ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕದ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಕಂಪನಿ ಅಪ್ಲೈಡ್ ಮೆಟೀರಿಯಲ್ಸ್‌ನಿಂದ ರಾಜ್ಯದಲ್ಲಿ 3,600 ಕೋಟಿ ರುಪಾಯಿ ಹೂಡಿಕೆ: ಎಂ.ಬಿ. ಪಾಟೀಲ್‌

MB Patil: ಅಪ್ಲೈಡ್ ಮೆಟೀರಿಯಲ್ಸ್ ಕಂಪನಿಯು ರಾಜ್ಯದಲ್ಲಿ ಮುಂದಿನ 10 ವರ್ಷಗಳಲ್ಲಿ 3,600 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಯೋಜನೆಯಿಂದ 1,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

ಅಪ್ಲೈಡ್ ಮೆಟೀರಿಯಲ್ಸ್‌ನಿಂದ 3,600 ಕೋಟಿ ರುಪಾಯಿ ಹೂಡಿಕೆ: ಎಂ.ಬಿ. ಪಾಟೀಲ್‌

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (ಸಂಗ್ರಹ ಚಿತ್ರ) -

Profile
Siddalinga Swamy Sep 15, 2026 10:57 PM

ಬೆಂಗಳೂರು, ಸೆ.15: ಅಮೆರಿಕ ಮೂಲದ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಕಂಪನಿಯಾಗಿರುವ ಅಪ್ಲೈಡ್ ಮೆಟೀರಿಯಲ್ಸ್, ರಾಜ್ಯದಲ್ಲಿ (Invest Karnataka) ಮುಂದಿನ 10 ವರ್ಷಗಳಲ್ಲಿ 3,600 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಯೋಜನೆಯಿಂದ 1,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (MB Patil) ಹೇಳಿದ್ದಾರೆ. ಈ ಸಂಬಂಧದ ಒಡಂಬಡಿಕೆಗೆ ಕಂಪನಿ ಜತೆ ಸಹಿ ಮಾಡಲಾಗಿದೆ ಎಂದು‌ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವರು, ಅಪ್ಲೈಡ್ ಮೆಟೀರಿಯಲ್ಸ್ ಕಂಪನಿಯು ಈ ಹೂಡಿಕೆಯ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ, ಅಗತ್ಯ ಸಾಧನಗಳ ತಯಾರಿಕೆ, ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಗೆ ಬೇಕಾದ ಸಾಫ್ಟ್ ವೇರ್ ತಂತ್ರಜ್ಞಾನ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಲಿದೆ. ಕೆಂಪೇಗೌಡ ವಿಮಾನ‌ ನಿಲ್ದಾಣ ಸಮೀಪದ ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಪ್ರದೇಶದಲ್ಲಿ ಜಾರಿಗೊಳ್ಳುತ್ತಿರುವ ಇಂತಹ ಪ್ರಪ್ರಥಮ ಕೈಗಾರಿಕಾ ಯೋಜನೆ ಇದಾಗಿದೆ. ಮೆಟೀರಿಯಲ್ಸ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಂಪನಿಯ ಈ ಹೂಡಿಕೆಯಿಂದ ಈ ವಲಯಕ್ಕೆ ಬೇಕಾದ ಕಾರ್ಯಪರಿಸರ ಸಶಕ್ತವಾಗಲಿದೆ ಎಂದು ಹೇಳಿದ್ದಾರೆ.

ವೈಟ್‌ಫೀಲ್ಡ್‌ನಲ್ಲಿ ವಿಶ್ವ ದರ್ಜೆಯ ಬಹುಪಯೋಗಿ ವಸ್ತು ಪ್ರದರ್ಶನ ಸಭಾಂಗಣ, ಕನ್ವೆನ್ಷನ್ ಸೆಂಟರ್ ಅಭಿವೃದ್ಧಿ: ಎಂ.ಬಿ.ಪಾಟೀಲ್‌

ಕಂಪನಿಯ ಈ ಯೋಜನೆಗೆ ಸರ್ಕಾರವು ಎಲ್ಲ ಹಂತಗಳಲ್ಲೂ ಸಂಪೂರ್ಣ ಸಹಕಾರ ನೀಡಲಿದೆ. ಈ ಸಂಸ್ಥೆಯು ಎರಡು ದಶಕಗಳಿಂದ ಭಾರತದಲ್ಲಿ ಸಕ್ರಿಯವಾಗಿದ್ದು, ಬೆಂಗಳೂರನ್ನು ತನ್ನ ಪ್ರಮುಖ ಕೇಂದ್ರವನ್ನಾಗಿ ಇಟ್ಟುಕೊಂಡಿದೆ. ತನ್ನ ಭವಿಷ್ಯದ ಹೂಡಿಕೆಗಳಿಗೂ ಕಂಪನಿಯು ರಾಜ್ಯವನ್ನೇ ಆಯ್ದುಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಅವರು ತಿಳಿಸಿದ್ದಾರೆ.