MI vs PBKS: ಸತತ ನಾಲ್ಕು ಸೋಲು; ಸಹ ಆಟಗಾರರಿಗೆ ಎಚ್ಚರಿಕೆ ನೀಡಿದ ಹಾರ್ದಿಕ್ ಪಾಂಡ್ಯ
Hardik Pandya: ಪಂದದ್ಯದಲ್ಲಿ ಪಂಜಾಬ್ ಭರ್ಜರಿ ಪ್ರದರ್ಶನ ನೀಡಿತು. ಬೌಲಿಂಗ್‌ನಲ್ಲಿ, ಅರ್ಶ್‌ದೀಪ್ ಸಿಂಗ್ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ತಲಾ ಅರ್ಧಶತಕ ದಾಖಲಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಂಬೈ ತಂಡವು ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲನ್ನು ಅನುಭವಿಸಿತು.
Hardik Pandya -
ಮುಂಬಯಿ, ಎ.17: ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(MI vs PBKS) ವಿರುದ್ಧ ಏಳು ವಿಕೆಟ್‌ಗಳ ಹೀನಾಯ ಸೋಲು ಕಂಡ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ತಂಡದ ಆಟಗಾರರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಮುಂದಿನ ಪಂದ್ಯಕ್ಕೂ ಮುನ್ನ ತಮ್ಮ ತಪ್ಪಗಳನ್ನು ತಿದ್ದಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈಗ ನಾನು ಹೇಳಲು ಹೆಚ್ಚೇನೂ ಇಲ್ಲ. ನಾವು ನಿಜವಾಗಿಯೂ ಡ್ರಾಯಿಂಗ್ ಬೋರ್ಡ್‌ಗೆ ಹಿಂತಿರುಗಿ ನೋಡಬೇಕು ಮತ್ತು ನಮ್ಮಲ್ಲಿ ಎಲ್ಲಿ ಕೊರತೆಯಿದೆ ಎಂದು ನೋಡಬೇಕೆಂದು ನಾನು ಭಾವಿಸುತ್ತೇನೆ. ಅದು ವ್ಯಕ್ತಿಗಳೋ? ಅಥವಾ ತಂಡವೋ?, ಅಲ್ಲ ಯೋಜನೆಯೋ? ನಾವು ಅದನ್ನು ಲೆಕ್ಕಾಚಾರ ಮಾಡುತ್ತೇವೆ ಮತ್ತು ಮುಂದೆ ಏನು ಮಾಡಬಹುದು ಎಂದು ನೋಡೋಣ" ಎಂದು ಹೇಳಿದರು.
"ಮುಂದಿನ ಪಂದ್ಯಗಳಲ್ಲಿ ನಾವು ಕೆಲವು ಕಷ್ಟಕರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಅಥವಾ ನಾವು ಮುಂದುವರಿಯುತ್ತಲೇ ಇರಬೇಕೇ ಎಂದು ಗಂಭೀರವಾಗಿ ಯೋಚಿಸಬೇಕಿದೆ. ಕೆಲವು ಕಠಿಣ ಪ್ರಶ್ನೆಗಳು ನಮ್ಮ ಮುಂದಿದೆ. ಅಂತಿಮವಾಗಿ ನಾವು ಉತ್ತರಿಸಬೇಕಾಗಿದೆ ಮತ್ತು ಎಲ್ಲರೂ, ನಾಯಕತ್ವದ ಜವಾಬ್ದಾರಿ ತೆಗೆದುಕೊಳ್ಳಬೇಕು”ಎಂದು ಪಾಂಡ್ಯ ತಂಡದ ಪರ ಕಳಪೆ ಪ್ರದರ್ಶನ ನೀಡುವ ಆಟಗಾರರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಪ್ರಸ್ತುತ ಋತುವಿನಲ್ಲಿ ದೊಡ್ಡ ಮಟ್ಟದ ವೈಫಲ್ಯ ಅನುಭವಿಸುತ್ತಿರುವ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರಂತಹ ಆಟಗಾರರ ಮೇಲೆ ಹಾರ್ದಿಕ್ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು. ಭಾರತದ ಟಿ20ಐ ನಾಯಕ ಐದು ಪಂದ್ಯಗಳಲ್ಲಿ ಕೇವಲ 106 ರನ್ ಗಳಿಸಿದ್ದರೆ, ತಿಲಕ್ ಕೇವಲ 43 ರನ್ ಗಳಿಸಿದ್ದಾರೆ.
7 ವಿಕೆಟ್ ಜಯ
ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್‌ಗೆ ಇಳಿದ ಮುಂಬೈ ಕ್ವಿಂಟನ್ ಡಿ ಕಾಕ್ ಅವರ ಶತಕದ ನೆರವಿನಿಂದ 6 ವಿಕೆಟ್‌ಗೆ 196 ರನ್ ಬಾರಿಸಿತು. ಜವಾಬಿತ್ತ ಪಂಜಾಬ್ ಯಾವುದೇ ಒತ್ತಡವಿಲ್ಲದೆ 16.3 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 198 ರನ್ ಬಾರಿಸಿ ಸುಲಭ ಗೆಲುವು ತನ್ನದಾಗಿಸಿಕೊಂಡಿತು.
MI vs PBKS: ಗೆಲುವಿನ ಓಟ ಮುಂದುವರಿಸಿದ ಪಂಜಾಬ್; ಮುಂಬೈ ವಿರುದ್ಧ 7 ವಿಕೆಟ್ ಜಯ
ಪಂದದ್ಯದಲ್ಲಿ ಪಂಜಾಬ್ ಭರ್ಜರಿ ಪ್ರದರ್ಶನ ನೀಡಿತು. ಬೌಲಿಂಗ್‌ನಲ್ಲಿ, ಅರ್ಶ್‌ದೀಪ್ ಸಿಂಗ್ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ತಲಾ ಅರ್ಧಶತಕ ದಾಖಲಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಂಬೈ ತಂಡವು ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲನ್ನು ಅನುಭವಿಸಿತು.