Nora Fatehi: ನೋರಾ ಫತೇಹಿ ಸೆಕ್ಸಿ ಲುಕ್ ಕಂಡು 'ಅಬ್ಬಬ್ಬಾ' ಎಂದ್ರು ಫ್ಯಾನ್ಸ್
ಕಿರುತೆರೆ, ಬಾಲಿವುಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ ನೋರಾ ಫತೇಹಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಅಲ್ಲದೇ ಬೋಲ್ಡ್ ಪೋಟೋ ಶೂಟ್ ಮುಖಾಂತರವು ಅವರು ಸುದ್ದಿಯಲ್ಲಿರುತ್ತಾರೆ. ನಟಿ ನೋರಾ ಫತೇಹಿ ಶೇರ್ ಮಾಡಿರುವ ಕೆಲವು ಫೋಟೋಗಳು ಇಲ್ಲಿವೆ.



ರೋರ್: ಟೈಗರ್ಸ್ ಆಫ್ ದಿ ಸುಂದರಬನ್ಸ್ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ನೋರಾ ಫತೇಹಿ ಹಲವು ಆಲ್ಬಂ ಸಾಂಗ್ಗಳಲ್ಲೂ ಸೊಂಟ ಬಳುಕಿಸಿದ್ದಾರೆ. ಹೊಸ ಫೋಟೋ ಶೂಟ್ ಮಾಡಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸುವ ನಟಿ ಇತ್ತೀಚೆಗೆ ಹೊಸ ಫೋಟೋ ಶೇರ್ ಮಾಡಿದ್ದಾರೆ..

ನಟಿ ಕಪ್ಪು ಬಣ್ಣದ ನೆಕ್ಲೈನ್ ಡ್ರೆಸ್ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ನಲ್ಲಿ ಇವರು ನೀಡಿರುವ ಫೋಸ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ನೋರಾ ಫತೇಹಿ ಸೋಷಿಯಲ್ ಮೀಡಿಯಾದಲ್ಲೂ ಬಹಳಷ್ಟು ಆ್ಯಕ್ಟೀವ್ ಆಗಿದ್ದಾರೆ. ಇವರ ಬೋಲ್ಡ್ ಲುಕ್ ಫೋಟೋ ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಈ ಭಾರಿಯು ನಟಿ ಸಖತ್ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ.

ನೋರಾ ಫತೇಹಿ ಬ್ಲಾಕ್ ಕಲರ್ ಬಾಡಿಕಾನ್ ಡ್ರೆಸ್ನಲ್ಲಿ ತಮ್ಮ ಫಿಟ್ ಫಿಗರ್ನ್ನು ತೋರ್ಪಡಿಸಿದ್ದಾರೆ. ಈ ಉಡುಪಿನಲ್ಲಿ ನಟಿಯ ಗ್ಲಾಮರ್ ಲುಕ್ ಮತ್ತಷ್ಟು ಆಕರ್ಷಕವಾಗಿ ಕಂಡಿದೆ.

ನೋರಾ ಫತೇಹಿ ಬ್ಲಾಕ್ ಬಾಡಿಕಾನ್ ಡ್ರೆಸ್ ನಲ್ಲಿ ಹಾಟ್ ಲುಕ್ ಕೊಟ್ಟಿದ್ದಾರೆ. ಈ ಡ್ರೆಸ್ ಗೆ ಬೆಳ್ಳಿಯ ಸ್ಟಡ್ಸ್ ನ ವಿಶಿಷ್ಟ ವಿನ್ಯಾಸ ಮಾಡಲಾಗಿತ್ತು. ನಟಿ ಈ ಗ್ರ್ಯಾಂಡ್ ನೋಟಕ್ಕೆ ಸಿಂಪಲ್ ಮೇಕಪ್ ಮಾಡಿದ್ದು ನ್ಯೂಡ್ ಪಿಂಕ್ ಲಿಪ್ಸ್ ಸ್ಟಿಕ್ ನೊಂದಿಗೆ ಫ್ರೀ ಹೇರ್ ಸ್ಟೈಲ್ ಮಾಡಿದ್ದರು.

ಟೆಂಪರ್, ಕಿಕ್ 2, ಲೋಫರ್ ಮತ್ತು ಊಪಿರಿ ಸೇರಿದಂತೆ ಅನೇಕ ಹಿಟ್ ಚಿತ್ರದಲ್ಲಿ ನಟಿಸಿದ್ದ ನೋರಾ ಫತೇಹಿ ಕೊನೆಯದಾಗಿ ನೆಟ್ ಫ್ಲಿಕ್ಸ್ನಲ್ಲಿ ಬಿಡುಗಡೆಯಾದ ದಿ ರಾಯಲ್ಸ್ ನಲ್ಲಿ ಕಾಣಿಸಿಕೊಂಡಿದ್ದರು.