Sarigamapa: ಅಪ್ಪು ಸಮಾಧಿ ಮೇಲೆ ಟ್ರೋಫಿ ಇಟ್ಟು ಆಶೀರ್ವಾದ ಪಡೆದ ಸರಿಗಮಪ ವಿನ್ನರ್ ಶಿವಾನಿ ಸ್ವಾಮಿ
ಶಿವಾನಿ ಸ್ವಾಮಿ ಕಷ್ಟದಿಂದ ಮೇಲೆ ಬಂದವರು. ಅವರ ಪ್ರತಿಭೆಯನ್ನು ಗುರುತಿಸಿ ಝೀ ಕನ್ನಡ ಸರಿಗಮಪ ಶೋಗೆ ಅವಕಾಶ ನೀಡಿತು. ಈ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡು ವಿನ್ ಆದರು. ಇದೀಗ ವಿನ್ನರ್ ಆದ ಬಳಿಕ ಶಿವಾನಿ ಅವರು ಡಾ. ರಾಜ್ಕುಮಾರ್ ಸ್ಮಾರಕದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಬಂದಿದ್ದಾರೆ.
Shivani swami -
ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಸ ರಿ ಗ ಮ ಪ (Sa Ri Ga Ma Pa) 21ನೇ ಸೀಸನ್ ಇತ್ತೀಚೆಗಷ್ಟೆ ತೆರೆಬಿತ್ತು. ಈ ಸೀಸನ್ನ ವಿನ್ನರ್ ಪಟ್ಟವು ಬೀದರ್ನ ಶಿವಾನಿ ಸ್ವಾಮಿಗೆ ಒಲಿಯಿತು. ಮೊದಲ ದಿನದಿಂದ ಕೊನೆಯವರೆಗೂ ಶಿವಾನಿ ಅವರು ಅದ್ಭುತವಾಗಿ ಹಾಡಿದ್ದರು.
ಶಿವಾನಿ ಸ್ವಾಮಿ ಕಷ್ಟದಿಂದ ಮೇಲೆ ಬಂದವರು. ಅವರ ಪ್ರತಿಭೆಯನ್ನು ಗುರುತಿಸಿ ಝೀ ಕನ್ನಡ ಸರಿಗಮಪ ಶೋಗೆ ಅವಕಾಶ ನೀಡಿತು. ಈ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡು ವಿನ್ ಆದರು. ಇದೀಗ ವಿನ್ನರ್ ಆದ ಬಳಿಕ ಶಿವಾನಿ ಅವರು ಡಾ. ರಾಜ್ಕುಮಾರ್ ಸ್ಮಾರಕದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಬಂದಿದ್ದಾರೆ.
ಅಪ್ಪು ಅವರ ಸಮಾಧಿ ಮೇಲೆ ಸರಿಗಮಪ ಸೀಸನ್ 21ರ ವಿನ್ನರ್ ಟ್ರೋಫಿಯನ್ನು ಇಟ್ಟು, ಅವರ ಆಶೀರ್ವಾದವನ್ನು ಶವಾನಿ ಪಡೆದುಕೊಂಡಿದ್ದಾರೆ. ಶಿವಾನಿ ಜೊತೆಗೆ ಅವರ ಕುಟುಂಬಸ್ಥರು ಕೂಡ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದ ಫೋಟೋಗಳು ವೈರಲ್ ಆಗುತ್ತಿದೆ.
ವಿನ್ನರ್ ಶಿವಾನಿ ಸ್ವಾಮಿಗೆ ಹಲವು ಆಕರ್ಷಕ ಬಹುಮಾನ ಕೂಡ ಸಿಕ್ಕಿದೆ. ಸರಿಗಮಪ ವಿನ್ನಿಂಗ್ ಟ್ರೋಫಿ ಜೊತೆಗೆ ಮುಖ್ಯವಾಗಿ 15 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯ ಮತ್ತು ವೈಟ್ ಗೋಲ್ಡ್ ಕಡೆಯಿಂದ ಗಿಫ್ಟ್ ಹ್ಯಾಂಪರ್ ಸಿಕ್ಕಿದೆ. ಜೊತೆಗೆ ಪರ್ಫಾಮರ್ ಆಫ್ ದಿ ಸೀಸನ್ ಪ್ರಶಸ್ತಿಯು ಶಿವಾನಿ ಸ್ವಾಮಿಗೆ ಸಿಕ್ಕಿದೆ. ಅದಕ್ಕಾಗಿ ಅವರಿಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ನೀಡಲಾಗಿದೆ.
ಸರಿಗಮಪ ಸೀಸನ್ 21 ಕಾರ್ಯಕ್ರಮದಲ್ಲಿ ಟಾಪ್ 3 ಹಂತಕ್ಕೆ ಹೋದ ಮೂವರೂ.. ಮಹಿಳಾ ಸ್ಪರ್ಧಿಗಳೇ ಅನ್ನೋದು ವಿಶೇಷ. ಟಾಪ್ 3 ಹಂತಕ್ಕೆ ಬಂದವರು - ಶಿವಾನಿ ಸ್ವಾಮಿ, ರಶ್ಮಿ ಹಾಗೂ ಆರಾಧ್ಯ ರಾವ್. ಈ ಮೂವರ ಪೈಕಿ ಶಿವಾನಿ ಸ್ವಾಮಿ ವಿನ್ನರ್ ಆದರೆ ಆರಾಧ್ಯ ರಾವ್ ರನ್ನರ್ ಅಪ್ ಮತ್ತು ರಶ್ಮಿ ಮೂರನೇ ಸ್ಥಾನ ಗಿಟ್ಟಿಸಿಕೊಂಡರು.