ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

BMW ಕಾರಿನಲ್ಲಿ ಬಂದು ಝೊಮೆಟೊ ಡೆಲಿವರಿ ನೀಡಿದ ವ್ಯಕ್ತಿ: ದೃಶ್ಯ ಕಂಡು ಶಾಕ್ ಆದ ನೆಟ್ಟಿಗರು!

ಆರ್ಡರ್ ವಸ್ತುಗಳನ್ನು ಸಾಮಾನ್ಯವಾಗಿ ಡೆಲಿವರಿ ಬಾಯ್ ಬೈಕ್ ಅಥವಾ ಸ್ಕೂಟರ್‌ನಲ್ಲಿ ಬಂದು ತಲುಪಿಸಿರುವುದನ್ನು ನೀವು ನೋಡಿರಬಹುದು. ಆದರೆ ಮಹಾರಾಷ್ಟ್ರದಲ್ಲಿ ಡೆಲಿವರಿಬಾಯ್ ವೊಬ್ಬರು ಕೋಟಿ ಬೆಲೆಯ BMW X3 ಐಷಾರಾಮಿ ಕಾರಿನಲ್ಲಿ ಬಂದು ಆರ್ಡರ್ ತಲುಪಿಸಿದ್ದಾರೆ. ಸದ್ಯ ಇದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಐಷಾರಾಮಿ ಕಾರಿನಲ್ಲಿ ಬಂದು ಆರ್ಡರ್ ತಲುಪಿಸಿದ ಡೆಲಿವರಿ ಬಾಯ್!

ಐಷಾರಾಮಿ ಕಾರಿನಲ್ಲಿ ಆರ್ಡರ್ ತಲುಪಿಸಿದ ಡೆಲಿವರಿ ಬಾಯ್ -

Profile
Pushpa Kumari Mar 3, 2026 3:19 PM

ನವದೆಹಲಿ,ಮಾ.3: ಇತ್ತೀಚೆಗೆ ಅಗತ್ಯ ವಸ್ತುಗಳನ್ನು ಆನ್ ಲೈನ್ ಮೂಲಕವೇ ಆರ್ಡರ್ ಮಾಡುತ್ತೇವೆ. ಅಮೆಜಾನ್, ಬ್ಲಿಂಕಿಟ್ ,ಜಿಯೋ ಮಾರ್ಟ್ ಹೀಗೆ ನಾನಾ ಆ್ಯಪ್‌ಗಳಿವೆ. ಆದರೆ ಮಹಾರಾಷ್ಟ್ರದಲ್ಲಿ ಝೊಮೆಟೊ ಡೆಲಿವರಿ ಬಾಯ್ ಕೋಟಿ ಬೆಲೆಯ BMW X3 ಐಷಾರಾಮಿ ಕಾರಿನಲ್ಲಿ ಬಂದು ಆರ್ಡರ್ ತಲುಪಿಸಿದ್ದಾರೆ. ಸದ್ಯ ಇದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಇತ್ತೀಚೆಗೆ ಟ್ವಿಟರ್ ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ವ್ಯಕ್ತಿಯೊರ್ವ ರಾತ್ರಿಯ ಸಮಯ ದಲ್ಲಿ ಬಿಳಿ ಬಣ್ಣದ ಐಷಾರಾಮಿ ಕಾರಿನಲ್ಲಿ ಬಂದು ಗ್ರಾಹಕರಿಗೆ ಆಹಾರ ತಲುಪಿಸಿದ ದೃಶ್ಯ ಕಂಡುಬಂದಿದೆ. ಝೊಮೆಟೊ ಆರ್ಡರ್ ತಲುಪಿಸಿದ ಡೆಲಿವರಿ ಬಾಯ್ ಸಾಮಾನ್ಯ ದ್ವಿಚಕ್ರ ವಾಹನದಲ್ಲಿ ಬರುವ ಬದಲಿಗೆ BMW X3 ಕಾರಿನಲ್ಲಿ ಆಗಮಿಸಿದ್ದಾರೆ.

ವೈರಲ್ ಆದ ದೃಶ್ಯದಲ್ಲಿ ಝೊಮೆಟೊ ಡೆಲಿವರಿ ಬಾಯ್ ತನ್ನ ಕಾರಿನಲ್ಲಿ ಕುಳಿತಿರುವುದನ್ನು ಕಾಣಬಹುದು. ಮಾಹಿತಿ ಪ್ರಕಾರ, ಈ ವ್ಯಕ್ತಿ ತನ್ನ ಸ್ನೇಹಿತನ ಜೊತೆ ಮಾತನಾಡುತ್ತಾ, "ನಾನು ಜೊಮ್ಯಾಟೊ ಆರ್ಡರ್ ನೀಡಿದ ವಸ್ತು ತಲುಪಿಸಲು ಬಂದಿದ್ದಾನೆ ಎಂದು ಹೇಳುತ್ತಾನೆ. ಮೊದಲು ಇದನ್ನು ತಮಾಷೆ ಎಂದುಕೊಂಡ ಸ್ನೇಹಿತ ಹೇಗೆ ಹೋಗಿದ್ದೀಯಾ ಕೇಳಿದಾಗ ಆತ "BMW X3" ಎಂದು ಉತ್ತರಿಸುತ್ತಾನೆ.

Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ತಮಾಷೆಯ ಹೊರತಾಗಿಯೂ, ಆ ವ್ಯಕ್ತಿ ಆರ್ಡರ್‌ ಹಣವನ್ನು ಗ್ರಾಹಕರು ಈಗಾಗಲೇ ಆನ್‌ ಲೈನ್‌ನಲ್ಲಿ ಪಾವತಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜನರು ಎರಡು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಹೆಚ್ಚಿನ ಬಳಕೆದಾರರು ಫೋಟೋಗಳನ್ನು ಸಕಾರಾತ್ಮಕವಾಗಿ ನೋಡಿದರೆ ಇನ್ನೊಂದೆಡೆ, ಕೆಲವರು ಇದು ಪ್ರಚಾರಕ್ಕಾಗಿ ಅಥವಾ ವೀಡಿಯೊ ವೈರಲ್ ಮಾಡಲು ಮಾಡಿದ ಕಂಟೆಂಟ್ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.