Star fashion tips 2025: ಪವರ್ ಡ್ರೆಸ್ಸಿಂಗ್ ಬಗ್ಗೆ ನಟಿ ಮಾನ್ವಿತಾ ಕಾಮತ್ ಮಾತು
Manvitha Kamath talks about power dressing: ಮನೆಕಿನ್ ಹೆಸರಿನ ಫ್ಯಾಷನ್ ಬ್ರ್ಯಾಂಡ್ ಲಾಂಚ್ ಮಾಡಿರುವ ಸ್ಯಾಂಡಲ್ವುಡ್ ನಟಿ ಮಾನ್ವಿತಾ ಕಾಮತ್, ಪವರ್ ಡ್ರೆಸ್ಸಿಂಗ್ ಬಗ್ಗೆ ವಿಶ್ವವಾಣಿ ನ್ಯೂಸ್ನೊಂದಿಗೆ ಮಾತನಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಚಿತ್ರಗಳು: ಮನೆಕಿನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಚಿತ್ರಗಳು -
ಪವರ್ ಡ್ರೆಸ್ಸಿಂಗ್ಗೆ ಮಾನ್ವಿತಾ ಟಿಪ್ಸ್
ಶುದ್ಧ ರೇಷ್ಮೆಯಲ್ಲಿ ಸಿದ್ಧಪಡಿಸುವ ಮನೆಕಿನ್ ಫ್ಯಾಷನ್ವೇರ್ಗಳನ್ನು ಮುಂದೊಮ್ಮೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕನಸು ಕಂಡಿರುವ ನಟಿ ಮಾನ್ವಿತಾ ಕಾಮತ್, ಪವರ್ ಡ್ರೆಸ್ಸಿಂಗ್ ಬಗ್ಗೆ ವಿಶ್ವವಾಣಿ ನ್ಯೂಸ್ನೊಂದಿಗೆ ಮಾತನಾಡಿದ್ದಾರೆ. ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರು ಮಾತ್ರವಲ್ಲ, ದೇಸಿ ಲುಕ್ ಬಯಸುವವರು ಕೂಡ ಹೇಗೆಲ್ಲಾ ಪವರ್ ಡ್ರೆಸ್ಸಿಂಗ್ ಮಾಡಬಹುದು ಎಂಬುದರ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಪವರ್ ಡ್ರೆಸ್ಸಿಂಗ್
ಮಾನ್ವಿತಾ ಪ್ರಕಾರ, ಸೂಟ್ ಹಾಗೂ ಬ್ಲೇಜರ್ನಲ್ಲಿ ಕಾಣಿಸುವ ಲೇಡಿಯ ಹೈ ಫ್ಯಾಷನ್ ಲುಕ್ಗೆ ಪವರ್ ಡ್ರೆಸ್ಸಿಂಗ್ ಎನ್ನಲಾಗುತ್ತದೆ.
ಹೈ ಫ್ಯಾಷನ್ ಲುಕ್ಗೆ ಪವರ್ ಡ್ರೆಸ್ಸಿಂಗ್
ಹೈ ಫ್ಯಾಷನ್ ಫಾಲೋ ಮಾಡಲು ಬಯಸುವವರು ಪವರ್ ಡ್ರೆಸ್ಸಿಂಗ್ಗೆ ಸೈ ಎನ್ನಬಹುದು. ಇದಕ್ಕಾಗಿ ಮನೆಕಿನ್ ಶುದ್ಧ ರೇಷ್ಮೆಯ ಸೂಟ್ ಹಾಗೂ ಬ್ಲೇಜರ್ಗಳನ್ನು ಸಿದ್ಧಪಡಿಸಿದೆ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಬಯಸುವ ಮಾನಿನಿಯರು ಈ ಪವರ್ ಸೂಟ್ಗಳನ್ನು ಧರಿಸಬಹುದು ಎನ್ನುತ್ತಾರೆ ಮಾನ್ವಿತಾ.
ದೇಸಿ ಲುಕ್ಗೆ ಪವರ್ ಸೂಟ್
ಸಿಲ್ಕ್ ಸೀರೆಯೊಂದಿಗೆ ಬ್ಲೇಜರ್ ಧರಿಸಿದಾಗ ನೋಡಲು ದೇಸಿ ಲುಕ್ ದೊರೆಯುತ್ತದೆ. ಇದಕ್ಕಾಗಿ ಸೀರೆ ಜತೆ ಕಮರ್ಬಾಂದ್ ಅಥವಾ ಬೆಲ್ಟ್ ಧರಿಸಿ, ಅದರ ಮೇಲೆ ಬ್ಲೇಜರ್ ಧರಿಸಿದಲ್ಲಿ, ನೋಡಲು ಸಖತ್ ಆಗಿ ಕಾಣಿಸುತ್ತದೆ. ಮಲ್ಟಿ ಕಲರ್ನ ಬ್ಲೇಜರ್ ಎಲ್ಲಾ ಸೀರೆಗೂ ಮ್ಯಾಚ್ ಮಾಡಬಹುದು ಎಂಬುದು ಅವರ ಅಭಿಪ್ರಾಯ.
ಕಾರ್ಸೆಟ್ ಜತೆ ಬ್ಲೇಜರ್
ಇನ್ನು ಗ್ಲಾಮರಸ್ ಕಾರ್ಸೆಟ್ ಜತೆಯೂ ಬ್ಲೇಜರ್ ಧರಿಸಬಹುದು, ಅಷ್ಟ್ಯಾಕೆ? ಮಾಡರ್ನ್ ಲುಕ್ ಬಯಸುವವರು ಸೀರೆಯೊಂದಿಗೆ ಬ್ಲೌಸ್ ಬದಲು ಇದನ್ನು ಧರಿಸಬಹುದು ಎನ್ನುತ್ತಾರೆ ಮಾನ್ವಿತಾ. ಇದೀಗ ಜೆನ್ ಝಿಯವರು ಕೂಡ ಒಂದಿಷ್ಟು ರೆಟ್ರೊ ಲುಕ್ಗಳನ್ನು ಮರಳಿ ತಂದಿದ್ದಾರೆ. ಅವರು ಕೂಡ ಬ್ಲೇಜರ್ ಬಳಸಿ ಪ್ರಯೋಗಾತ್ಮಕ ಅಲ್ಟ್ರಾ ಮಾಡರ್ನ್ ಲುಕ್ ಟ್ರೈ ಮಾಡಬಹುದು ಎಂದು ಹೇಳುತ್ತಾರೆ ಮಾನ್ವಿತಾ.