Chikkaballapur News: ಸಾಹಿತ್ಯದ ಮೂಲಕವೇ ಅಂತರಂಗದಲ್ಲಿ ಬೆಳಕು ಮೂಡಿಸುವ ಗುರುವಾದವರು ಶ್ರೀಜಚನಿ : ನಿಡುಮಾಮಿಡಿ ಪೀಠಾಧ್ಯಕ್ಷ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ
ಆಧ್ಯಾತ್ಮವನ್ನು ಜನಸಾಮಾನ್ಯರಿಗೆ ಅರ್ಥವಾಗಿಸುವ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯುತ್ತಲೇ ಅದರಲ್ಲಿ ಸಾಫಲ್ಯವನ್ನು ಕಂಡೆವರು ನಮ್ಮ ಗುರುಗಳಾದ ಜಚನಿ. ಸಮಾಜ ದಲ್ಲಿದ್ದ ಅನಿಷ್ಟಗಳ ವಿರುದ್ಧ ಸಮರ ಸಾರಿದ್ದಷ್ಟೇ ಅಲ್ಲದೆ ಅಲ್ಲಿ ಗುಣಾತ್ಮಕವಾದ ಸುಧಾರಣೆ ಯ ಕಾರ್ಯ ಮಾಡಿದವರು.
ಸಾಹಿತ್ಯದ ಮೂಲಕವೇ ಅಂತರAಗದಲ್ಲಿ ಬೆಳಕು ಮೂಡಿಸುವ ಗುರುವಾದವರು ಶ್ರೀಜಚನಿ ಎಂದು ನಿಡುಮಾಮಿಡಿ ಪೀಠಾಧ್ಯಕ್ಷ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ತಿಳಿಸಿದರು. -
ಚಿಕ್ಕಬಳ್ಳಾಪುರ: ಮಾನವ ಧರ್ಮಪೀಠದ ಪೀಠಾಧ್ಯಕ್ಷರಾಗಿದ್ದ ಡಾ.ಜಚನಿ ಅವರು ಈಗಿನ ಪೀಠಾಧಿಪತಿಗಳಂತೆ ಶಾಲೆ ಕಾಲೇಜು ತೆರೆದು ಶಿಕ್ಷಣವನ್ನು ವಾಣಿಜ್ಯೀಕರಣ ಮಾಡಿ ಕೋಟಿ ಗಟ್ಟಲೆ ಹಣ ಸಂಪಾದನೆ ಮಾಡುವ ಜನಪ್ರಿಯ ಮಾರ್ಗವನ್ನು ಹಿಡಿದವರಲ್ಲ. ಬದಲಿಗೆ ಸಾಹಿತ್ಯದ ಮೂಲಕವೇ ಸನ್ಮಾರ್ಗವನ್ನು ಕಂಡು ಅಂತರಂಗದಲ್ಲಿ ಬೆಳಕು ಮೂಡಿಸುವ ಗುರುವಾದವರು ಎಂದು ನಿಡುಮಾಮಿಡಿ ಪೀಠಾಧ್ಯಕ್ಷ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.
ಚಿಕ್ಕಬಳ್ಳಾಪುರದ ನಿಡುಮಾಮಿಡಿ ಶಾಖಾಮಠದಲ್ಲಿ ಬುಧವಾರ ಏರ್ಪಡಿಸಿದ್ದ ಡಾ.ಜಚನಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಆಧ್ಯಾತ್ಮವನ್ನು ಜನಸಾಮಾನ್ಯರಿಗೆ ಅರ್ಥವಾಗಿಸುವ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯುತ್ತಲೇ ಅದರಲ್ಲಿ ಸಾಫಲ್ಯವನ್ನು ಕಂಡೆವರು ನಮ್ಮ ಗುರುಗಳಾದ ಜಚನಿ. ಸಮಾಜ ದಲ್ಲಿದ್ದ ಅನಿಷ್ಟಗಳ ವಿರುದ್ಧ ಸಮರ ಸಾರಿದ್ದಷ್ಟೇ ಅಲ್ಲದೆ ಅಲ್ಲಿ ಗುಣಾತ್ಮಕವಾದ ಸುಧಾರಣೆಯ ಕಾರ್ಯ ಮಾಡಿದವರು.ಮಾನವ ಧರ್ಮಪೀಠದಲ್ಲಿ ಜಾತಿಮತ ಕುಲಗೋತ್ರ ಗಳ ಗಾಳಿ ಸುಳಿಯದಂತೆ ಜಾಗೃತೆವಹಿಸಿದವರು ಜಚನಿಯವರು ಎಂದರು.
ಇದನ್ನೂ ಓದಿ: Chikkaballapur News: ಜಿಲ್ಲಾಡಳಿತ ವತಿಯಿಂದ ಅಂತರಾಷ್ಟ್ರೀಯ ದತ್ತು ಮಾಸಾಚರಣೆ
ಗುರು ಎಂದರೆ ಭಾರ, ಬೆಳಕು ಎಂದರ್ಥವಿದೆ. ಬಹಳಷ್ಟು ಸ್ವಾಮೀಜಿಗಳು ಬೆಳಕಾಗುವು ದಕ್ಕಿಂತ ಭಾರವಾಗಿದ್ದೇ ಹೆಚ್ಚು. ೨೦ ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಕೆಲವ ಸ್ವಾಮೀಜಿಗಳು ಜ್ಞಾನದ ಬೆಳಕನ್ನು ಮೂಡಿಸುವ ಕೆಲಸ ಮಾಡಿದ್ದು, ಅವರಲ್ಲಿ ಜಚನಿ ಸಾಹಿತ್ಯದ ಸೂರ್ಯ ಎಂದು ಕರೆಸಿಕೊಂಡ ಗುರುವಾಗಿದ್ದರು ಎಂದರು.
ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ ಅಲ್ಪಸಂಖ್ಯಾತರು ಬಹುಸಂಖ್ಯಾತರು, ಆ ಜಾತಿ ಈ ಜಾತಿ ಎಂದೆಲ್ಲ ಬಡಿದಾಡುತ್ತಿರುವ ಕಾಲಘಟ್ಟದಲ್ಲಿ ದಲಿತರನ್ನು ಅರ್ಚಕ ರನ್ನಾಗಿ ನೇಮಿಸಿದ ಜಚನಿಯವರು ಕ್ರಾಂತಿಕಾರಿ ಸಂನ್ಯಾಸಿಗಳೆನಿಸಿಕೊಳ್ಳುತ್ತಾರೆ. ಮಾನವ ಧರ್ಮ ಪೀಠದ ಹೆಸರಿನಲ್ಲಿ ಮನುಷ್ಯರೆಲ್ಲಾ ಒಂದೇ, ನಮ್ಮದೆಲ್ಲಾ ಮಾನವ ಧರ್ಮ ಎಂದು ಪರಿಭಾವಿಸುವ ಗುರುವಾಗಿದ್ದ ಜಚನಿಯವರ ಕೊಡುಗೆ ಲೋಕಕ್ಕೆ ಅಪಾರವಾಗಿದ್ದು ಅವರ ಸ್ಮರಣೆಯ ಮೂಲಕ ಜೀವಪ್ರೀತಿಯನ್ನು ಪೋಷಿಸಬೇಕು ಎಂದು ಹೇಳಿದರು.
ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ ನಿರಂಜನ ವಾನಳ್ಳಿ ಮತ್ತು ಕಸಾಪ ಜಿಲ್ಲಾಧ್ಯಕ್ಷ ಡಾ ಕೋಡಿ ರಂಗಪ್ಪ ಮಾತನಾಡಿದರು. ಅಕ್ಕನ ಬಳಗದಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಡಾ.ಜಚನಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ ಶಿವಜ್ಯೋತಿ, ಸಿದ್ಧರಾಮಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ರಮ್ಯ, ಪಿಯು ಕಾಲೇಜಿನ ಪ್ರಾಂಶುಪಾಲರಾದ ಪವನ್ ಕುಮಾರ್ ಇದ್ದರು.