ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತೃಣಮೂಲ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ; ಬಿಜೆಪಿ ಜತೆ ಸಂಪರ್ಕದಲ್ಲಿ 20 ಸಂಸದರು

ಬಂಡಾಯವೆದ್ದ ಶಾಸಕರಿಂದ ಈಗಾಗಲೇ ಪೆಟ್ಟು ತಿಂದಿರುವ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಈಗ ಮತ್ತೊಂದು ಆಘಾತ ಕಾದಿದೆ. ಈಗಾಗಲೇ ಪಕ್ಷದ 20 ಸಂಸದರು ಬಿಜೆಪಿ ಸಂಪರ್ಕದಲ್ಲಿದ್ದು, ಪಕ್ಷ ಬದಲಾಯಿಸಲು ಯೋಜಿಸುತ್ತಿದ್ದಾರೆ ಎನ್ನಲಾಗುತ್ತಿದೆ. ತೃಣಮೂಲ ಕಾಂಗ್ರೆಸ್ ಲೋಕಸಭೆಯಲ್ಲಿ 28 ಮತ್ತು ರಾಜ್ಯಸಭೆಯಲ್ಲಿ 13 ಸಂಸದರು ಸೇರಿ ಒಟ್ಟು 41 ಸಂಸದರನ್ನು ಹೊಂದಿದೆ.

ಬಿಜೆಪಿ ಸೇರುತ್ತಾರೆಯೇ 20 ಟಿಎಂಸಿ ಸಂಸದರು ?

ಸಂಗ್ರಹ ಚಿತ್ರ -

ಕೋಲ್ಕತ್ತಾ: ಪಶ್ಚಿಮ ಬಂಗಾಳದ (west bengal) ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (Trinamool Congress) ಸಂಪೂರ್ಣ ಛಿದ್ರವಾಗಿ ಹೋಗುವ ಲಕ್ಷಣಗಳು ಕಂಡು ಬರುತ್ತಿವೆ. ಪಕ್ಷದ ನಾಯಕತ್ವ ವಿಚಾರವಾಗಿ ಎದ್ದಿರುವ ಅಸಮಾಧಾನದ ಕಾರಣದಿಂದ 28 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಒಡದು ಹೋಳಾಗುತ್ತಿದೆ. ಈಗಾಗಲೇ 80 ಶಾಸಕರಲ್ಲಿ 58 ಮಂದಿ ಬಂಡಾಯವೆದ್ದು ತಮ್ಮ ನಾಯಕರಾಗಿ ಋತಬ್ರತ ಬ್ಯಾನರ್ಜಿ ಅವರನ್ನು ಒಪ್ಪಿಕೊಂಡು ವಿಧಾನಸಭಾ ( West Bengal Assembly) ಸ್ಪೀಕರ್ ರತೀಂದ್ರ ಬೋಸ್ ಅವರ ಅನುಮತಿ ಪಡೆದ ಬೆನ್ನಲ್ಲೇ ಈಗ 20 ಟಿಎಂಸಿ ಸಂಸದರು ಪಕ್ಷ ಬದಲಾಯಿಸಲು ಯೋಜಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ವಿಧಾನಸಭೆಯಲ್ಲಿ ತಮ್ಮ ಬೆಂಬಲಿಗರನ್ನು ಕಳೆದುಕೊಂಡು ನಷ್ಟ ಅನುಭವಿಸಿದ ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ಸಂಸತ್ತಿನಲ್ಲೂ ಭಾರಿ ಹಾನಿಯಾಗುವ ಸಾಧ್ಯತೆ ಇದೆ. ಸುಮಾರು 20 ತೃಣಮೂಲ ಕಾಂಗ್ರೆಸ್ ಸಂಸದರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದು, ಪಕ್ಷ ಬದಲಾಯಿಸಲು ಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಮತಾ ಬ್ಯಾನರ್ಜಿ ಕಣ್ಣೆದುರೇ ಇಬ್ಭಾಗವಾಗುತ್ತಿದೆ ಹೋರಾಟದ ಮೂಲಕ ಕಟ್ಟಿದ ಪಕ್ಷ; ಟಿಎಂಸಿ ಒಡಕಿಗೆ ಕಾರಣವಾದ ಆ 5 ಅಂಶಗಳಿವು

ತೃಣ ಮೂಲ ಕಾಂಗ್ರೆಸ್ ಪಕ್ಷದ 20 ಸಂಸದರು ಉನ್ನತ ಮಟ್ಟದ ಚರ್ಚೆಗಳಲ್ಲಿ ಭಾಗವಹಿಸಿದ್ದು, ಅವರು ತಮ್ಮ ಪಕ್ಷವನ್ನು ಬದಲಾಯಿಸಲು ಆಸಕ್ತರಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ಲೋಕಸಭೆಯಲ್ಲಿ 28 ಮತ್ತು ರಾಜ್ಯಸಭೆಯಲ್ಲಿ 13 ಸೇರಿ ಒಟ್ಟು 41 ಸಂಸದರನ್ನು ಹೊಂದಿದೆ.

ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಮೇಲೆ ಮಮತಾ ಬ್ಯಾನರ್ಜಿ ಅವರಿಗೆ ಇದೊಂದು ದೊಡ್ಡ ಆಘಾತವಾಗಿದೆ. ಇದರಿಂದ ಪಕ್ಷಕ್ಕೆ ಬಹುದೊಡ್ಡ ಹಿನ್ನಡೆಯಾಗಲಿದ್ದು, ಇದರಿಂದ ಸಂಸತ್ತಿನಲ್ಲಿ ವಿರೋಧ ಪಕ್ಷದ ಪ್ರಭಾವ ತೀವ್ರವಾಗಿ ಕುಸಿಯಲಿದೆ.

ತೃಣಮೂಲ ಶಾಸಕಾಂಗ ಪಕ್ಷವು ಋತಬ್ರತ ಬ್ಯಾನರ್ಜಿ ಅವರನ್ನು ತಮ್ಮ ನಾಯಕ ಎಂದು ಘೋಷಿಸಿ ತಮ್ಮದು ನಿಜವಾದ ತೃಣಮೂಲ ಪಕ್ಷ ಎಂದು ಹೇಳಿದೆ. ಇದಕ್ಕೆ ವಿಧಾನಸಭಾ ಸ್ಪೀಕರ್ ಅವರ ಅನುಮೋದನೆಯನ್ನು ಕೂಡ ಪಡೆದಿದೆ.

ದೇಶವ್ಯಾಪಿ ಕಾಂಗ್ರೆಸ್ ಪುನರ್‌ರಚನೆಗೆ ಚಾಲನೆ: ಹಲವು ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆ

ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಮೇಲೆ ಭ್ರಷ್ಟಾಚಾರ ಮತ್ತು ಆರ್‌ಜಿ ಕರ್ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಲವಾರು ತೃಣಮೂಲ ನಾಯಕರು ತಮ್ಮ ಪಕ್ಷವನ್ನು ಟೀಕಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ನಡೆದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸಭೆಯಲ್ಲಿ ಕೂಡ ಪಾಲ್ಗೊಂಡಿದ್ದರು. ಈ ನಡುವೆ ]ಮಮತಾ ಬ್ಯಾನರ್ಜಿ ಅವರು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.