್ ಸೆಲೆಕ್ಟ್ ಮಾಡಿ.
- ಒಂದು ಕೋಟ್ ಹಾಕಿದ ನಂತರ ಮತ್ತೊಂದು ಡಿಸೈನ್ ಮಾಡುವ ಮೊದಲು ಕಲರ್ ಒಣಗಲು ಬಿಡಿ.
- ಮೂರ್ನಾಲ್ಕು ಕೋಟ್ ಹಾಕುವುದಾದಲ್ಲಿ ಆದಷ್ಟೂ ತೆಳುವಾದ ಲೇಯರ್ಗಳನ್ನು ಹಚ್ಚಿ.