Star Fashion 2025: 50 ವರ್ಷ ದಾಟಿದರೂ ಡ್ರೇಪ್ಡ್ ಸ್ಕರ್ಟ್ನಲ್ಲಿ ಯುವತಿಯಂತೆ ಕಂಡ ಮಾಧುರಿ ದೀಕ್ಷಿತ್
Madhuri Dixit: ಡ್ರೇಪ್ಡ್ ಸ್ಕರ್ಟ್ ಹಾಗೂ ಕಾಲರ್ ಶರ್ಟ್ ಸ್ಟೈಲ್ ಟಾಪ್ನಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹುಡುಗಿಯಂತೆ ಪೋಸ್ ನೀಡಿದ್ದಾರೆ. ಇವರ ಸೌಂದರ್ಯವನ್ನು ಹೆಚ್ಚಿಸಿದ ಈ ಔಟ್ಫಿಟ್ನ ಸ್ಪೆಷಾಲಿಟಿಯಾದರೂ ಏನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ -
ಡ್ರೇಪ್ಡ್ ಸ್ಕರ್ಟ್ ಔಟ್ಫಿಟ್ನಲ್ಲಿ ಧಕ್ ಧಕ್ ಬೆಡಗಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಥೇಟ್ ಯುವತಿಯಂತೆ ಪೋಸ್ ನೀಡಿದ್ದಾರೆ.
ಅರ್ತ್ ಟೋನ್ ಎನ್ನಲಾಗುವ ಅಬ್ಸ್ಟ್ರಾಕ್ಟ್ ಪ್ರಿಂಟ್ಸ್ ಇರುವಂತಹ ನೆರಿಗೆಗಳಿರುವ ಡ್ರೇಪ್ಡ್ ಸ್ಕರ್ಟ್ ಹಾಗೂ ಇದಕ್ಕೆ ಹೊಂದುವಂತಹ ಕಾಲರ್ ಶರ್ಟ್ ಸ್ಟೈಲ್ನ ಟಾಪ್, ಮಾಧುರಿ ದೀಕ್ಷಿತ್ರನ್ನು ಯುವತಿಯಂತೆ ಬಿಂಬಿಸಿದೆ.
ಫ್ಯಾಷೆನಬಲ್ ಮಾಧುರಿ ದೀಕ್ಷಿತ್
ವಯಸ್ಸು 50 ದಾಟಿದ್ದರೂ ಏಜ್ ಈಸ್ ಜಸ್ಟ್ ನಂಬರ್ ಎನ್ನುವಂತೆ ನಟಿ ಮಾಧುರಿ ದೀಕ್ಷಿತ್ ಸೌಂದರ್ಯ ಮಾತ್ರ ಇನ್ನೂ ಕಳೆಗುಂದಿಲ್ಲ! ಬದಲಿಗೆ ಹೆಚ್ಚುತ್ತಲೇ ಇದೆ. ಪ್ರತಿ ಕಾರ್ಯಕ್ರಮಗಳಲ್ಲಿ ಮಾಧುರಿ ದೀಕ್ಷಿತ್ ಅವರು ಭಾಗವಹಿಸುವಾಗ ಫ್ಯಾಷನ್ ಫೋಟೋಶೂಟ್ಗಳನ್ನು ಮಾಡಿಸುತ್ತಾರಂತೆ. ಇದು ಅವರ ರುಟಿನ್ಗಳಲ್ಲಿ ಸೇರಿದೆಯಂತೆ. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ. ಅವರ ಪ್ರಕಾರ, ಪ್ರತಿ ಔಟ್ಫಿಟ್ಗಳಲ್ಲೂ ಡಿಸೈನರ್ಗಳ ಹಾರ್ಡ್ ವರ್ಕ್ ಇರುತ್ತದೆ. ಹಾಗಾಗಿ ನಟಿಯರು ಸುಮ್ಮನೆ ಧರಿಸಿ, ಹಾಗೆಯೇ ಮರೆಯುವುದು ತಪ್ಪು, ಬದಲಿಗೆ ಆ ಡಿಸೈನರ್ವೇರ್ನಲ್ಲಿ ಫೋಟೋಶೂಟ್ ಮಾಡಿಸಿ, ಅಪ್ಡೇಟ್ ಮಾಡಿದಲ್ಲಿ, ಟ್ರೆಂಡ್ ಸೆಟ್ ಮಾಡಬಹುದು ಎನ್ನುತ್ತಾರೆ.
ಮಾಧುರಿ ದೀಕ್ಷಿತ್ ಡಿಸೈನರ್ವೇರ್ ಚಾಯ್ಸ್
ಸೀರೆ ಮಾತ್ರವಲ್ಲ, ಸಾಕಷ್ಟು ವೈವಿಧ್ಯಮಯ ಡಿಸೈನರ್ವೇರ್ಗಳನ್ನು ಧರಿಸುವ ಮಾಧುರಿಯವರು ನಾನಾ ಬಗೆಯ ಡಿಸೈನ್ ಹಾಗೂ ಪ್ರಿಂಟ್ಸ್ಗಳಿಗೆ ಪ್ರಾಮುಖ್ಯತೆ ನೀಡುತ್ತಾರಂತೆ. ಹಾಗೆನ್ನುತ್ತಾರೆ ಅವರ ಸ್ಟೈಲಿಸ್ಟ್ಗಳು.
ಮಾಧುರಿಯ ಅಂದ ಹೆಚ್ಚಿಸುವ ಡಿಸೈನರ್ವೇರ್ಸ್
ಒಟ್ಟಾರೆ, ಮಾಧುರಿ ದೀಕ್ಷಿತ್ ಅವರ ಫ್ಯಾಷನ್ವೇರ್ಗಳ ಚಾಯ್ಸ್ ಹೇಗಿರುತ್ತದೆ ಎಂದರೆ, ಬಹುತೇಕ ಎಲ್ಲಾ ಔಟ್ಫಿಟ್ಗಳು ಅವರಿಗಾಗಿಯೇ ಸಿದ್ಧಗೊಂಡಿವೆ ಎನಿಸುತ್ತವೆ. ಅದು ವೆಸ್ಟರ್ನ್ ಆಗಬಹುದು ಅಥವಾ ಇಂಡಿಯನ್ ಲುಕ್ ಆಗಬಹುದು ಎಂದು ಹೇಳುತ್ತಾರೆ ಫ್ಯಾಷನ್ ವಿಮರ್ಶಕರು.