Season Fashion 2026: ಅತ್ಯಾಕರ್ಷಕ ಲುಕ್ಗಾಗಿ ಧರಿಸಿ ಡಿಸೈನರ್ ಕಟೌಟ್ ಗೌನ್
ಮುಡಿಯಿಂದ ಪಾದದವರೆಗೆ ಡಿಸೈನರ್ ಕಟೌಟ್ ವಿನ್ಯಾಸವನ್ನು ಹೊಂದಿರುವ ಕಟೌಟ್ ಗೌನ್ಗಳು ಅತ್ಯಾಕರ್ಷಕ ಲುಕ್ ನೀಡುವುದರೊಂದಿಗೆ ಸ್ಟೈಲಿಶ್ ಆಗಿ ಕಾಣಿಸುತ್ತವೆ. ಇದ್ಯಾವ ಬಗೆಯ ಗೌನ್? ಆಯ್ಕೆ ಮತ್ತು ಸ್ಟೈಲಿಂಗ್ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಇಶಾ ಕಾನ್ಸಾರ, ನಟಿ -
ಕಟೌಟ್ ಗೌನ್ಗಳು ಇದೀಗ ಟ್ರೆಂಡಿಯಾಗಿವೆ. ಹೌದು, ಮುಡಿಯಿಂದ ಪಾದದವರೆಗೆ ಡಿಸೈನರ್ ಕಟೌಟ್ ವಿನ್ಯಾಸವನ್ನು ಹೊಂದಿರುವ ಕಟೌಟ್ ಗೌನ್ಗಳು ಅತ್ಯಾಕರ್ಷಕ ಲುಕ್ ನೀಡುವುದರೊಂದಿಗೆ ಸ್ಟೈಲಿಶ್ ಆಗಿ ಬಿಂಬಿಸುತ್ತವೆ.
ಇಶಾ ಧರಿಸಿದ ಅತ್ಯಾಕರ್ಷ ನೀಲಿ ವರ್ಣದ ಕಟೌಟ್ ಗೌನ್
ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ಫ್ಯಾಷನ್ ಶೂಟ್ವೊಂದರಲ್ಲಿ ನಟಿ ಇಶಾ ಕಾನ್ಸಾರ ಧರಿಸಿದ್ಧ ಎಲೆಕ್ಟ್ರಿಕ್ ಬ್ಲ್ಯೂ ಬಣ್ಣದ ಕಟೌಟ್ ಗೌನ್ ಗೌನ್ ಪ್ರಿಯರನ್ನು ಸೆಳೆದಿತ್ತು. ಅದರಲ್ಲೂ ಆ ಗೌನ್ನ ಕಟೌಟ್ ವಿನ್ಯಾಸ ಈ ಡಿಸೈನರ್ವೇರನ್ನು ಸ್ಕರ್ಟ್ನಂತೆ ಇಲ್ಲವೇ ಲೆಹೆಂಗಾದಂತೆ ಬಿಂಬಿಸಿತ್ತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಕಟೌಟ್ ಗೌನ್ಗಳ ಸ್ಪೆಷಾಲಿಟಿ
ಅರ್ಥ ಆಗುವಂತೆ ಹೇಳುವುದಾದಲ್ಲಿ, ಗೌನ್ಗಳ ಯಾವುದೇ ಭಾಗದಲ್ಲಿ ಡಿಸೈನ್ನಂತೆ ಮಾಡಿದ ಕಟ್ನಂತಹ ವಿನ್ಯಾಸಕ್ಕೆ ಕಟೌಟ್ ಗೌನ್ ಎನ್ನಲಾಗುತ್ತದೆ. ಅದು ಯಾವುದೇ ಆಕಾರದ್ದಾಗಬಹುದು. ಉದಾಹರಣೆಗೆ., ಓವಲ್, ರೌಂಡ್, ತ್ರಿಕೋನಾ ಹೀಗೆ ಯಾವುದೇ ಶೇಪ್ನಲ್ಲೂ ಗೌನ್ನಲ್ಲಿ ಕಟೌಟ್ ವಿನ್ಯಾಸವನ್ನು ಮೂಡಿಸಲಾಗಿರುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಟ್ರೆಂಡಿಯಾಗಿರುವ ಕಟೌಟ್ ಗೌನ್ಗಳು
ವೇಸ್ಟ್ಲೈನ್ ಬಳಿ ಕಟೌಟ್ ಮಾಡಲಾದ ವಿನ್ಯಾಸದವು, ಸ್ಲೀವ್ ಬಳಿ ಕಟೌಟ್ ಮಾಡಿದ ವಿನ್ಯಾಸದವು, ನೆಕ್ಲೈನ್ ಕಟೌಟ್ ವಿನ್ಯಾಸದ್ದು ಹೀಗೆ ನಾನಾ ಬಗೆಯ ಕಟೌಟ್ ವಿನ್ಯಾಸದ ಗೌನ್ಗಳು ಈ ಸೀಸನ್ನಲ್ಲಿ ಟ್ರೆಂಡಿಯಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಕಟೌಟ್ ಗೌನ್ ಆಯ್ಕೆ & ಸ್ಟೈಲಿಂಗ್
- ಟ್ರೆಂಡಿಯಾಗಿರುವ ವೈಬ್ರೆಂಟ್ ಕಲರ್ನ ಕಟೌಟ್ ಗೌನ್ ಆಯ್ಕೆ ಮಾಡಿ.
- ಫಿಟ್ಟಿಂಗ್ ಇರುವಂತಹ ಕಟೌಟ್ ಗೌನ್ ಆಯ್ಕೆ ಉತ್ತಮ.
- ಈ ಶೈಲಿಯ ಗೌನ್ಗೆ ಸಿಂಪಲ್ ಸ್ಟೈಲಿಂಗ್ ಓಕೆ.
- ಆದಷ್ಟೂ ಜಾರ್ಜೆಟ್ ಫ್ಯಾಬ್ರಿಕ್ನ ಕಟೌಟ್ ಗೌನ್ ಆಯ್ಕೆ ಬೆಸ್ಟ್ ಎನ್ನಬಹುದು.
- ಮೊದಲು ಟ್ರಯಲ್ ನೋಡಿ, ಖರೀದಿಸಿ.