Star Fashion 2025: ವಿಂಟರ್ನಲ್ಲಿ ಟ್ರೆಂಡಿಯಾದ ಕಾಜೋಲ್ ಧರಿಸಿದ ಸ್ಕರ್ಟ್ ಸೂಟ್
Kajol's Skirt Suit: ಬಾಲಿವುಡ್ ನಟಿ ಕಾಜೋಲ್ ಧರಿಸಿರುವ ಸ್ಲಿಮ್ ಫಿಟ್ ಸ್ಕರ್ಟ್ ಸೂಟ್ ಈ ವಿಂಟರ್ ಸೀಸನ್ನಲ್ಲಿ ಟ್ರೆಂಡಿಯಾಗಿದೆ. ಲೇಯರ್ ಲುಕ್ ನೀಡುವ ಈ ಔಟ್ಫಿಟ್ ಹೇಗೆಲ್ಲಾ ಸ್ಟೈಲಿಂಗ್ ಮಾಡಿದ್ದಾರೆ? ವಿಶೇಷತೆಯೇನು? ಎಂಬುದರ ಬಗ್ಗೆ ಸ್ಟೈಲಿಸ್ಟ್ಗಳು ಇಲ್ಲಿ ತಿಳಿಸಿದ್ದಾರೆ.
ಚಿತ್ರಗಳು: ಕಾಜೋಲ್, ಬಾಲಿವುಡ್ ನಟಿ -
ಬಾಲಿವುಡ್ ನಟಿ ಕಾಜೋಲ್ರ ಸ್ಕರ್ಟ್ ಸೂಟ್ ಈ ವಿಂಟರ್ ಸೀಸನ್ನಲ್ಲಿ ಟ್ರೆಂಡಿಯಾಗಿದೆ.
ವಿಂಟರ್ ಸೀಸನ್ಗೆ ಲಗ್ಗೆ
ಹೌದು, ಸದಾ ಒಂದಲ್ಲ ಒಂದು ಔಟ್ಫಿಟ್ನಲ್ಲಿ ಕಾಣಿಸಿಕೊಳ್ಳುವ ಬಾಲಿವುಡ್ ನಟಿ ಕಾಜೋಲ್ ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ಸ್ಲಿಮ್ ಫಿಟ್ ಸ್ಕರ್ಟ್ ಸೂಟ್, ಈಗಾಗಲೇ ವಿಂಟರ್ ಸೀಸನ್ನಲ್ಲಿ ಟ್ರೆಂಡಿಯಾಗಿದ್ದು, ಕಾರ್ಪೋರೇಟ್ ಕ್ಷೇತ್ರದಲ್ಲಿ ಮಾತ್ರವಲ್ಲ, ಬಿಸ್ನೆಸ್ ವುಮೆನ್ ಕೆಟಗರಿಯ ಫ್ಯಾಷನ್ನಲ್ಲೂ ತನ್ನ ಹವಾ ಬೀಸಿದೆ. ಸ್ಟ್ರಾಂಗ್ ಐಡೆಂಟಿಟಿಗೆ ಈ ಔಟ್ಫಿಟ್ ಬೆಸ್ಟ್ ಎಂಬಂತಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಸೆಲೆಬ್ರೆಟಿಗಳನ್ನು ಸವಾರಿ ಮಾಡುತ್ತಿರುವ ಸ್ಕರ್ಟ್ ಸೂಟ್
ಎಂದಿನಂತೆ ಈ ವಿಂಟರ್ನಲ್ಲಿ ಸ್ಕರ್ಟ್ ಸೂಟ್ಗಳು ಮರಳುತ್ತವೆ. ನಾನಾ ವಿನ್ಯಾಸದಲ್ಲಿ ನಾನಾ ಪ್ರಿಂಟ್ಸ್ನಲ್ಲಿ ಫ್ಯಾಷನ್ಲೋಕದಲ್ಲಿ ಮಾತ್ರವಲ್ಲ, ಸಿನಿಮಾ ಸೆಲೆಬ್ರೆಟಿಗಳನ್ನು ಸವಾರಿ ಮಾಡುತ್ತವೆ. ಹಂಗಾಮ ಎಬ್ಬಿಸುತ್ತವೆ. ಟ್ರೆಂಡಿಯಾಗುತ್ತವೆ. ಅದೇ ರೀತಿ, ಇದೀಗ ಟ್ರೆಂಡಿಯಾಗಿರುವ ಸೂಟ್ಗಳಲ್ಲಿ, ಇದೀಗ ಮಹಿಳೆಯರ ಸ್ಕರ್ಟ್ ಸೂಟ್ಗಳು ಚಾಲ್ತಿಗೆ ಬಂದಿವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಸ್ಕರ್ಟ್ ಸೂಟ್ ವಿಶೇಷತೆ
ನೋಡಲು ಥೇಟ್ ಸೂಟ್ನಂತೆಯೇ ಕಾಣಿಸುವ ಈ ಔಟ್ಫಿಟ್ಗೆ ಪ್ಯಾಂಟ್ ಬದಲು ಸ್ಕರ್ಟ್ ಮ್ಯಾಚ್ ಮಾಡಲಾಗಿರುತ್ತದೆ. ಇದು ಫೇಮಿನಿಸಂನ ಧ್ಯೋತಕವೆಂಬಂತೆ ಕಾಣಿಸುತ್ತದೆ. ಲೇಯರ್ ಲುಕ್ ನೀಡುವ ಈ ಔಟ್ಫಿಟ್ ಈ ಸೀಸನ್ನಲ್ಲಿ ದೇಹವನ್ನು ಬೆಚ್ಚಗಿಡುತ್ತದೆ ಹಾಗೂ ನೋಡಲು ಚೆನ್ನಾಗಿ ಕಾಣಿಸುತ್ತದ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಬಾಲಿವುಡ್ ನಟಿ ಕಾಜೋಲ್ ಧರಿಸಿರುವ ಸ್ಲಿಮ್ ಫಿಟ್ ಸ್ಕರ್ಟ್ ಸೂಟ್ ಈ ವಿಂಟರ್ ಸೀಸನ್ನಲ್ಲಿ ಟ್ರೆಂಡಿಯಾಗಿದೆ.