ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Photos: ʻವಿಕ್ಟರಿʼ ವೆಂಕಟೇಶ್ - ನಂದಮೂರಿ ಕಲ್ಯಾಣ್ ರಾಮ್ ಹೊಸ ಸಿನಿಮಾಗೆ ಮುಹೂರ್ತ; ನಾಯಕಿಯರಾಗಿ ಕೀರ್ತಿ‌ ಸುರೇಶ್ - ಕೃತಿ ಶೆಟ್ಟಿ

ತೆಲುಗು ಚಿತ್ರರಂಗದ 'ಹಿಟ್ ಮಿಷನ್' ಎಂದೇ ಖ್ಯಾತರಾಗಿರುವ ನಿರ್ದೇಶಕ ಅನಿಲ್ ರವಿಪುಡಿ ಅವರ ಮತ್ತೊಂದು ಬಹುನಿರೀಕ್ಷಿತ ಮಲ್ಟಿಸ್ಟಾರರ್ ಸಿನಿಮಾ ಇಂದು ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ. ಈ ಚಿತ್ರದಲ್ಲಿ 'ವಿಕ್ಟರಿ' ವೆಂಕಟೇಶ್ ಹಾಗೂ ನಂದಮೂರಿ ಕಲ್ಯಾಣ್ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಸಾಥ್ ನೀಡುತ್ತಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಪ್ರಮುಖ ನಿರ್ಮಾಪಕರಾದ ದಿಲ್ ರಾಜು ಮತ್ತು ಸಿರೀಶ್ ಅವರು ಚಿತ್ರದ ಚಿತ್ರಕಥೆಯನ್ನು (ಸ್ಕ್ರಿಪ್ಟ್) ನಿರ್ದೇಶಕ ಅನಿಲ್ ರವಿಪುಡಿ ಹಾಗೂ ನಿರ್ಮಾಪಕ ಸಾಹು ಗರಪತಿ ಅವರಿಗೆ ಹಸ್ತಾಂತರಿಸಿದರು. ವೆಂಕಟೇಶ್, ಕಲ್ಯಾಣ್ ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಒಳಗೊಂಡ ಮೊದಲ ದೃಶ್ಯಕ್ಕೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರೆ, ಸುರೇಶ್ ಬಾಬು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಹಿರಿಯ ನಿರ್ದೇಶಕ-ನಿರ್ಮಾಪಕ ಕೆ. ರಾಘವೇಂದ್ರ ರಾವ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು.

ʻವಿಕ್ಟರಿʼ ವೆಂಕಟೇಶ್ - ನಂದಮೂರಿ ಕಲ್ಯಾಣ್ ರಾಮ್ ಹೊಸ ಸಿನಿಮಾಗೆ ಮುಹೂರ್ತ

-

Avinash GR
Avinash GR Jun 18, 2026 4:28 PM