Bihar Assembly Election: ಬಿಹಾರ ಚುನವಣಾ ರ‍್ಯಾಲಿಯಲ್ಲಿ ಆರ್‌ಜೆಡಿ ಬೆಂಬಲಿಗರಿಂದ ಹಲ್ಲೆ: ಮನೋಜ್ ತಿವಾರಿ ಆರೋಪ
ಆರ್‌ಜೆಡಿ ಬೆಂಬಲಿಗರು ಬಿಹಾರ ಚುನಾವಣಾ ರ‍್ಯಾಲಿ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಹಾರದ ಡುಮ್ರಾನ್‌ನಲ್ಲಿ ನಡೆದ ರೋಡ್ ಶೋ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆರ್‌ಜೆಡಿ ಗೂಂಡಾಗಿರಿ ನಡೆಸುತ್ತಿದೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಆರೋಪಿಸಿದ್ದಾರೆ. ಈಶಾನ್ಯ ದೆಹಲಿಯಿಂದ ಮೂರು ಬಾರಿ ಸಂಸದರಾಗಿರುವ ತಾವು ಘರ್ಷಣೆ ತೀವ್ರವಾಗುವುದನ್ನು ತಪ್ಪಿಸಲು ಸ್ಥಳದಿಂದ ಹೊರಟು ಬಂದಿರುವುದಾಗಿ ಅವರು ಹೇಳಿದ್ದಾರೆ. ಇದಕ್ಕೂ ಮೊದಲು ನಡೆದ ಪಾಟ್ನಾದ ಮೊಕಾಮಾ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಜನ ಸುರಾಜ್ ಪಕ್ಷದ ಬೆಂಬಲಿಗ ದುಲರ್ ಚಂದ್ ಯಾದವ್ ಜೆಡಿ(ಯು) ಜತೆಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದರು.
ಬಿಜೆಪಿ ಸಂಸದ ಮನೋಜ್ ತಿವಾರಿ -
ವಿದ್ಯಾ ಇರ್ವತ್ತೂರು
Nov 2, 2025 8:43 PM
ಬಿಹಾರ: ಚುನಾವಣಾ ಪ್ರಚಾರದ ವೇಳೆ ತನ್ನ ಮೇಲೆ ಆರ್‌ಜೆಡಿ (RJD) ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ (BJP MP Manoj Tiwari) ಆರೋಪಿಸಿದ್ದಾರೆ. ಬಿಹಾರದ ಡುಮ್ರಾನ್‌ನಲ್ಲಿ(Dumraon) ನಡೆದ ರೋಡ್ ಶೋ (RoadShow) ವೇಳೆ ಆರ್‌ಜೆಡಿ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ವಿಧಾನಸಭಾ ಚುನಾವಣೆ (Bihar Assembly Election) ಹತ್ತಿರವಾಗುತ್ತಿದ್ದಂತೆ ಆರ್‌ಜೆಡಿ ಗೂಂಡಾಗಿರಿಯಲ್ಲಿ ತೊಡಗಿದೆ ಎಂದು ಅವರು ದೂರಿದ್ದಾರೆ. ಮೊಕಾಮಾದಲ್ಲಿ ನಡೆದಿರುವಂತೆ ಇಲ್ಲಿ ಯಾವುದೇ ದುರ್ಘಟನೆ ನಡೆಯದಂತೆ ತಪ್ಪಿಸಲು ತಾವು ಅಲ್ಲಿಂದ ಹೊರಟು ಬಂದಿರುವುದಾಗಿ ಅವರು ತಿಳಿಸಿದರು.
ಪಾಟ್ನಾದ ಮೊಕಾಮಾ ಪ್ರದೇಶದಲ್ಲಿ ಗುರುವಾರ ಪಕ್ಷದ ಅಭ್ಯರ್ಥಿ ಪಿಯೂಷ್ ಪ್ರಿಯದರ್ಶಿ ಪರ ಪ್ರಚಾರ ನಡೆಸುತ್ತಿದ್ದ ವೇಳೆ ನಡೆದ ಘರ್ಷಣೆಯಲ್ಲಿ ಜನ ಸುರಾಜ್ ಪಕ್ಷದ ಬೆಂಬಲಿಗ ದುಲರ್ ಚಂದ್ ಯಾದವ್ ಸಾವನ್ನಪ್ಪಿದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಜೆಡಿ(ಯು) ಅಭ್ಯರ್ಥಿ ಅನಂತ್ ಸಿಂಗ್ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Viral Video: ಪಾಕಿಸ್ತಾನದಲ್ಲಿ ಕೇವಲ 20 ರೂ. ಸಿಗುತ್ತೆ ಹೊಟೇಲ್ ರೂಂ! ಇದರ ಅವಸ್ಥೆ ಹೇಗಿದೆ ಗೊತ್ತಾ?
ಘಟನೆಯ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ತಿವಾರಿ, ಡುಮ್ರಾನ್‌ನಲ್ಲಿ ಶನಿವಾರ ನಡೆದ ರೋಡ್ ಶೋ ವೇಳೆ ಆರ್‌ಜೆಡಿ ಬೆಂಬಲಿಗರು ನುಗ್ಗಿ ಘೋಷಣೆ ಕೂಗಿದರು. ಅಲ್ಲದೆ ಸ್ಥಳದಲ್ಲಿದ್ದ ತಮ್ಮನ್ನು ಮತ್ತು ಇತರ ಎನ್‌ಡಿಎ ನಾಯಕರನ್ನು ನಿಂದಿಸಿದ್ದಾರೆ. ಶೀಘ್ರದಲ್ಲೇ ಸ್ಥಳದಿಂದ ಹೋಗುವಂತೆ ಹೇಳಿ ಕೋಲುಗಳಿಂದ ತಮ್ಮ ಬೆಂಗಾವಲು ಪಡೆಯ ಕಾರುಗಳಿಗೆ ಹೊಡೆದಿದ್ದಾರೆ. ಇದರಿಂದ ನಾವು ಅಲ್ಲಿಂದ ಹೊರಡಬೇಕಾಯಿತು ಎಂದು ತಿಳಿಸಿದ್ದಾರೆ.
अभी अभी कुछ ही देर पहले डुमराँव अरियाँव ब्रह्म बाबा स्थान पर जब लोग प्रत्याशी राहुल सिंह के साथ मेरे रोड शो का स्वागत कर रहे थे तभी RJD का नारा लगाते हुए कुछ लोगों ने हमारे ऊपर हमला करने की कोशिश की हम लोगो ने टकराव रोकने के लिए गाड़ी तेज चला कर निकले प्रचार में RJD की ऐसी गुंडा…
— Manoj Tiwari (@ManojTiwariMP) November 1, 2025
ಬಕ್ಸಾರ್‌ನ ಡುಮ್ರಾನ್‌ನಲ್ಲಿ ರೋಡ್ ಶೋ ನಡೆಸುತ್ತಿದ್ದಾಗ ಆರ್‌ಜೆಡಿ ಬೆಂಬಲಿಗರು ಅಲ್ಲಿಗೆ ನುಗ್ಗಿದ್ದು ನೋಡಿ ಆಘಾತವಾಯಿತು. ನಮ್ಮ ರ‍್ಯಾಲಿಯ ಮಧ್ಯೆಯೇ ಆರ್‌ಜೆಡಿ ಬೆಂಬಲಿಗರು ಘೋಷಣೆ ಕೂಗಲು ಪ್ರಾರಂಭಿಸಿದರು. ನಮ್ಮ ವಾಹನದ ಮೇಲೆ ಆರ್‌ಜೆಡಿ ಧ್ವಜವನ್ನು ಅಳವಡಿಸಲು ಪ್ರಯತ್ನಿಸಿದರು. ನಾವು ವಿರೋಧಿಸಿದಾಗ ಕಾರುಗಳನ್ನು ಪುಡಿಮಾಡಲು ಪ್ರಯತ್ನಿಸಿದರು ಮತ್ತು ನಮ್ಮನ್ನು ನಿಂದಿಸಿದರು. ಕೂಡಲೇ ನಾವು ಚಾಲಕರಿಗೆ ಅಲ್ಲಿಂದ ಹೊರಡುವಂತೆ ಸೂಚಿಸಿದೆವು. ಆದರೂ ಅವರು ನಮ್ಮ ಕಾರುಗಳಿಗೆ ಕೋಲುಗಳಿಂದ ಹೊಡೆದು ನಮ್ಮನ್ನು ಓಡಿಸಿದರು ಎಂದು ಅವರು ತಿಳಿಸಿದರು.
ವಿಧಾನ ಸಭಾ ಚುನಾವಣೆ ಹತ್ತಿರಬರುತ್ತಿದ್ದಂತೆ ಆರ್‌ಜೆಡಿ ಗೂಂಡಾಗಿರಿಯಲ್ಲಿ ತೊಡಗಿದೆ. ಘಟನೆ ಬಗ್ಗೆ ಪಕ್ಷವು ದೂರು ದಾಖಲಿಸಿದೆ. ಇದರ ಬಗ್ಗೆ ಚುನಾವಣಾ ಆಯೋಗಕ್ಕೂ ಗೊತ್ತಿದೆ ಎಂದು ತಿವಾರಿ ಹೇಳಿದರು.
ಇದನ್ನೂ ಓದಿ: Viral News: ಮಾಂಸಾಹಾರ ಬ್ಯಾನ್ ಆಗಿರುವ ಪ್ರಪಂಚದ ಏಕೈಕ ನಗರ ಇದೇ ನೋಡಿ; ಇದು ಇರೋದು ಭಾರತದಲ್ಲಿ!
ಈ ಕುರಿತು ಚುನಾವಣಾ ಆಯೋಗ, ಆಡಳಿತ ಮತ್ತು ಮಹಾಘಟಬಂಧನ್ ನಾಯಕರಿಗೂ ದೂರು ನೀಡುತ್ತೇನೆ. ಇದು ಅಪರಾಧ. ಈ ಕುರಿತು ಎಸ್‌ಪಿಯೊಂದಿಗೆ ಮಾತನಾಡಲಾಗಿದೆ. ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದರು.
ಈ ಕುರಿತು ಸಾಮಾಜಿಕ ಮಾಧ್ಯಮ ತಾಣವಾದ ಎಕ್ಸ್‌ನಲ್ಲಿ ಬರೆದಿರುವ ತಿವಾರಿ, ಚುನಾವಣಾ ಪ್ರಚಾರದ ಸಮಯದಲ್ಲಿ ಆರ್‌ಜೆಡಿಯನ್ನು ದರೋಡೆಕೋರತನ ಪ್ರದರ್ಶಿಸಿದೆ. ಡುಮ್ರಾನ್‌ನಲ್ಲಿ ಅಭ್ಯರ್ಥಿ ರಾಹುಲ್ ಸಿಂಗ್ ಅವರೊಂದಿಗೆ ಜನರು ರೋಡ್‌ಶೋ ಅನ್ನು ಸ್ವಾಗತಿಸುತ್ತಿದ್ದಾಗ ನಮ್ಮ ಮೇಲೆ ದಾಳಿಗೆ ಪ್ರಯತ್ನಿಸಲಾಗಿದೆ ಎಂದು ಅವರು ಘಟನೆ ಬಗ್ಗೆ ವಿವರಿಸಿದ್ದಾರೆ.
ಎನ್‌ಡಿಎ ಬಿಹಾರದಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಕಾಂಗ್ರೆಸ್-ಆರ್‌ಜೆಡಿ ಒಕ್ಕೂಟವನ್ನು ಎದುರಿಸುತ್ತಿದೆ. 243 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.