Star Fashion 2026: ಡೆನಿಮ್ ಕೋ ಆರ್ಡ್ ಸ್ಕರ್ಟ್ನಲ್ಲಿ ರಾಧಿಕಾ ನಾರಾಯಣ್ ಸ್ಟೈಲಿಶ್ ಲುಕ್
Actress Radhika Narayan: ಡೆನಿಮ್ ಕೋ ಆರ್ಡ್ ಸ್ಕರ್ಟ್ನಲ್ಲಿ ಸ್ಯಾಂಡಲ್ವುಡ್ ತಾರೆ ರಾಧಿಕಾ ನಾರಾಯಣ್ ಸ್ಟೈಲಿಶ್ ಆಗಿ ಜೆನ್ ಜಿ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಔಟ್ಫಿಟ್? ಅವರ ಲುಕ್ ಹೇಗಿದೆ? ಎಂಬುದನ್ನು ಫ್ಯಾಷನ್ ವಿಮರ್ಶಕರು ವಿವರಿಸಿದ್ದಾರೆ.
ಚಿತ್ರಗಳು: ರಾಧಿಕಾ ನಾರಾಯಣ್, ನಟಿ -
ನಟಿ ರಾಧಿಕಾ ನಾರಾಯಣ್ ಡೆನಿಮ್ ಕೋ ಆರ್ಡ್ ಸ್ಕರ್ಟ್ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ರಾಧಿಕಾ ಜೆನ್ ಜಿ ಲುಕ್
ಹೌದು, ಸದಾ ಸ್ಟೈಲಿಶ್ ಆಗಿಯೇ ಕಾಣಿಸಿಕೊಳ್ಳುವ ಸ್ಯಾಂಡಲ್ವುಡ್ ತಾರೆ ರಾಧಿಕಾ ನಾರಾಯಣ್ ಫ್ಯಾಷನ್ ಫೋಟೋಶೂಟ್ವೊಂದರಲ್ಲಿ ಸಖತ್ ಸ್ಟೈಲಿಶ್ ಆಗಿ ಜೆನ್ ಜಿ ಹುಡುಗಿಯಂತೆ ಯಂಗ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ರಾಧಿಕಾರ ಇಂಡಿಗೋ ಡೆನಿಮ್ ಕೋ ಆರ್ಡ್ ಸ್ಕರ್ಟ್ ಸೆಟ್
ಸದಾ ಒಂದಲ್ಲ ಒಂದು ಸ್ಟೈಲಿಶ್ ಆಗಿರುವ ಫೋಟೋಗಳನ್ನು ಅಪ್ಡೇಟ್ ಮಾಡುವ ನಟಿ ರಾಧಿಕಾ ನಾರಾಯಣ್, ಈ ಬಾರಿ ಲವ್ ಫ್ರಮ್ ಎಡಿಟ್ ಬ್ರಾಂಡ್ನ ಇಂಡಿಗೋ ಶೇಡ್ನ ಡೆನಿಮ್ ಸ್ಲಿವ್ಲೆಸ್ ಟಾಪ್ ಹಾಗೂ ಅದರೊಂದಿಗೆ ಮ್ಯಾಚ್ ಆಗುವಂತಹ ಸ್ಲಿಟ್ ಸ್ಕರ್ಟ್ ಧರಿಸಿ ಪೋಸ್ ನೀಡಿದ್ದಾರೆ.
ಹೀಗಿದೆ ರಾಧಿಕಾ ಔಟ್ಫಿಟ್ ವಿವರ
ಸ್ಲಿವ್ಲೆಸ್ ವೇಸ್ಕೋಟ್ನಂತಹ ಅಸ್ಸೆಮ್ಮಿಟ್ರಿಕಲ್ ಫ್ರಂಟ್ ಓವರ್ ಲ್ಯಾಪಿಂಗ್ ಇರುವಂತಹ ಈ ಟಾಪ್ ಮೇಲೆಲ್ಲಾ ಎಂಬ್ರಾಯ್ಡರಿ ಚಿತ್ತಾರವಿದೆ. ಇನ್ನು ಇದಕ್ಕೆ ಮ್ಯಾಚಿಂಗ್ನಂತಿರುವ ಮ್ಯಾಕ್ಸಿ ಲೆಂತ್ನ ಸ್ಕರ್ಟ್ಗೆ ಸೈಡ್ ಸ್ಲಿಟ್ ಇದ್ದು, ಎಂಬ್ರಾಯ್ಡರಿ ಸ್ಕರ್ಟ್ ಮೇಲೂ ಹರಡಿದೆ ಎನ್ನುವ ಫ್ಯಾಷನ್ ವಿಮರ್ಶಕರು, ರಾಧಿಕಾ ಈ ಉಡುಗೆಯಲ್ಲಿ ಗ್ಲಾಮರಸ್ ಆಗಿ ಕಾಣಿಸದಿದ್ದರೂ ಸಖತ್ ಎಲಿಗೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ನೋಡಲು ಥೇಟ್ ಜೆನ್ ಜಿ ಹುಡುಗಿಯಂತೆ ಪೋಸ್ ನೀಡಿದ್ದಾರೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.
ಟ್ರೆಂಡಿಯಾಗಿರುವ ಡೆನಿಮ್ ಕೋ ಆರ್ಡ್ ಸೆಟ್ಸ್
ಅಂದಹಾಗೆ, ಈ ಸೀಸನ್ನಲ್ಲಿ ಸಾಕಷ್ಟು ಬಗೆಯ ಡೆನಿಮ್ ಕೋ ಆರ್ಡ್ ಸೆಟ್ಗಳು ಟ್ರೆಂಡಿಯಾಗಿವೆ. ಇವು ನಯಾ ವಿನ್ಯಾಸದಲ್ಲಿ ಬಂದಿವೆ ಎನ್ನುವ ಸ್ಟೈಲಿಸ್ಟ್ಗಳು, ರಾಧಿಕಾರ ಈ ಲುಕ್ಕನ್ನು ಎಂತಹವರು ಸುಲಭವಾಗಿ ಪಡೆದುಕೊಳ್ಳಬಹುದು ಎನ್ನುತ್ತಾರೆ.