ಹೈಫೈ, ಸಿಹಿಮುತ್ತು, ಹರಟೆ, ನಗು; ವಿದ್ಯಾರ್ಥಿನಿಯರೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ
ದೆಹಲಿಯ 7, ಲೋಕ ಕಲ್ಯಾಣ ಮಾಗರ್ದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಶುಕ್ರವಾರ ಮಕ್ಕಳ ಕಿಲ ಕಿಲ ನಗು ಸಂಭ್ರಮ ಮನೆ ಮಾಡಿತ್ತು. ಹೌದು, ರಕ್ಷಾಬಂಧನ ಪ್ರಯುಕ್ತ ವಿವಿಧ ಶಾಲೆಗಳ ಮಕ್ಕಳು ಆಗಮಿಸಿ ಪ್ರಧಾನಿ ನರೇಂದ್ ರಮೋದಿ ಅವರಿಗೆ ರಾಖಿ ಕಟ್ಟಿದರು. ಈ ವೇಳೆ ಮೋದಿ ಮಕ್ಕಳೊಂದಿಗೆ ಬೆರೆತು ನಗುತ್ತ, ತಮಾಷೆ ಮಾಡುತ್ತ ಒಂದಷ್ಟು ಹೊತ್ತು ರಾಜಕೀಯ, ಒತ್ತಡ ಮರೆತು ಖುಷಿ ಖುಷಿಯಿಂದ ಸಮಯ ಕಳೆದರು. ಸದ್ಯ ಅವರ ರಾಖಿ ಹಬ್ಬದ ಫೋಟೊ, ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದೆಹಲಿಯಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ -
ಮೋದಿಗೊಂದು ಸಿಹಿ ಮುತ್ತು
ತಮ್ಮ ನಿವಾಸದಲ್ಲಿ ಪುಟಾಣಿಗಳೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ ಈ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಬಾಲಕಿಯೊಬ್ಬಳು ಮೋದಿ ಅವರ ಕೆನ್ನೆಗೆ ಸಿಹಿ ಮುತ್ತು ನೋಡುವ ದೃಶ್ಯ ಗಮನ ಸೆಳದಿದೆ.
ಹೈ-ಫೈ, ನಗು ಮತ್ತು ಮತ್ತಷ್ಟು
ತಮ್ಮ ಪುಟಾಣಿ ಸ್ನೇಹಿತರೊಂದಿಗೆ ಆಚರಿಸಿದ ರಕ್ಷಾ ಬಂಧನದ ಫೋಟೊ, ವಿಡಿಯೊಗಳಿಗೆ ಮೋದಿ ಆಕರ್ಷಕ ಶೀರ್ಷಿಕೆ ನೀಡಿದ್ದಾರೆ. ʼಇಂದಿನ 7, ಎಲ್ಕೆಎಂ ರಕ್ಷಾ ಬಂಧನ ಆಚರಣೆಯ ಸಂದರ್ಭದಲ್ಲಿ ಹೈ-ಫೈ, ನಗು ಮತ್ತು ಇನ್ನಷ್ಟುʼ ಎಂದು ಬರೆದುಕೊಂಡಿದ್ದಾರೆ.
ಆತ್ಮೀಯವಾಗಿ ಮಾತನಾಡಿದ ಮೋದಿ
ಫೋಟೊಗಳಲ್ಲಿ ಮೋದಿ ವಿದ್ಯಾರ್ಥಿಗಳೊಂದಿಗೆ ಬೆರೆತು ಆತ್ಮೀಯವಾಗಿ ಮಾತನಾಡುತ್ತಿರುವುದು ಕಂಡು ಬಂದಿದೆ. ಶಾಲಾ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿಗಳು, ಎನ್ಸಿಸಿ ಕೆಡೆಟ್ಗಳು ಮೋದಿ ಕೈಗೆ ರಾಖಿ ಕಟ್ಟಿ ಆಶೀರ್ವಾದ ಪಡೆದುಕೊಂಡರು.
ಸಂವಾದ
ಕೆಲಹೊತ್ತು ವಿದ್ಯಾರ್ಥಿಗಳ ಮಧ್ಯೆ ಕುಳಿತ ಮೋದಿ ಅವರ ಮಾತುಗಳಿಗೆ ಕಿವಿಯಾದರು. ಜತೆಗೆ ಪಟಾಣಿಗಳೊಂದಿಗೆ ಸಂವಾದ ನಡೆಸಿದರು.
ಶುಭಾಶಯ
ಇದಕ್ಕೂ ಮುನ್ನ ಪ್ರಧಾನಿ ಮೋದಿ ದೇಶದ ಜನತೆಗೆ ರಕ್ಷಾಬಂಧನದ ಶುಭಾಶಯ ಕೋರಿದ್ದರು. ಪ್ರೀತಿ, ವಾತ್ಸಲ್ಯ ಹಾಗೂ ಪರಸ್ಪರ ನಂಬಿಕೆಯ ಬಂಧವನ್ನು ಪ್ರತಿನಿಧಿಸುವ ಈ ಹಬ್ಬವು ಸದಾ ಅಚಲವಾಗಿರಲಿ ಎಂಬ ಆಶಯ ವ್ಯಕ್ತಪಡಿಸಿದ್ದರು.