ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ಅನಿಲ್‌ ಕಪೂರ್‌ಗೆ ಯಂಗ್‌ ಲುಕ್‌ ನೀಡಿದ ಬ್ಲ್ಯಾಕ್‌ ಸ್ಲಿಮ್‌ ಫಿಟ್‌ ಸೂಟ್‌

ಇವೆಂಟ್‌ವೊಂದರಲ್ಲಿ ಬಾಲಿವುಡ್‌ ನಟ ಅನಿಲ್‌ ಕಪೂರ್‌ ಬ್ಲ್ಯಾಕ್‌ ಸೂಟ್‌ನಲ್ಲಿ ಚಿರ ಯುವಕನಂತೆ ಕಾಣಿಸಿಕೊಂಡಿದ್ದಾರೆ. ಅವರ ಈ ಅತ್ಯಾಕರ್ಷಕ ಲುಕ್‌ ಹೇಗಿದೆ? ಅವರ ಈ ಲುಕ್‌ಗೆ ಸಾಥ್‌ ನೀಡಿರುವ ಸಂಗತಿಗಳ್ಯಾವುವು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಅನಿಲ್‌ ಕಪೂರ್‌ಗೆ ಯಂಗ್‌ ಲುಕ್‌ ನೀಡಿದ ಬ್ಲ್ಯಾಕ್‌ ಸ್ಲಿಮ್‌ ಫಿಟ್‌ ಸೂಟ್‌

ಚಿತ್ರಗಳು: ಅನಿಲ್‌ ಕಪೂರ್‌, ಬಾಲಿವುಡ್‌ ನಟ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬ್ಲ್ಯಾಕ್‌ ಸೂಟ್‌ನಲ್ಲಿ ಬಾಲಿವುಡ್‌ ನಟ ಅನಿಲ್‌ ಕಪೂರ್‌ (Anil Kapoor) ಚಿರ ಯುವಕನಂತೆ ಕಾಣಿಸಿಕೊಂಡಿದ್ದಾರೆ. ಹೌದು, ಅವರ ಫಿಟ್ನೆಸ್‌ ಬಾಡಿಗೆ ಧರಿಸಿರುವ ಈ ಔಟ್‌ಫಿಟ್‌ (Star Fashion 2026) ಸಾಥ್‌ ನೀಡಿದೆ. ಅವರನ್ನು ಮತ್ತಷ್ಟು ಆಕರ್ಷಕವಾಗಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಅನಿಲ್‌ ಕಪೂರ್‌ ಬ್ಲ್ಯಾಕ್‌ ಸೂಟ್‌

ಅಂದಹಾಗೆ, ಅನಿಲ್‌ ಕಪೂರ್‌ ಅವರು ಧರಿಸಿರುವ ಬ್ಲ್ಯಾಕ್‌ ಸೂಟ್‌ನಲ್ಲಿ ಅಂತಹ ವಿಶೇಷತೆಯೇನಿಲ್ಲ! ಆದರೆ, ಅವರು ಕ್ಯಾರಿ ಮಾಡಿರುವ ಶೈಲಿ ಹಾಗೂ ಪೋಸಿಂಗ್‌ ಅವರನ್ನು ಹ್ಯಾಂಡ್‌ಸಮ್‌ ಆಗಿ ಕಾಣುವಂತೆ ಮಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Anil Kapoor

ಇನ್ನು, ಅವರು ಧರಿಸಿರುವ ಸೂಟ್‌ನ ಬ್ಲೇಜರ್‌ ಹಾಗೂ ಅದೇ ಮಾನೋಕ್ರೊಮ್‌ ಡಿಸೈನ್‌ ಪ್ಯಾಂಟ್‌ ಹೊಂದಿದೆ. ಇದಕ್ಕೆ ಕಾಂಟ್ರಾಸ್ಟ್ ಟೈ, ಹೈ ಲೈಟಾಗುವಂತೆ ಮಾಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಈ ಸ್ಲಿಮ್‌ ಫಿಟ್‌ ಸೂಟ್‌, ಅನಿಲ್‌ ಕಪೂರ್ ಅವರಿಗೆ ಪರ್ಫೆಕ್ಟಾಗಿ ಹೊಂದಿಕೊಂಡಿದ್ದು, ಯುವಕನಂತೆ ಬಿಂಬಿಸಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Black Suit

ಅನಿಲ್‌ ಕಪೂರ್‌ ಫ್ಯಾಷನ್‌ ಲವ್‌

ಸಾಕಷ್ಟು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರುವ ನಟ ಅನಿಲ್‌ ಕಪೂರ್‌ ಇತ್ತೀಚೆಗೆ ಒಂದಿಷ್ಟು ವೆಬ್‌ ಸೀರೀಸ್‌ಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಿ ಕಾಣಿಸಿಕೊಂಡರೂ ಕೂಡ ಸಿಂಪಲ್‌ ಫ್ಯಾಷನ್‌ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಕಾರಣವೂ ಇದೆ. ಅವರ ಮಕ್ಕಳು ರಿಯಾ ಹಾಗೂ ಸೋನಂ ಇಬ್ಬರೂ ಫ್ಯಾಷನ್‌ ಎಕ್ಸ್‌ಪರ್ಟ್ಸ್. ನಾನವರ ಸಲಹೆಯನ್ನು ಸದಾ ಪಾಲಿಸುತ್ತೇನೆ. ಇದೇ ನನ್ನ ಫ್ಯಾಷನ್‌ ಸ್ಟೇಟ್‌ಮೆಂಟ್‌ ಸೀಕ್ರೆಟ್‌ ಎಂಬುದನ್ನು ಒಮ್ಮೆ ಮಾಧ್ಯಮಗಳ ಮುಂದೆಯೇ ಹೇಳಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Winter Fashion 2026: ವಿಂಟರ್ ಟ್ರಾವೆಲ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಶಿಯರ್ಲಿಂಗ್ ಜಾಕೆಟ್ಸ್

Black Slim Fit Suit

ಅನಿಲ್‌ ಕಪೂರ್‌ ಯಂಗ್‌ ಲುಕ್‌ಗೆ ಕಾರಣವಾಗಿರುವ ಸಂಗತಿಗಳಿವು

  • ಬಾಡಿ ಫಿಟ್ನೆಸ್‌ ಮೇಂಟೆನ್‌ ಮಾಡಿರುವುದು.
  • ಫ್ಯಾಷನ್‌ವೇರ್‌ಗಳಲ್ಲಿ ಚೂಸಿಯಾಗಿರುವುದು.
  • ಡ್ರೆಸ್‌ಕೋಡ್‌ ಪ್ರೇಮ ಎದ್ದು ಕಾಣಿಸುವುದು.
  • ಧರಿಸಿದ ಔಟ್‌ಫಿಟ್ಟನ್ನು ಪರ್ಫೆಕ್ಟಾಗಿ ಕ್ಯಾರಿ ಮಾಡುವುದು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)