ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಕೈಕ ಭಾರತೀಯನಿಗೆ ಸ್ಥಾನ, ತಮ್ಮ ನಚ್ಚಿನ ಟೆಸ್ಟ್‌ ತಂಡದ ಪ್ಲೇಯಿಂಗ್‌ XI ಆರಿಸಿದ ಸ್ಟುವರ್ಟ್‌ ಬ್ರಾಡ್‌!

Stuart Broad Picks Best test Playing Xi: ಇಂಗ್ಲೆಂಡ್‌ ತಂಡದ ಮಾಜಿ ವೇಗಿ ಸ್ಟುವರ್ಟ್‌ ಬ್ರಾಡ್‌ ಅವರು ತಮ್ಮ ನೆಚ್ಚಿನ ಟೆಸ್ಟ್‌ ತಂಡದ ಪ್ಲೇಯಿಂಗ್‌ XI ಅನ್ನು ಆರಿಸಿದ್ದು, ಅವರು ಭಾರತ ತಂಡದಿಂದ ಕೇವಲ ಒಬ್ಬರಿಗೆ ಮಾತ್ರ ತಮ್ಮ ತಂಡದಲ್ಲಿ ಸ್ಥಾನವನ್ನು ನೀಡಿದ್ದಾರೆ. ದಕ್ಷಿಣ ಆಫ್ರಿಕಾದಿಂದ ನಾಲ್ವರಿಗೆ ಸ್ಥಾನವನ್ನು ನೀಡಲಾಗಿದೆ.

ತಮ್ಮ ಟೆಸ್ಟ್‌ ತಂಡದ ಪ್ಲೇಯಿಂಗ್‌ XI ಆರಿಸಿದ ಸ್ಟುವರ್ಟ್‌ ಬ್ರಾಡ್‌!

ತಮ್ಮ ನೆಚ್ಚಿನ ಟೆಸ್ಟ್‌ ಪ್ಲೇಯಿಂಗ್‌ XI ಆರಿಸಿದ ಸ್ಟುವರ್ಟ್‌ ಬ್ರಾಡ್‌. -

Profile
Ramesh Kote Jun 18, 2026 6:10 PM

ನವದೆಹಲಿ: ಇಂಗ್ಲೆಂಡ್‌ ತಂಡದ ಮಾಜಿ ವೇಗಿ ಸ್ಟುವರ್ಟ್‌ ಬ್ರಾಡ್‌ (Stuart Broad) ಅವರು ತಮ್ಮ ನೆಚ್ಚಿನ ಟೆಸ್ಟ್‌ ತಂಡದ ಪ್ಲೇಯಿಂಗ್‌ XI (Best Test Playing XI) ಅನ್ನು ಆಯ್ಕೆ ಮಾಡಿದ್ದಾರೆ. ಅವರು ತಮ್ಮ ವೃತ್ತಿ ಜೀವನದಲ್ಲಿ ಎದುರಾಳಿಯಾಗಿ ಆಟಗಾರರನ್ನು ಮತ್ರ ಆರಿಸಿದ್ದಾರೆ. ಅಂದ ಹಾಗೆ ದಕ್ಷಿಣ ಆಫ್ರಿಕಾದಿಂದ ಒಟ್ಟು ನಾಲ್ವರು ಆಟಗಾರರಿಗೆ ಸ್ಥಾನವನ್ನು ನೀಡಿದ್ದಾರೆ. ಆದರೆ, ಭಾರತ ತಂಡದಿಂದ ವಿರಾಟ್‌ ಕೊಹ್ಲಿಯನ್ನು ಮಾತ್ರ ಆಯ್ಕೆ ಮಾಡಿ, ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌ ಹಾಗೂ ಅನಿಲ್‌ ಕುಂಬ್ಳೆ ಅವರನ್ನ ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸ್ಟುವರ್ಟ್‌ ಬ್ರಾಡ್‌ ಅವರು ತಮ್ಮ ನೆಚ್ಚಿನ ಟೆಸ್ಟ್‌ ತಂಡದ ಪ್ಲೇಯಿಂಗ್‌ XIನಲ್ಲಿ ಇನಿಂಗ್ಸ್‌ ಆರಂಭಿಸಲು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ಹಾಗೂ ಶ್ರೀಲಂಕಾ ಮಾಜಿ ವಿಕೆಟ್‌ ಕೀಪರ್‌ ಕುಮಾರ ಸಂಗಕ್ಕಾರ ಅವರನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕಕ್ಕೆ ಆಸ್ಟ್ರೇಲಿಯಾದ ದಿಗ್ಗಜ ನಾಯಕ ರಿಕಿ ಪಾಂಟಿಂಗ್‌ ಮೂರನೇ ಕ್ರಮಾಂಕಕ್ಕೆ ಆಯ್ಕೆಯಾಗಿದ್ದಾರೆ. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ದಾಖಲೆ ಹೊಂದಿರುವ ರಿಕಿ ಪಾಂಟಿಂಗ್‌ ಅವರನ್ನು ಬ್ರಾಡ್‌ ಕೈ ಬಿಡುವ ಮೂಲ ಅಚ್ಚರಿ ಮೂಡಿಸಿದ್ದಾರೆ.

ತಮ್ಮ ಚೊಚ್ಚಲ ಏಕದಿನ ಸರಣಿಯಲ್ಲಿನ ಬೌಲಿಂಗ್‌ ಸಕ್ಸಸ್‌ಗೆ ಬಲವಾದ ಕಾರಣ ತಿಳಿಸಿದ ಗುರ್ನೂರ್‌ ಬ್ರಾರ್‌!

ಅಂದಹಾಗೆ ಭಾರತದಿಂದ ಕೇವಲ ವಿರಾಟ್‌ ಕೊಹ್ಲಿ ಒಬ್ಬರನ್ನೇ ಮಾತ್ರ ಇಂಗ್ಲೆಂಡ್‌ ಮಾಜಿ ವೇಗಿ ಆಯ್ಕೆ ಮಾಡಿದ್ದಾರೆ. ವಿರಾಟ್‌ ಕೊಹ್ಲಿಯನ್ನು ನಾಲ್ಕನೇ ಕ್ರಮಾಂಕಕ್ಕೆ ಆರಿಸಲಾಗಿದೆ. ವಿಸ್ಡೆನ್‌ ಸಂಭಾಷಣೆಯಲ್ಲಿ ಮಾತು ಮುಂದುವರಿಸಿದ ಬ್ರಾಡ್‌, ಮಧ್ಯಮ ಕ್ರಮಾಂಕದ ಐದು ಮತ್ತು ಆರನೇ ಸ್ಥಾನಗಳಿಗೆ ಯಾರನ್ನು ಆಯ್ಕೆ ಮಾಡಬೇಕೆಂದು ಬ್ರಾಡ್‌ ಅವರು ಸ್ವಲ್ಪ ಗೊಂದಲಕ್ಕೆ ಒಳಗಾದರು. ಆದರೆ, ಅವರು ಅಂತಿಮವಾಗಿ ಸ್ಟೀವನ್‌ ಸ್ಮಿತ್‌ ಮತ್ತು ಜಾಕ್‌ ಕಾಲಿಸ್‌ ಅವರನ್ನು ಆಯ್ಕೆ ಮಾಡಿದ್ದಾರೆ.

ಏಕೈಕ ಆಲ್‌ರೌಂಡರ್‌ ಆಗಿ ಕೇವಲ ಜಾಕ್‌ ಕಾಲಿಸ್‌ ಅವರು ಆಯ್ಕೆಯಾಗಿದ್ದಾರೆ. ಇನ್ನು ಏಳನೇ ಕ್ರಮಾಂಕಕ್ಕೆ ದಕ್ಷಿಣ ಆಫ್ರಿಕಾ ದಿಗ್ಗಜ ಜಾಕ್‌ ಕಾಲಿಸ್‌ ಅವರನ್ನು ಬ್ರಾಡ್‌ ಆರಿಸಿದ್ದಾರೆ. ಇವರನ್ನು ಆಯ್ಕೆ ಮಾಡುವ ಜೊತೆಗೆ ಅಗತ್ಯ ಬಿದ್ದರೆ ವಿಕೆಟ್‌ ಕೀಪಿಂಗ್‌ಗೂ ಎರಡನೇ ಆಯ್ಕೆಯಾಗಿ ಬಳಿಸಿಕೊಳ್ಳಬಹುದು.

ʻನಿಮಗೆ ದಕ್ಷಿಣ ಆಫ್ರಿಕಕ್ಕೆ ವೀಸಾ ಸಿಕ್ಕಿದೆʼ: ಇಶಾನ್‌ ಕಿಶನ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಸುನೀಲ್‌ ಗವಾಸ್ಕರ್‌!

ಇನ್ನು ಬೌಲಿಂಗ್‌ ವಿಭಾಗಕ್ಕೆ ಬಂದಾಗ ಮಿಚೆಲ್‌ ಜಾನ್ಸನ್‌ ಹಾಗೂ ಡೇಲ್‌ ಸ್ಟೇನ್‌ ಅವರನ್ನು ಆರಿಸಲಾಗಿದೆ. ಈ ಇಬ್ಬರೂ ತಮ್ಮ ವೃತ್ತಿ ಜೀವನದ ವಿಭಿನ್ನ ಸಂದರ್ಭಗಳಲ್ಲಿ ಅಗ್ರ ಸ್ಥಾನಗಳನ್ನು ಅಲಂಕರಿಸಿದ್ದರು. ಜಾನ್ಸನ್‌ ಜೊತೆಗೆ ಆಸ್ಟ್ರೇಲಿಯಾದ ಮತ್ತೊಬ್ಬ ವೇಗಿ ಮಿಚೆಲ್‌ ಸ್ಟಾರ್ಕ್‌ಗೂ ಕೂಡ ಇಂಗ್ಲೆಂಡ್‌ ದಿಗ್ಗಜ ಒಲವು ತೋರಿದ್ದಾರೆ. ಇನ್ನು 800 ಟೆಸ್ಟ್‌ ವಿಕೆಟ್‌ಗಳನ್ನು ಕಬಳಿಸಿರುವ ಮುತ್ತಯ್ಯ ಮುರಳಿಧರನ್‌ ಅವರನ್ನು ಏಕೈಕ ಸ್ಪಿನ್ನರ್‌ ಆಗಿ ಆಯ್ಕೆ ಮಾಡಲಾಗಿದೆ.

ಸ್ಟುವರ್ಟ್‌ ಬ್ರಾಡ್‌ರ ಟೆಸ್ಟ್‌ ಪ್ಲೇಯಿಂಗ್‌ xi: ಗ್ರೇಮ್‌ ಸ್ಮಿತ್‌, ಕುಮಾರ್‌ ಸಂಗಕ್ಕಾರ (ವಿಕೆಟ್‌ ಕೀಪರ್‌), ರಿಕಿ ಪಾಂಟಿಂಗ್‌, ವಿರಾಟ್‌ ಕೊಹ್ಲಿ, ಸ್ಟೀವನ್‌ ಸ್ಮಿತ್‌, ಜಾಕ್‌ ಕಾಲಿಸ್‌, ಎಬಿ ಡಿ ವಿಲಿಯರ್ಸ್‌, ಮಿಚೆಲ್‌ ಜಾನ್ಸನ್‌, ಡೇಲ್‌ ಸ್ಟೇನ್‌, ಮಿಚೆಲ್‌ ಸ್ಟಾರ್ಕ್‌, ಮುತ್ತಯ್ಯ ಮುರಳಿಧರನ್‌