ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CT Ravi: ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಕುರಿತು ಆತಂಕ ಇಲ್ಲ: ಸಿ.ಟಿ. ರವಿ ಕಿಡಿ

Delhi Blast Case: ಲಕ್ಷಗಟ್ಟಲೆ ಜನರ ಸಾವಿನ ಬಗ್ಗೆ ಕಾಂಗ್ರೆಸ್ಸಿಗೆ ಆತಂಕ ಇರಬೇಕಾಗಿತ್ತು. ಅವರು ತಮ್ಮ ಯೋಜನೆಯಲ್ಲಿ ಯಶ ಪಡೆದಿದ್ದರೆ ಎಷ್ಟು ಲಕ್ಷ ಜನರು ಸಾಯುತ್ತಿದ್ದರೆಂಬ ಆತಂಕ ಇರಬೇಕಿತ್ತು. ಆದರೆ, ಬಿಹಾರ ಚುನಾವಣೆಗೆ ಮುಂಚೆಯೇ ಯಾಕಾಯಿತು? ಎಂಬುದು ಇವರ ಆತಂಕ. ಭಯೋತ್ಪಾದಕರು ಬಾಂಬ್ ಇಟ್ಟರೆ ಬಿಜೆಪಿಗೇ ಲಾಭ ಆಗುತ್ತದೆಯೇ? ನಿಮಗೆ ಯಾಕೆ ಲಾಭ ಆಗಬಾರದು ಎಂದು ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಕುರಿತು ಆತಂಕ ಇಲ್ಲ: ಸಿ.ಟಿ. ರವಿ ಕಿಡಿ

ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (ಸಂಗ್ರಹ ಚಿತ್ರ) -

Profile
Siddalinga Swamy Nov 13, 2025 8:07 PM

ಬೆಂಗಳೂರು, ನ.13: ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಕುರಿತು ಆತಂಕ ಇಲ್ಲ, ಚುನಾವಣೆಗೆ ಮೊದಲು ಯಾಕೆ ಆಗಿದೆ ಎಂಬುದೇ ಅವರ ಆತಂಕ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (CT Ravi) ಟೀಕಿಸಿದ್ದಾರೆ. ಮಾಧ್ಯಮಗಳ ಜತೆ ಗುರುವಾರ ಮಾತನಾಡಿದ ಅವರು, ಈ ಬಾಂಬ್ ಸ್ಫೋಟಕ್ಕೆ ಕಾರಣವಾದವರು ಡಾ. ಉಮರ್, ಡಾ. ಆದಿಲ್, ಡಾ. ಶಹೀನಾ, ಡಾ. ಮೊಹಿಯುದ್ದೀನ್ ಮೊದಲಾದವರು ಇದ್ದಾರೆ. ಅಲ್ ಫಲಾಹ್ ವೈದ್ಯಕೀಯ ಕಾಲೇಜನ್ನೇ ಭಯೋತ್ಪಾದನೆಯ ತಾಣವಾಗಿ ಇಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಆರ್‌ಡಿಎಕ್ಸ್ ಸಂಗ್ರಹಿಸಿದ್ದರು. ಸುಮಾರು 3 ಸಾವಿರ ಕೆಜಿ ಆರ್‌ಡಿಎಕ್ಸ್ ಸಂಗ್ರಹ ಮಾಡಿದ್ದರು. ಇದು ಇಡೀ ಬೆಂಗಳೂರನ್ನೇ ಸುಟ್ಟು ಹಾಕಿಬಿಡಬಹುದು ಎಂದು ಹೇಳಿದರು.

ಅಪಾರ ಪ್ರಮಾಣದಲ್ಲಿ ರಿಸಿನ್ ಎಂಬ ಆರ್ಸೆನಿಕ್ ಥರದ ವಿಷ ತಯಾರಿಸಿದ್ದರು. ಅವರು ಅಂದುಕೊಂಡ ಯೋಜನೆ ಪ್ರಕಾರ ನಡೆದಿದ್ದರೆ ಬಹುಶಃ ಭಾರತದಲ್ಲಿ ಜಗತ್ತೇ ಬೆಚ್ಚಿ ಬೀಳುವಂಥ ಭಯೋತ್ಪಾದನಾ ದುಷ್ಕೃತ್ಯ ನಡೆಯುತ್ತಿತ್ತು. ಲಕ್ಷಾಂತರ ಜನರನ್ನು ಕೊಲ್ಲುವ ಸಂಚು ಮಾಡಿದ್ದರು ಎಂದು ಹೇಳಿದರು.

ಲಕ್ಷಗಟ್ಟಲೆ ಜನರ ಸಾವಿನ ಬಗ್ಗೆ ಕಾಂಗ್ರೆಸ್ಸಿಗೆ ಆತಂಕ ಇರಬೇಕಾಗಿತ್ತು. ಅವರು ತಮ್ಮ ಯೋಜನೆಯಲ್ಲಿ ಯಶ ಪಡೆದಿದ್ದರೆ ಎಷ್ಟು ಲಕ್ಷ ಜನರು ಸಾಯುತ್ತಿದ್ದರೆಂಬ ಆತಂಕ ಇರಬೇಕಿತ್ತು. ಆದರೆ, ಬಿಹಾರ ಚುನಾವಣೆಗೆ ಮುಂಚೆಯೇ ಯಾಕಾಯಿತು? ಎಂಬುದು ಇವರ ಆತಂಕ. ಭಯೋತ್ಪಾದಕರು ಬಾಂಬ್ ಇಟ್ಟರೆ ಬಿಜೆಪಿಗೇ ಲಾಭ ಆಗುತ್ತದೆಯೇ? ನಿಮಗೆ ಯಾಕೆ ಲಾಭ ಆಗಬಾರದು ಎಂದು ಕೇಳಿದರು. ನೀವೇನು ಭಯೋತ್ಪಾದಕರ ಜತೆ ಸೇರಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಭಯೋತ್ಪಾದಕರು ಮತ್ತು ನಿಮ್ಮನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುತ್ತಾರೆಂಬ ಭಯವೇ? ಆ ಭಯದಿಂದ ಈ ಯೋಚನೆಯೇ? ಕಾಂಗ್ರೆಸ್ಸಿಗೆ ಜನ ಸತ್ತಿದ್ದಕ್ಕೆ ಸಂಕಟವಿಲ್ಲ, ಚುನಾವಣೆ ಸಂದರ್ಭದಲ್ಲೇ ಯಾಕೆ ಬಾಂಬಿಟ್ಟರು ಎಂಬುದು ಅವರಿಗೆ ಸಂಕಟದ ವಿಚಾರ. ಕಾಂಗ್ರೆಸ್, ಬೌದ್ಧಿಕವಾಗಿ ದಿವಾಳಿ ಹೊಂದಿರುವುದಕ್ಕೆ ಇದೊಂದು ನಿದರ್ಶನ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Karnataka Weather: ಹವಾಮಾನ ವರದಿ; ನಾಳೆ ಬೆಂಗಳೂರಿನಲ್ಲಿ ಮೋಡ ಕವಿದ ಆಕಾಶ, ಉಳಿದೆಡೆ ಒಣ ಹವೆ

ಕೆಲವರು ಬೇಹುಗಾರಿಕಾ ವೈಫಲ್ಯ ಎನ್ನುತ್ತಾರೆ. ಅವರಿಗೆ ಈ ಮಾಹಿತಿ ಎಂದ ಅವರು, ಅಕ್ಟೋಬರ್ 9ರಂದು ಜಲಂಧರ್‌ನಲ್ಲಿ ಐಎಸ್‍ಐ ಬೆಂಬಲಿತ ಸಂಚನ್ನು ವಿಫಲಗೊಳಿಸಲಾಗಿತ್ತು. ಅಕ್ಟೋಬರ್ 13ರಂದು ಜೈಶೇ ಮಹಮ್ಮದ್ ಸಂಘಟನೆಯ ಹಣಕಾಸಿನ ಜಾಲವನ್ನು ಆಂಧ್ರ ಪ್ರದೇಶ, ಮಹಾರಾಷ್ಟ್ರ ಮೊದಲಾದ ಕಡೆಗಳಲ್ಲಿ ಬಯಲಿಗೆ ಎಳೆಯಲಾಗಿತ್ತು. ಅಕ್ಟೋಬರ್ 15ರಂದು ಪಂಜಾಬ್‍ನಲ್ಲಿ ಡ್ರೋನ್ ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಜಾಲವನ್ನು ಭೇದಿಸಿ ವಶಕ್ಕೆ ಪಡೆಯಲಾಗಿತ್ತು. ಅಕ್ಟೋಬರ್ 24ರಂದು ದೆಹಲಿಯಲ್ಲಿ ಐಸಿಸ್ ಪ್ರೇರಿತ ಆನ್‌ಲೈನ್ ಜಾಲವನ್ನು ವಿಫಲಗೊಳಿಸಲಾಗಿತ್ತು. 28ರಂದು ಎಚ್‍ಯುಐಎಸ್ ತಾಂತ್ರಿಕ ತಜ್ಞೆಯನ್ನು ಪುಣೆಯಲ್ಲಿ ಬಂಧಿಸಲಾಗಿತ್ತು. ನವೆಂಬರ್ 7ರಂದು ಭಯೋತ್ಪಾದನಾ ಕೃತ್ಯಕ್ಕೆ ಪ್ರೇರಣೆ ನೀಡುವವರನ್ನು ರಾಜಸ್ಥಾನದಲ್ಲಿ ಬಂಧಿಸಿದ್ದರು. ಗುಜರಾತ್ ಎಟಿಎಸ್ ಮಹಿಳೆ ಸೇರಿ ನಾಲ್ವರನ್ನು ಬಂಧಿಸಿತ್ತು ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ವಿವರಿಸಿದರು.‌