International Bikini Day: ಅಂತಾರಾಷ್ಟ್ರೀಯ ಬಿಕಿನಿ ದಿನ: ಬಿಕಿನಿಯಲ್ಲಿ ಮಿಂಚಿದ ಬಾಲಿವುಡ್ನ ಟಾಪ್ 10 ತಾರೆಯರು ಇವರು
ಒಂದು ಕಾಲದಲ್ಲಿ ಬಿಕಿನಿ ಎಂದರೆ ಹೆಣ್ಣು ಮಕ್ಕಳು ನಾಚಿ ನೀರಾಗುತ್ತಿದ್ದರು. ಆದರೆ ಇವತ್ತು ಅದು ಫ್ಯಾಷನ್ ಜಗತ್ತಿಗೆ ಎಂಟ್ರಿ ಪಡೆದಿದೆ. ಹೀಗಾಗಿ ಬಿಕಿನಿ ಖರೀದಿ ಮಾಡುವಾಗಲೂ ಯುವತಿಯರು ಸಾಕಷ್ಟು ಯೋಚನೆ ಮಾಡುತ್ತಾರೆ. ಸ್ಟೈಲಿಶ್, ಡಿಸೈನರ್ ಬಿಕಿನಿಗಳನ್ನು ಇಷ್ಟಪಡುತ್ತಾರೆ. ಇವರಿಗೆ ಬಾಲಿವುಡ್ನ ಈ ತಾರೆಯರೆಲ್ಲ ಸ್ಫೂರ್ತಿ ಎಂದರೆ ತಪ್ಪಾಗಲಾರದು.



ವಿಶ್ವದಾದ್ಯಂತ ಇಂದು ಅಂತಾರಾಷ್ಟ್ರೀಯ ಬಿಕಿನಿ ದಿನವನ್ನು ಆಚರಿಸಲಾಗುತ್ತದೆ. ಒಂದು ಕಾಲದಲ್ಲಿ ಬಿಕಿನಿ ಎಂದರೆ ನಾಚಿ ನೀರಾಗುತ್ತಿದ್ದ ಹೆಣ್ಣು ಮಕ್ಕಳು ಇಂದು ಸ್ಟೈಲಿಶ್, ಡಿಸೈನರ್ ಬಿಕಿನಿಗಳನ್ನು ಯಾವುದೇ ಮುಜುಗರವಿಲ್ಲದೆ ಖರೀದಿ ಮಾಡುತ್ತಾರೆ. ಇವರಿಗೆಲ್ಲ ಬಾಲಿವುಡ್ನ ಸೆಲೆಬ್ರಿಟಿಗಳು ಸ್ಫೂರ್ತಿಯಾಗಿದ್ದಾರೆ ಎಂದರೆ ತಪ್ಪಲ್ಲ.

ಫ್ಯಾಷನ್ ಜಗತ್ತಿನಲ್ಲಿ ಆತ್ಮವಿಶ್ವಾಸ ಬಹುಮುಖ್ಯವಾಗಿದೆ. ಇದನ್ನು ತೋರ್ಪಡಿಸಲು ಬಿಕಿನಿ ಒಂದು ಸರಿಯಾದ ಆಯ್ಕೆ. ಜುಲೈ 5 ಜಾಗತಿಕ ಫ್ಯಾಷನ್ ಮತ್ತು ಆತ್ಮವಿಶ್ವಾಸವನ್ನು ಮರು ವ್ಯಾಖ್ಯಾನಿಸಿದ ಐಕಾನಿಕ್ ಈಜುಡುಗೆಯ ಆವಿಷ್ಕಾರದ ದಿನ.

ಬಿಕಿನಿ ಈಜುಡುಗೆಯಾದರೂ ಬಾಲಿವುಡ್ ನಟಿಯರು ಪರದೆಯ ಮೇಲೆ ಮತ್ತು ಹೊರಗೆ ಎರಡೂ ರೀತಿಯಲ್ಲಿ ಅದರ ಸೊಬಗನ್ನು ಪ್ರದರ್ಶಿಸಿ ತಮ್ಮ ಫಿಟ್ನೆಸ್ ಅನ್ನು ತೋರ್ಪಡಿಸಿದ್ದಾರೆ. ಕೆಲವೊಂದು ಸಿನಿಮಾಗಳಲ್ಲಿ ತಮ್ಮ ಅತ್ಯುತ್ತಮ ಬಿಕಿನಿ ನೋಟವನ್ನು ಪ್ರದರ್ಶಿಸಿದ್ದಾರೆ.

ಬಿಕಿನಿ ಎಂದರೆ ಮೊದಲು ಕೇಳಿಬರುವ ಹೆಸರು ಅನನ್ಯಾ ಪಾಂಡೆ. ಹೆಚ್ಚಾಗಿ ತಮ್ಮ ಬಿಕಿನಿ ನೋಟವನ್ನು ಪ್ರದರ್ಶಿಸುವ ಇವರು ಇತ್ತೀಚೆಗೆ ಹಾಲ್ಟರ್-ನೆಕ್ ಟಾಪ್ ಮತ್ತು ಟೈ-ಅಪ್ ಬಾಟಮ್ಗಳನ್ನು ಒಳಗೊಂಡ ಹಾಟ್ ಪಿಂಕ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು.

ಪೂಲ್ಸೈಡ್, ಐಲ್ಯಾಂಡ್ ಸೇರಿದಂತೆ ಜಾಹ್ನವಿ ಕಪೂರ್ ಅನೇಕ ಬಾರಿ ಈಜುಡುಗೆಯಲ್ಲಿ ಕಂಗೊಳಿಸಿದ್ದಾರೆ. ಅವರ ನಿಯಾನ್ ಬಿಕಿನಿ ಲುಕ್, ನಿಂಬೆ ಹಸಿರು ಬಿಕಿನಿ, ಹಾಲ್ಟರ್-ನೆಕ್ ಟಾಪ್ ಮತ್ತು ಹೈ-ಕಟ್ ಬಾಟಮ್ಗಳಿರುವ ಬಿಕಿನಿಯೊಂದಿಗೆ ಕನಿಷ್ಠ ಮೇಕಪ್ ಮಾಡಿ ಎಲ್ಲರನ್ನೂ ಮೋಡಿ ಮಾಡಿದ್ದಾರೆ.

ಬಾಲಿವುಡ್ ಮಾತ್ರವಲ್ಲ ಹಾಲಿವುಡ್ನಲ್ಲೂ ಮಿಂಚಿರುವ ಪ್ರಿಯಾಂಕಾ ಚೋಪ್ರಾ ದಪ್ಪ ಕೆಂಪು ಬ್ಯಾಂಡೆ ಬಿಕಿನಿಯಲ್ಲಿಇತ್ತೀಚೆಗೆ ಕಂಗೊಳಿಸಿದ್ದರು. ಕೂದಲು ಬಿಟ್ಟು, ಸನ್ ಗ್ಲಾಸ್ ತೊಟ್ಟು ಅವರ ಸೊಬಗು ಬೀಚ್ ಗ್ಲಾಮ್ನ ಪರಿಪೂರ್ಣ ಮಿಶ್ರಣವನ್ನು ಪ್ರದರ್ಶಿಸಿತ್ತು.

ʼಪಠಾಣ್ʼ ಚಿತ್ರದಲ್ಲಿ ಶಾರುಖ್ ಖಾನ್ ಜತೆ ನಟಿಸಿರುವ ದೀಪಿಕಾ ಪಡುಕೋಣೆ ಹಳದಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಇದು ಅವರ ಅತ್ಯುತ್ತಮ ಮೈಕಟ್ಟು, ದೇಹದ ಭಂಗಿ ಮತ್ತು ಆತ್ಮವಿಶ್ವಾಸದ ಸಂಪೂರ್ಣ ಚಿತ್ರಣವನ್ನು ಪ್ರದರ್ಶಿಸಿತ್ತು.

ಕತ್ರಿನಾ ಕೈಫ್ ಅವರ ಬಿಕಿನಿ ಸಮಕಾಲೀನವಾಗಿ ಕಾಣುವಂತೆ ಮಾಡಿದೆ. ನೀಲಿ, ಬಿಳಿ ಬಣ್ಣ ಮಿಶ್ರಿತ ಬಿಕಿನಿಯೊಂದಿಗೆ ಇವರ ಸ್ಟೈಲ್, ಕೂದಲು ಮತ್ತು ಶಾಂತ ಬೀಚ್ನ ನೋಟ ಅತ್ಯಂತ ಉಲ್ಲಾಸಕರ ವಾತಾವರಣವನ್ನು ತೋರಿಸಿದೆ.

ʼಬಾಘಿʼ ಚಿತ್ರ ನಟಿ ದಿಶಾ ಪಟಾನಿ ಇತ್ತೀಚೆಗೆ ಆಲಿವ್ ಹಸಿರು ಬಿಕಿನಿಯಲ್ಲಿ ತಮ್ಮ ಆತ್ಮವಿಶ್ವಾಸವನ್ನು ಪ್ರದರ್ಶಿಸಿದ್ದರು. ದೇಹ ಸೌಂದರ್ಯವನ್ನು ಈ ಬಿಕಿನಿಯಲ್ಲಿ ಸಂಪೂರ್ಣ ಪ್ರದರ್ಶಿಸಿರುವ ನಟಿಯ ಬೀಚ್ ಲುಕ್ ಎಲ್ಲರನ್ನೂ ಮೋಡಿ ಮಾಡಿತ್ತು.

ಬಾಲಿವುಡ್ ತಾರೆ ಆಲಿಯಾ ಭಟ್ ಹಾಟ್ ಪಿಂಕ್ ಈಜುಡುಗೆಯಲ್ಲಿ ತಮ್ಮ ಆತ್ಮ ವಿಶ್ವಾಸವನ್ನು ಪ್ರದರ್ಶಿಸುತ್ತಾರೆ. ಕನಿಷ್ಠ ಮೇಕಪ್ನೊಂದಿಗೆ ಒದ್ದೆ ಕೂದಲು, ಕನಿಷ್ಠ ಮೇಕಪ್ನಲ್ಲಿ ನೈಸರ್ಗಿಕ ಸೊಬಗನ್ನು ತೋರಿಸಿದ್ದಾರೆ.

ಬಿಪಾಶಾ ಬಸು ಪಾರದರ್ಶಕ ಬಿಳಿ ಕವರ್-ಅಪ್ನೊಂದಿಗೆ ಪದರಗಳಿರುವ ಹೂವಿನ ಬಿಕಿನಿಯಲ್ಲಿ ಕ್ಲಾಸಿಕ್ ಮೋಡಿಯನ್ನು ಪದರ್ಶಿಸಿದ್ದಾರೆ. ನೇರ ನಡೆನುಡಿಗೆ ಖ್ಯಾತಿಯಾಗಿರುವ ಬಿಪಾಶಾ ಸದಾ ಫ್ಯಾಷನ್ ಟ್ರೆಂಡ್ನಲ್ಲೂ ಎಲ್ಲರ ಗಮನ ಸೆಳೆಯುತ್ತಾರೆ.

ಹೂವಿನ ಬಿಕಿನಿ ಟಾಪ್ ಅನ್ನು ಸೊಂಟದ ಸುತ್ತಲೂ ಸುಲಭವಾಗಿ ಕಟ್ಟಿಕೊಂಡು ಮೌನಿ ರಾಯ್ ತಮ್ಮ ಸಿಗ್ನೇಚರ್ ಬಿಕಿನಿ ಶೈಲಿಯನ್ನು ಪ್ರದರ್ಶಿಸಿದ್ದಾರೆ. ಅವರ ಈ ಸ್ಟೈಲ್ ಅನ್ನು ಯಾರು ಬೇಕಾದರೂ ಕಾಪಿ ಮಾಡಬಹುದು.

ನಟಿ ಜಾಹ್ನವಿ ಕಪೂರ್ ಸಹೋದರಿ ಖುಷಿ ಕಪೂರ್ ಲ್ಯಾವೆಂಡರ್ ಬಿಕಿನಿ ಸೆಟ್ನಲ್ಲಿ ಪೂಲ್ಸೈಡ್ ಫ್ಯಾಷನ್ ಅನ್ನು ಪ್ರದರ್ಶಿಸಿದ್ದಾರೆ. ನೀಲಿ ಬಣ್ಣದ ಬಿಕಿನಿಯಲ್ಲಿ ಕನಿಷ್ಠ ಮೇಕಪ್ ನೊಂದಿಗೆ ಅವರು ಸನ್ ಗ್ಲಾಸ್ ಹಾಕಿ ಮಿಂಚಿದ್ದಾರೆ.