T20 World Cup: ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್ ಕಿತ್ತು ಹಲವು ದಾಖಲೆಗಳನ್ನು ಮುರಿದ ಜಸ್‌ಪ್ರೀತ್ ಬುಮ್ರಾ!
ದಕ್ಷಿಣ ಆಫ್ರಿಕಾ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ ಭಾರತದ ಜಸ್‌ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ದಾಳಿ ನಡೆಸಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ವೈಟ್‌ಬಾಲ್ ವಿಶ್ವಕಪ್ ಟೂರ್ನಿಗಳಲ್ಲಿ ಆರ್ ಅಶ್ವಿನ್ ಹಾಗೂ ಮೊಹಮ್ಮದ್ ಶಮಿ ದಾಖಲೆಗಳನ್ನು ಮುರಿದಿದ್ದಾರೆ.
3 ವಿಕೆಟ್ ಕಿತ್ತು ಅಶ್ವಿನ್, ಶಮಿ ದಾಖಲೆ ಮುರಿದ ಬುಮ್ರಾ. -
ಅಹಮದಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ (IND vs SA) ಭಾರತ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಇತಿಹಾಸ ಸೃಷ್ಟಸಿದ್ದಾರೆ. ಫೆಬ್ರವರಿ 22 ರಂದು ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಬುಮ್ರಾ, 4 ಓವರ್‌ಗಳಿಗೆ ಕೇವಲ 15 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಟಾಸ್ ಸೋತು ಮೊದಲು ಬೌಲಿಂಗ್ ಮಾಡುವಂತಾಗಿದ್ದ ಭಾರತಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದರು. ಪವರ್‌ಪ್ಲೇನಲ್ಲಿ ಬುಮ್ರಾ, ಕ್ವಿಂಟನ್ ಡಿ ಕಾಕ್, ರಯಾನ್ ಡಿಕೆಲ್ಟನ್ ಅವರನ್ನು ಔಟ್ ಮಾಡಿದ್ದರು.
ಒಡಿಐ ಹಾಗೂ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿಯನ್ನು ಹಿಂದಿಕ್ಕಿದ್ದಾರೆ. ಟಿ20 ಹಾಗೂ ಒಡಿಐ ವಿಶ್ವಕಪ್ ಟೂರ್ನಿಗಳಲ್ಲಿ ಬುಮ್ರಾ 70 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ, ಝಹೀರ್ ಖಾನ್ ಅವರನ್ನು ಹಿಂದಿಕ್ಕಿದ್ದರು.
ENG vs SL: ಲೋ ಸ್ಕೋರಿಂಗ್ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಶಾಕ್ ನೀಡಿದ ಇಂಗ್ಲೆಂಡ್!
ಕ್ರಿಕೆಟ್ ವಿಶ್ವಕಪ್, ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
- ಜಸ್‌ಪ್ರೀತ್ ಬುಮ್ರಾ: 71 ವಿಕೆಟ್ ( 42 ಇನಿಂಗ್ಸ್)
- ಮೊಹಮ್ಮದ್ ಶಮಿ: 69 ವಿಕೆಟ್ (32 ಇನಿಂಗ್ಸ್)
- ಝಹೀರ್ ಖಾನ್: 56 ವಿಕೆಟ್ (35 ಇನಿಂಗ್ಸ್)
- ಆರ್ ಅಶ್ವಿನ್: 50 ವಿಕೆಟ್ (35 ಇನಿಂಗ್ಸ್)
- ರವೀಂದ್ರ ಜಡೇಜಾ: 49 ವಿಕೆಟ್ (50 ಇನಿಂಗ್ಸ್)
ಒಡಿಐ ಹಾಗೂ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಗ್ಲೆನ್ ಮೆಗ್ರಾಥ್ ಅವರೊಂದಿಗೆ ಜಂಟಿ ದಾಖಲೆಯೊಂದನ್ನು ಬರೆದಿದ್ದಾರೆ. ಇವರಿಗೂ ಮುಂದಿನ ಸಾಲಿನಲ್ಲಿ ಮಿಚೆಲ್ ಸ್ಟಾರ್ಕ್, ಲಸಿತ್ ಮಾಲಿಂಗ, ಶಕಿಬ್ ಉಲ್ ಹಸನ್, ಟ್ರೆಂಟ್ ಬೌಲ್ಟ್, ಮುತ್ತಯ್ಯ ಮುರಳಿಧರನ್, ಟಿಮ್ ಸೌಥಿ, ಆಡಂ ಝಾಂಪ ಇದ್ದಾರೆ.
Just Jasprit Bumrah things 🙌
— BCCI (@BCCI) February 22, 2026
His 3️⃣rd breakthrough of the night! 👊
Updates ▶️ https://t.co/ZE8J4fF18z#TeamIndia | #T20WorldCup | #MenInBlue | #INDvSA pic.twitter.com/UMJXmcSOLe
ಅಶ್ವಿನ್ ದಾಖಲೆ ಮುರಿದ ಬುಮ್ರಾ
ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿಆರ್ ಅಶ್ವಿನ್ ಅವರ ದಾಖಲೆಯನ್ನು ಜಸ್‌ಪ್ರೀತ್ ಬುಮ್ರಾ ಮುರಿದಿದ್ದಾರೆ. ಇದೇ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಅವರು ಅಶ್ವಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
- ಜಸ್‌ಪ್ರೀತ್ ಬುಮ್ರಾ: 33 ವಿಕೆಟ್‌ಗಳು (22 ಇನಿಂಗ್ಸ್‌ಗಳು)
- ಅರ್ಷದೀಪ್ ಸಿಂಗ್: 32 ವಿಕೆಟ್‌ಗಳು (18 ಇನಿಂಗ್ಸ್‌ಗಳು)
- ಆರ್ ಅಶ್ವಿನ್: 32 ವಿಕೆಟ್‌ಗಳು (24 ಇನಿಂಗ್ಸ್‌ಗಳು)
- ಹಾರ್ದಿಕ್ ಪಾಂಡ್ಯ: 29 ವಿಕೆಟ್‌ಗಳು (26 ಇನಿಂಗ್ಸ್‌ಗಳು)
- ರವೀಂದ್ರ ಜಡೇಜಾ: 22 ವಿಕೆಟ್‌ಗಳು ( 29 ಇನಿಂಗ್ಸ್‌ಗಳು)
Innings Break!#TeamIndia have been set a target of 188. 🎯
— BCCI (@BCCI) February 22, 2026
Chase on the other side ⏳
Scorecard ▶️ https://t.co/ZE8J4fF18z#T20WorldCup | #MenInBlue | #INDvSA pic.twitter.com/halaNIMltw
ಜಸ್‌ಪ್ರೀತ್ ಬುಮ್ರಾ ಐಸಿಸಿ ವೈಟ್ ಬಾಲ್ ಟೂರ್ನಿಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಸಾಲಿನಲ್ಲಿ ಮೊಹಮ್ಮದ್ ಶಮಿ ದಾಖಲೆಯನ್ನು ಮುರಿಯುವ ಹಾದಿಯಲ್ಲಿದ್ದಾರೆ. ಬುಮ್ರಾ ಇದೀಗ 75 ವಿಕೆಟ್ ಪಡೆದಿದ್ದು, 78 ವಿಕೆಟ್ ಕಿತ್ತಿರುವ ಶಮಿಯನ್ನು ಹಿಂದಿಕ್ಕಲು ಬುಮ್ರಾಗೆ ಕೇವಲ 4 ವಿಕೆಟ್ ಅಗತ್ಯವಿದೆ.