Star Monsoon Fashion 2025: ಮಾನ್ಸೂನ್ನಲ್ಲಿ ನಟಿ ಅದ್ವಿತಿ ಶೆಟ್ಟಿಯ ಸ್ಪೋರ್ಟಿವ್ ಲುಕ್
Star Monsoon Fashion 2025: ಮಂಗಳೂರಿನ ಬೆಡಗಿ, ನಟಿ ಹಾಗೂ ಮಾಡೆಲ್ ಅದ್ವಿತಿ ಶೆಟ್ಟಿಯವರ ಸ್ಪೋರ್ಟಿವ್ ಲುಕ್ ಟೀನೇಜ್ ಹುಡುಗಿಯರನ್ನು ಮಾತ್ರವಲ್ಲ, ಫಾಲೋವರ್ಗಳನ್ನು ಆಕರ್ಷಿಸಿದೆ. ಹಾಗಾದಲ್ಲಿ, ಇದ್ಯಾವ ಬಗೆಯ ಲುಕ್? ಅವರೇ ವಿಶ್ವವಾಣಿ ನ್ಯೂಸ್ನೊಂದಿಗೆ ಮಾತನಾಡಿದ್ದಾರೆ.

ಚಿತ್ರಗಳು: ಅದ್ವಿತಿ ಶೆಟ್ಟಿ, ನಟಿ


ಮಾನ್ಸೂನ್ ಸೀಸನ್ನಲ್ಲಿ ನಟಿ ಹಾಗೂ ಮಾಡೆಲ್ ಅದ್ವಿತಿ ಶೆಟ್ಟಿಯವರ ಸ್ಪೋರ್ಟಿವ್ ಲುಕ್ಗೆ ಎಲ್ಲರೂ ಫಿದಾ ಆಗಿದ್ದಾರೆ. ಹೌದು, ಮಂಗಳೂರಿನ ಬೆಡಗಿಯೆಂದೇ ಖ್ಯಾತಿ ಗಳಿಸಿರುವ ನಟಿ ಹಾಗೂ ಮಾಡೆಲ್ ಅದ್ವಿತಿ ಶೆಟ್ಟಿ ಮೊದಲಿನಿಂದಲ್ ಫ್ಯಾಷನೆಬಲ್ ನಟಿ. ಈಗಷ್ಟೇ ಅವರ ಮೊದಲ ತುಳು ಸಿನಿಮಾ ಕೂಡ ಕಂಪ್ಲೀಟ್ ಆಗಿದೆ. ಅಲ್ಲದೇ, ಅವರು ಆಗಾಗ್ಗೆ ಸಿನಿಮಾ ಜತೆ ಸಾಕಷ್ಟು ಜಾಹೀರಾತು ಮತ್ತು ಫ್ಯಾಷನ್ ಫೋಟೋ ಶೂಟ್ಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಮಧ್ಯೆ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸ್ಪೋರ್ಟಿವ್ ಲುಕ್ ಫೋಟೋಗಳನ್ನು ಅಪ್ಲೋಡ್ ಮಾಡಿದ್ದು, ಈ ಲುಕ್ ಹಾಗೂ ಮಾನ್ಸೂನ್ ಫ್ಯಾಷನ್ ಬಗ್ಗೆ ವಿಶ್ವವಾಣಿ ನ್ಯೂಸ್ನೊಂದಿಗೆ ಮಾತನಾಡಿದ್ದಾರೆ. ಅಲ್ಲದೇ, ತಮ್ಮ ಫಾಲೋವರ್ಸ್ಗೆ ಒಂದಿಷ್ಟು ಸಿಂಪಲ್ ಟಿಪ್ಸ್ ಕೂಡ ನೀಡಿದ್ದಾರೆ.

ವಿಶ್ವವಾಣಿ ನ್ಯೂಸ್: ನಿಮ್ಮ ಸ್ಪೋರ್ಟಿವ್ ಲುಕ್ ಬಗ್ಗೆ ಹೇಳಿ?
ಅದ್ವಿತಿ ಶೆಟ್ಟಿ: ಅತ್ಯಾಕರ್ಷಕವಾಗಿ ಕಾಣಿಸುವ ಈ ಲುಕ್ ಸ್ಟೈಲಿಂಗ್ ನನ್ನದೇ, ಆನ್ಲೈನ್ನಲ್ಲಿ ಖರೀದಿಸಿದ ಡ್ರೆಸ್ ಇದು. ವೈಬ್ರೆಂಟ್ ಶೇಡ್ನ ಟ್ರೆಂಡಿ ಕ್ರಾಪ್ ಟಾಪ್ ಹಾಗೂ ಮಿನಿ ಸ್ಕರ್ಟ್ಗೆ ಹೊಂದುವಂತೆ ನಾನು ಕಾಣಿಸಿಕೊಂಡಿದ್ದೇನೆ.

ವಿಶ್ವವಾಣಿ ನ್ಯೂಸ್: ನೀವೇ ಖುದ್ದು ಸ್ಟೈಲಿಂಗ್ ಮಾಡಿಕೊಳ್ಳುತ್ತೀರಾ?
ಅದ್ವಿತಿ ಶೆಟ್ಟಿ: ಹೌದು. ಬಹುತೇಕ ಇವೆಂಟ್ ಹಾಗೂ ಕಾರ್ಯಕ್ರಮಗಳಿಗೆ ನನಗೆ ನಾನೇ ಸ್ಟೈಲಿಂಗ್ ಮಾಡಿಕೊಳ್ಳುತ್ತೇನೆ.

ವಿಶ್ವವಾಣಿ ನ್ಯೂಸ್: ನಿಮ್ಮ ಮಾನ್ಸೂನ್ ಫ್ಯಾಷನ್ನಲ್ಲಿ ಏನಿದೆ?
ಅದ್ವಿತಿ ಶೆಟ್ಟಿ: ಶೂಗಳಿಗಿಂತ ಕ್ರೊಕ್ಗಳನ್ನು ಧರಿಸುತ್ತೇನೆ. ಫುಲ್ ಆರ್ಮ್ ಜಾಕೆಟ್, ಶ್ರಗ್ಸ್ ಸೇರಿದಂತೆ ಔಟಿಂಗ್ ಹೋಗುವಾಗ ಲೇಯರ್ ಲುಕ್ಗೆ ಪ್ರಾಮುಖ್ಯತೆ ನೀಡುತ್ತೇನೆ.
ವಿಶ್ವವಾಣಿ ನ್ಯೂಸ್: ಮಾನ್ಸೂನ್ನಲ್ಲಿ ಸ್ಟೈಲಿಂಗ್ ಆಕರ್ಷಕವಾಗಿ ಕಾಣಿಸಲು ಏನು ಮಾಡಬಹುದು?
ಅದ್ವಿತಿ ಶೆಟ್ಟಿ: ಸ್ಕಾರ್ಫನ್ನು ನಾನಾ ಬಗೆಯಲ್ಲಿ ಧರಿಸಬಹುದು.

ವಿಶ್ವವಾಣಿ ನ್ಯೂಸ್: ನಿಮ್ಮ ಫಾಲೋವರ್ಸ್ಗೆ ನೀವು ನೀಡುವ ಟಿಪ್ಸ್ ಏನು?
ಅದ್ವಿತಿ ಶೆಟ್ಟಿ: ಬೆಚ್ಚಗಿನ ಉಡುಪುಗಳನ್ನು ಧರಿಸಿ.
ಔಟಿಂಗ್ ಹೋಗುವಾಗ ಸ್ಕಾರ್ಫ್ ಜತೆಯಲ್ಲಿರಿಕೊಳ್ಳಿ.
ಸ್ಟೈಲಿಂಗ್ ನಿಮ್ಮ ಔಟ್ಫಿಟ್ಗೆ ಮ್ಯಾಚ್ ಮಾಡಿ.