Star Fashion 2025: ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ ಬ್ಯೂಟಿ ಸಿಕ್ರೇಟ್ಸ್ ಏನು ಗೊತ್ತಾ?
Manvitha Kamath: ಫ್ಯಾಷನ್ ಬ್ರಾಂಡ್ ಮನೆಕಿನ್ ಮೂಲಕ ಫ್ಯಾಷನ್ ಕ್ಷೇತ್ರಕ್ಕೂ ಕಾಲಿಟ್ಟಿರುವ ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್, ವಿಶ್ವವಾಣಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಫ್ಯಾಷನ್- ಸ್ಟೈಲ್ ಹಾಗೂ ಬ್ಯೂಟಿ ಕೇರ್ ಬಗ್ಗೆ ಒಂದಿಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರಗಳು: ಮಾನ್ವಿತಾ ಕಾಮತ್, ನಟಿ, ಬಿಸ್‌ನೆಸ್ ವುಮೆನ್ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಬ್ರಾಂಡ್ ಮನೆಕಿನ್ ಮೂಲಕ ಸ್ಯಾಂಡಲ್‌ವುಡ್‌ನಿಂದ ಫ್ಯಾಷನ್ ಕ್ಷೇತ್ರಕ್ಕೂ (Star Fashion 2025) ಬಿಸ್‌ನೆಸ್ ವುಮೆನ್ ಆಗಿ ಎಂಟ್ರಿ ನೀಡಿರುವ ನಟಿ ಮಾನ್ವಿತಾ ಕಾಮತ್ (Manvitha Kamath) ಅವರ ಪವರ್ ಡ್ರೆಸ್ಸಿಂಗ್ ಈಗಾಗಲೇ ಎಲ್ಲರನ್ನು ಆಕರ್ಷಿಸಿದೆ. ಇದರೊಂದಿಗೆ ತಮ್ಮದೇ ಫ್ಯಾಷನ್-ಸ್ಟೈಲ್ ಸ್ಟೇಟ್‌ಮೆಂಟ್‌ಗಳನ್ನು ಹೊಂದಿರುವ ಅವರು ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬ್ಯೂಟಿ ಸಿಕ್ರೇಟ್ ಬಗ್ಗೆಯೂ ಹಂಚಿಕೊಂಡಿದ್ದಾರೆ.
ವಿಶ್ವವಾಣಿ ನ್ಯೂಸ್: ಫ್ಯಾಷನ್ ಕ್ಷೇತ್ರಕ್ಕೂ ಕಾಲಿಟ್ಟಿರುವ ನಿಮ್ಮ ಫ್ಯಾಷನ್ ಐಕಾನ್ ಯಾರು?
ಮಾನ್ವಿತಾ ಕಾಮತ್: ನಮ್ಮಮ್ಮ.
ವಿಶ್ವವಾಣಿ ನ್ಯೂಸ್: ನಟಿಯಾಗಿರುವ ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ಮಾನ್ವಿತಾ ಕಾಮತ್: ಎಂದೆಂದಿಗೂ ಕಂಫರ್ಟಬಲ್‌ವೇರ್‌ಗೆ ನನ್ನ ಮೊದಲ ಆದ್ಯತೆ. ಇತ್ತೀಚೆಗೆ ನನ್ನ ಬ್ರಾಂಡ್‌ನ ಪವರ್ ಡ್ರೆಸ್ಸಿಂಗ್ ಕಾನ್ಸೆಪ್ಟ್ ನನಗಿಷ್ಟವಾಗಿದೆ.
ವಿಶ್ವವಾಣಿ ನ್ಯೂಸ್: ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ಹೇಳಿ?
ಮಾನ್ವಿತಾ ಕಾಮತ್: ಪ್ರತಿಯೊಂದು ಅತ್ಯುತ್ತಮ ಸ್ಟೈಲ್‌ಗೆ ಹೇರ್‌ಸ್ಟೈಲ್ ಕೊಡುಗೆ ಅಪಾರ.
ಈ ಸುದ್ದಿಯನ್ನೂ ಓದಿ | Winter Fashion 2025: ಚಳಿಗಾಲದಲ್ಲಿ ಹುಡುಗಿಯರಿಗೆ ಗ್ಲಾಮರಸ್ ಲುಕ್ ನೀಡಲು ಬಂತು ಕ್ರಾಪ್ ಸ್ವೆಟರ್ಸ್
ವಿಶ್ವವಾಣಿ ನ್ಯೂಸ್: ನಿಮ್ಮ ಬ್ಯೂಟಿ ಸಿಕ್ರೇಟ್ಸ್?
ಮಾನ್ವಿತಾ ಕಾಮತ್: ಜಿಮ್ & ಡಯಟ್! ಇನ್ನು, ಮುಖದ ಆರೈಕೆ ವಿಷಯಕ್ಕೆ ಬಂದ್ರೆ, ಕಿತ್ತಳೆ, ಬಾಳೆಹಣ್ಣಿನ ಸಿಪ್ಪೆಯಿಂದ ಫೇಸ್ ಸ್ಕ್ರಬ್ ಮಾಡುತ್ತೇನೆ. ಆಲೋವೇರಾ ಬಳಸುತ್ತೇನೆ. ಹೊರಗಡೆ ಫೇಶಿಯಲ್ ಮಾಡಿಸುವುದಿಲ್ಲ, ಇನ್ನು, ಚಿಕ್ಕವಳಿದ್ದಾಗ ನಮ್ಮಮ್ಮ ಹಾಲಿನ ಕೆನೆಯನ್ನು ನನ್ನ ಮುಖಕ್ಕೆ ಲೇಪಿಸಿ, ಮಾಲಿಶ್ ಮಾಡುತ್ತಿದ್ದರು.
ವಿಶ್ವವಾಣಿ ನ್ಯೂಸ್: ಹೇರ್ ಕೇರ್ ಬಗ್ಗೆ ಹೇಳುವಿರಾ?
ಮಾನ್ವಿತಾ ಕಾಮತ್: ಆಗಾಗ್ಗೆ ಕೊಬ್ಬರಿ ಎಣ್ಣೆ, ಹರಳೆಣ್ಣೆ ಹಚ್ಚುತ್ತಿರುತ್ತೇನೆ. ಹೇರ್‌ಸ್ಪಾ ತೆಗೆದುಕೊಳ್ಳುತ್ತೇನೆ. ಇನ್ನು, ಕೂದಲಿನ ಆರೋಗ್ಯಕ್ಕಾಗಿ ಫ್ಲಾಕ್ಸ್, ಚಿಯಾ ಸೀಡ್ಸ್ ಸೇವಿಸುತ್ತೇನೆ.
ವಿಶ್ವವಾಣಿ ನ್ಯೂಸ್: ನಿಮಗಿಷ್ಟವಾದ ಅಟೈರ್?
ಮಾನ್ವಿತಾ ಕಾಮತ್: ನಮ್ಮ ಬ್ರಾಂಡ್‌ನ ಪವರ್ ಸೂಟ್ಸ್. ಇನ್ನು, ಸೀರೆ ಉಡುವುದು ಕೂಡ ನನಗಿಷ್ಟ.