Star Fashion 2025: ಗೋಲ್ಡನ್ ಸಿಕ್ವೀನ್ಸ್ ಮಿನಿ ಡಿಸ್ಕೋ ಡ್ರೆಸ್ನಲ್ಲಿ ಜಗಮಗಿಸಿದ ನಟಿ ಶೆಹ್ನಾಜ್ ಗಿಲ್!
Star Fashion 2025: ಗೋಲ್ಡನ್ ಓವರ್ ಸೈಝ್ ಸಿಕ್ವೀನ್ಸ್ ಮಿನಿ ಡ್ರೆಸ್ನಲ್ಲಿ ನಟಿ ಹಾಗೂ ಹಿಂದಿ ವರ್ಷನ್ ಬಿಗ್ಬಾಸ್ನ ಮಾಜಿ ಸ್ಪರ್ಧಿ ಶೆಹ್ನಾಜ್ ಗಿಲ್ ಜಗಮಗಿಸಿದ್ದಾರೆ. ಹಾಲಿವುಡ್ ತಾರೆಯಂತೆ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಔಟ್ಫಿಟ್? ಇದ್ಯಾವ ಲುಕ್? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಶೆಹ್ನಾಜ್ ಗಿಲ್, ನಟಿ., ಚಿತ್ರಕೃಪೆ: ರಿಷಬ್ ಕೆ. ಫೋಟೋಗ್ರಾಫಿ


ನಟಿ ಶೆಹ್ನಾಜ್ ಗಿಲ್ ಗೋಲ್ಡನ್ ಗರ್ಲ್ನಂತೆ ಜಗಮಗಿಸಿದ್ದಾರೆ. ಹೌದು, ಗೋಲ್ಡನ್ ಓವರ್ ಸೈಝ್ ಸಿಕ್ವೀನ್ಸ್ ವಿನ್ಯಾಸದ ಮಿನಿ ಡ್ರೆಸ್ನಲ್ಲಿ ನಟಿ ಹಾಗೂ ಹಿಂದಿ ವರ್ಷನ್ ಬಿಗ್ಬಾಸ್ನ ಮಾಜಿ ಸ್ಪರ್ಧಿ ಶೆಹ್ನಾಜ್ ಗಿಲ್ ಗೋಲ್ಡನ್ ಗರ್ಲ್ನಂತೆ ಜಗಮಗಿಸಿದ್ದು, ಹಾಲಿವುಡ್ ಸ್ಟಾರ್ನಂತೆ ಕಾಣಿಸಿಕೊಂಡಿದ್ದಾರೆ.

ಫ್ಯಾಷೆನೇಬಲ್ ಶೆಹ್ನಾಜ್ ಗಿಲ್
ಅಂದಹಾಗೆ, ಶೆಹ್ನಾಜ್ ಗಿಲ್ ಸಾಕಷ್ಟು ಸಿರಿಯಲ್ ಮುಖಾಂತರವೇ ಸಾಕಷ್ಟು ಹೆಸರು ಮಾಡಿದವರು. ತದನಂತರ ಹಿಂದಿ ಭಾಷೆಯ ಬಿಗ್ಬಾಸ್ನಲ್ಲಿ ಪಾಲ್ಗೊಂಡ ನಂತರವಂತೂ ಅವರು ಮತ್ತಷ್ಟು ಖ್ಯಾತಿ ಗಳಿಸಿದ್ದರು. ಅಷ್ಟು ಮಾತ್ರವಲ್ಲ, ತನ್ನ ಬಾಯ್ಫ್ರೆಂಡ್ ಸಿದ್ಧಾರ್ಥ್ ಶುಕ್ಲಾ ಸಾವಿನ ನಂತರ ಜನರ ಅನುಕಂಪ ಗಳಿಸಿ, ಮೊದಲಿಗಿಂತ ಹೆಚ್ಚು ಜನಪ್ರಿಯರಾದರು. ಇನ್ನು, ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಫೋಟೋಶೂಟ್ಗಳ ಮೂಲಕ ಅತಿ ಹೆಚ್ಚು ಫಾಲೋವರ್ಸ್ಗಳನ್ನು ಗಳಿಸಿದರು.

ಗೋಲ್ಡನ್ ಓವರ್ಸೈಝ್ ಸಿಕ್ವೀನ್ಸ್ ಮಿನಿ ಡ್ರೆಸ್ ಸ್ಪೆಷಾಲಿಟಿ
ಇನ್ನು ಶೆಹ್ನಾಜ್ ಗಿಲ್ ಧರಿಸಿರುವ ಗೋಲ್ಡನ್ ಓವರ್ಸೈಝ್ ಸಿಕ್ವಿನ್ಸ್ ಮಿನಿ ಡ್ರೆಸ್ ಅವರಿಗೆ ಯಾವ ಮಟ್ಟಿಗೆ ಗ್ಲಾಮರಸ್ ಲುಕ್ ನೀಡಿದೆ ಎಂದರೇ ಖುದ್ದು ಶೆಹ್ನಾಜ್ಗೆ ಈ ಔಟ್ಫಿಟ್ ಸಖತ್ ಇಷ್ಟವಾಗಿದೆಯಂತೆ. ಅಂದಹಾಗೆ, ಈ ಸಿಕ್ವೀನ್ಸ್ಗಳು ಕಾಯಿನ್ ಸೈಝ್ನದ್ದಾಗಿವೆ. ಅಲ್ಲದೇ ಶೆಹ್ನಾಜ್ರನ್ನು ಹೈಲೈಟ್ ಮಾಡಿವೆ. ರಿಯಲ್ಮ್ ಬೈ ವೈಶಾಲಿ ಬ್ರಾಂಡ್ನ ಔಟ್ಫಿಟ್ ಇದಾಗಿದ್ದು, ಹಾಲಿವುಡ್ ಲುಕ್ಗೆ ಮ್ಯಾಚ್ ಆಗುವಂತೆ ಡಿಸೈನ್ ಮಾಡಲಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಶೆಹ್ನಾಜ್ ಡಿಸ್ಕೋ ಲುಕ್
ಈ ರೀತಿಯ ಔಟ್ಫಿಟ್ಗಳು ಡಿಸ್ಕೋ ಲುಕ್ಗೆ ಸಾಥ್ ನೀಡುವಂತವಾಗಿದ್ದು, ನೋಡುಗರಿಗೆ ರೆಟ್ರೊ ಸ್ಟೈಲ್ನಲ್ಲಿ ಡಿಸ್ಕೋ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಒಟ್ಟಾರೆ, ಶೆಹ್ನಾಜ್ ಗಿಲ್ರ ಈ ನಯಾ ಗೋಲ್ಡನ್ ಲುಕ್ ಫಾಲೋವರ್ಸ್ಗಳಿಗೆ ಹುಚ್ಚು ಹಿಡಿಸಿರುವುದಂತು ಗ್ಯಾರಂಟಿ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಗೋಲ್ಡನ್ ಓವರ್ ಸೈಝ್ ಸಿಕ್ವೀನ್ಸ್ ಮಿನಿ ಡ್ರೆಸ್ನಲ್ಲಿ ನಟಿ ಹಾಗೂ ಹಿಂದಿ ವರ್ಷನ್ ಬಿಗ್ಬಾಸ್ನ ಮಾಜಿ ಸ್ಪರ್ಧಿ ಶೆಹ್ನಾಜ್ ಗಿಲ್ ಜಗಮಗಿಸಿದ್ದಾರೆ.