Star Fashion 2025: ಲೆಮನ್ ಯೆಲ್ಲೋ ಪಾರ್ಟಿವೇರ್ನಲ್ಲಿ ನಟಿ ಬೃಂದಾ ಆಚಾರ್ಯ ಮಿಂಚಿಂಗ್!
Actress Brunda Acharya: ಸ್ಯಾಂಡಲ್ವುಡ್ ನಟಿ ಬೃಂದಾ ಆಚಾರ್ಯ ಲೆಮೆನ್ ಯೆಲ್ಲೋ ಗ್ಲಿಟ್ಟರ್ ಪಾರ್ಟಿವೇರ್ ಹೈ ಸ್ಲಿಟ್ ಗೌನ್ನಲ್ಲಿ ಮಿಂಚಿದ್ದಾರೆ. ಅವರು ಹೇಗೆ ಕಾಣಿಸುತ್ತಿದ್ದಾರೆ? ಇದ್ಯಾವ ಬಗೆಯ ಔಟ್ಫಿಟ್? ಈ ಕುರಿತಂತೆ ಇಲ್ಲಿದೆ ರಿವ್ಯೂ.
ಚಿತ್ರಗಳು: ಬೃಂದಾ ಆಚಾರ್ಯ, ಸ್ಯಾಂಡಲ್ವುಡ್ ನಟಿ -
ಈ ಚುಮು ಚುಮು ಚಳಿಯ ವಿಂಟರ್ ಸೀಸನ್ನಲ್ಲೂ ಸ್ಯಾಂಡಲ್ವುಡ್ ನಟಿ ಬೃಂದಾ ಆಚಾರ್ಯ ವೈಬ್ರೆಂಟ್ ಲೆಮೆನ್ ಯೆಲ್ಲೋ ಶೇಡ್ನ ಗ್ಲಿಟ್ಟರ್ ಸಿಕ್ವಿನ್ಸ್ ಪಾರ್ಟಿವೇರ್ನಲ್ಲಿ ಮಿಂಚಿದ್ದಾರೆ.
ಬೃಂದಾ ಜೆನ್ ಜಿ ಫ್ಯಾಷನ್
ಪ್ರೇಮಂ ಪೂಜ್ಯಂ, ಕೌಸಲ್ಯ ಸುಪ್ರಜಾ ಸೇರಿದಂತೆ ಇತ್ತೀಚಿನ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಬೃಂದಾ ಬಹುತೇಕ ಎಲ್ಲಾ ಸಂದರ್ಭಗಳಲ್ಲೂ ಕೂಡ ಅತ್ಯಾಕರ್ಷಕವಾಗಿ ಅದರಲ್ಲೂ ಜೆನ್ ಜಿ ಫ್ಯಾಷನ್ ಸ್ಟೇಟ್ಮೆಂಟನ್ನು ಫಾಲೋ ಮಾಡುತ್ತಾ ಬಂದಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸೋಷಿಯಲ್ ಮೀಡಿಯಾವನ್ನು ಸಿನಿಮಾ ಮಾತ್ರವಲ್ಲ, ತಮ್ಮ ಫ್ಯಾಷನ್ಸ್ಟೇಟ್ಮೆಂಟ್ಗಳ ಅಪ್ಡೇಟ್ಗಳಿಗಾಗಿಯೇ ಮೀಸಲಿರಿಸಿದ್ದಾರೆ. ಒಂದಕ್ಕಿಂತ ಒಂದು ಅತ್ಯಾಕರ್ಷಕ ಫ್ಯಾಷನ್ ಶೂಟ್ಗಳ ರೀಲ್ಸ್ ಹಾಗೂ ಫೋಟೋಗಳನ್ನು ಆಗಾಗ್ಗೆ ಅಪ್ಡೇಟ್ ಮಾಡುತ್ತಲೇ ಬಂದಿದ್ದಾರೆ. ಫಾಲೋವರ್ಗಳ ಮೆಚ್ಚುಗೆ ಗಳಿಸಿದ್ದಾರೆ.
ಬೃಂದಾ ವೈಬ್ರೆಂಟ್ ಔಟ್ಫಿಟ್
ವೈಬ್ರೆಂಟ್ ಶೇಡ್ನ ಲೆಮೆನ್ ಯೆಲ್ಲೋ ಗ್ಲಿಟ್ಟರ್ ಸಿಕ್ವೀನ್ಸ್ ಫ್ಯಾಬ್ರಿಕ್ನ ಗ್ಲಾಮರಸ್ ಹೈ ಸ್ಲಿಟ್ ಗೌನ್ ಬೃಂದಾ ಆಚಾರ್ಯಗೆ ಮಾದಕ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಸೀಸನ್ ಟ್ರೆಂಡ್ನಲ್ಲಿರುವ ಸಿಕ್ವಿನ್ಸ್ ಪಾರ್ಟಿವೇರ್
ಇನ್ನು, ಬೃಂದಾ ಕೂಡ ಈ ಸೀಸನ್ನಲ್ಲಿ ಟ್ರೆಂಡಿಯಾಗಿರುವ ಸಿಕ್ವಿನ್ಸ್ ಪಾರ್ಟಿವೇರ್ ಧರಿಸಿ, ಪೋಸ್ ನೀಡಿರುವುದು ಈ ಜನರೇಷನ್ ಹುಡುಗಿಯರ ಕಣ್ಣುಕುಕ್ಕಿದೆ. ಈ ಸೀಸನ್ನಲ್ಲಿ ಸಿಕ್ವಿನ್ಸ್ ಪಾರ್ಟಿವೇರ್ಗಳು ಟ್ರೆಂಡಿಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಒಟ್ಟಾರೆ, ನಟಿ ಬೃಂದಾ ಆಚಾರ್ಯರ ಈ ಸಿಕ್ವಿನ್ ಪಾರ್ಟಿವೇರ್ ಸದ್ಯ ಜೆನ್ ಜಿಯವರನ್ನು ಸೆಳೆದಿದೆ ಎನ್ನಬಹುದು.
ಸ್ಯಾಂಡಲ್ವುಡ್ ನಟಿ ಬೃಂದಾ ಆಚಾರ್ಯ ಲೆಮೆನ್ ಯೆಲ್ಲೋ ಗ್ಲಿಟ್ಟರ್ ಪಾರ್ಟಿವೇರ್ ಹೈ ಸ್ಲಿಟ್ ಗೌನ್ನಲ್ಲಿ ಮಿಂಚಿದ್ದಾರೆ.