ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CT Ravi: ಭಾರತದಲ್ಲಿ ಮತಾಂಧತೆ, ಸಾಮೂಹಿಕ ನರಮೇಧಕ್ಕೆ ಸುದೀರ್ಘ ಇತಿಹಾಸ- ಸಿ.ಟಿ. ರವಿ

ಬಡವರು, ಶಿಕ್ಷಣ ಇಲ್ಲದವರು ಬೇಗನೇ ಭಯೋತ್ಪಾದನಾ ಜಾಲದಲ್ಲಿ ಸಿಲುಕುತ್ತಾರೆ ಎನ್ನುತ್ತಿದ್ದರು. ಬಿನ್ ಲಾಡೆನ್ ಹುಟ್ಟಬೇಕಾದರೆ ಸಾವಿರಾರು ಕೋಟಿ ರೂ. ಒಡೆಯ. ಬೆಳ್ಳಿ ಚಮಚವಲ್ಲ, ವಜ್ರದ ಮಣಿ ಪೋಣಿಸಿದ ಚಿನ್ನದ ಚಮಚದಿಂದ ಚಿನ್ನದ ತಟ್ಟೆಯಲ್ಲಿ ತಿನ್ನುವಷ್ಟು ಸಂಪತ್ತಿತ್ತು. ಆದರೂ ಭಯೋತ್ಪಾದಕನಾದ ಎಂದು ತಿಳಿಸಿದ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಈಗ ಬಂಧನಕ್ಕೆ ಒಳಗಾದ ಶಂಕಿತ ಉಗ್ರರ‍್ಯಾರೂ ಅನಕ್ಷರಸ್ಥರಲ್ಲ, ಅದರಲ್ಲಿ ಬಹುತೇಕ ಜನರು ವೈದ್ಯರು. ಕೆಲವರು ಎಂಜಿನಿಯರ್‌ಗಳು. ಕೆಲವರು ಶ್ರೀಮಂತ ಕುಟುಂಬದ ಹಿನ್ನೆಲೆ ಉಳ್ಳವರು. ಇವರು ಯಾಕೆ ಭಯೋತ್ಪಾದಕರಾದರು? ಭಯೋತ್ಪಾದಕರನ್ನು ತಯಾರಿಸುವ ಸಾಫ್ಟ್‌ವೇರ್ ಯಾವುದು ಎಂದಿದ್ದಾರೆ.

ಭಾರತದಲ್ಲಿ ಮತಾಂಧತೆ, ಸಾಮೂಹಿಕ ನರಮೇಧಕ್ಕೆ ಸುದೀರ್ಘ ಇತಿಹಾಸ: ಸಿ.ಟಿ. ರವಿ

-

Profile
Siddalinga Swamy Nov 12, 2025 5:39 PM

ಬೆಂಗಳೂರು, ನ.12: ಭಾರತದಲ್ಲಿ ಮತಾಂಧತೆ ಮತ್ತು ಸಾಮೂಹಿಕ ನರಮೇಧಕ್ಕೆ ಬಹಳ ದೀರ್ಘವಾದ ಇತಿಹಾಸ ಇದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ (CT Ravi) ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಬುಧವಾರ ಅವರು ಮಾತನಾಡಿದರು. ಬ್ರಿಟಿಷರ ಆಳ್ವಿಕೆ ಕಾಲದಲ್ಲೇ ಮಾಪ್ಲಾ ದಂಗೆ ನಡೆದಿತ್ತು. ಕೇರಳದ ಮಲಬಾರ್‌ನಲ್ಲಿ ಇದು ಆಗಿತ್ತು ಎಂದು ತಿಳಿಸಿದ ಅವರು, ನರಮೇಧಕ್ಕೆ ತುತ್ತಾದವರು ಹಿಂದೂಗಳು ಎಂದು ಹೇಳಿದರು. ಪಶ್ಚಿಮ ಬಂಗಾಲದಲ್ಲಿ ನೇರ ಕಾರ್ಯಾಚರಣೆ ಹೆಸರಿನಲ್ಲಿ ದೊಡ್ಡ ನರಮೇಧ ನಡೆದಿತ್ತು. ಸ್ವಾತಂತ್ರ್ಯಾನಂತರ ರಜಾಕಾರರ ಚಳವಳಿ ಹೆಸರಿನಲ್ಲಿ ನಡೆದಿದ್ದೂ ನರಮೇಧವೇ ಎಂದು ತಿಳಿಸಿದ ಅವರು, ಇವತ್ತಿನ ಎಐಸಿಸಿ ಅಧ್ಯಕ್ಷರ ಕುಟುಂಬದವರೂ ಸಂತ್ರಸ್ತರಾಗಿತ್ತು. ಅವರು ತಾಯಿ, ಸಹೋದರಿಯನ್ನು ಕಳಕೊಳ್ಳಬೇಕಾಗಿತ್ತು. ಸ್ವಾತಂತ್ರ್ಯಾನಂತರ ದೇಶದ ಉದ್ದಗಲಕ್ಕೆ ಸಾವಿರಾರು ಬಾಂಬ್ ಸ್ಫೋಟ ನಡೆದಿತ್ತು ಎಂದು ನೆನಪಿಸಿದರು.

ಅದರಲ್ಲಿ ಶೇ. 90ರಷ್ಟು ಇಸ್ಲಾಂ ಸಿದ್ಧಾಂತದಿಂದ ಪ್ರಚೋದನೆ ಪಡೆದ ಭಯೋತ್ಪಾದಕರು, ಶೇ.10ರಷ್ಟು ಮಾವೋ ಮತ್ತು ಕಾರ್ಲ್ ಮಾರ್ಕ್ಸ್‌ ಸಿದ್ಧಾಂತದಿಂದ ಪ್ರಚೋದನೆ ಪಡೆದ ಭಯೋತ್ಪಾದಕರು. ಇದೆಲ್ಲದರ ಉದ್ದೇಶ ಹಿಂಸೆ, ನರಮೇಧ, ಭೀತಿ ಉಂಟು ಮಾಡುವುದು. ಆ ಭಯದ ಮೂಲಕ ಭಾರತವನ್ನು ಮಣಿಸುವ ಷಡ್ಯಂತ್ರದ ಭಾಗವಾಗಿಯೇ ನಡೆದಿದೆ ಎಂದು ತಿಳಿಸಿದರು.

ಇವರೇನೂ ಬಡವರು, ಅನಕ್ಷರಸ್ಥರಲ್ಲ

ಬಡವರು, ಶಿಕ್ಷಣ ಇಲ್ಲದವರು ಬೇಗನೇ ಭಯೋತ್ಪಾದನಾ ಜಾಲದಲ್ಲಿ ಸಿಲುಕುತ್ತಾರೆ ಎನ್ನುತ್ತಿದ್ದರು. ಬಿನ್ ಲಾಡೆನ್ ಹುಟ್ಟಬೇಕಾದರೆ ಸಾವಿರಾರು ಕೋಟಿ ರೂ. ಒಡೆಯ. ಬೆಳ್ಳಿ ಚಮಚವಲ್ಲ, ವಜ್ರದ ಮಣಿ ಪೋಣಿಸಿದ ಚಿನ್ನದ ಚಮಚದಿಂದ ಚಿನ್ನದ ತಟ್ಟೆಯಲ್ಲಿ ತಿನ್ನುವಷ್ಟು ಸಂಪತ್ತಿತ್ತು. ಆದರೂ ಭಯೋತ್ಪಾದಕನಾದ ಎಂದು ಸಿ.ಟಿ. ರವಿ ಹೇಳಿದರು.

ಈಗ ಬಂಧನಕ್ಕೆ ಒಳಗಾದ ಶಂಕಿತ ಉಗ್ರರ‍್ಯಾರೂ ಅನಕ್ಷರಸ್ಥರಲ್ಲ, ಅದರಲ್ಲಿ ಬಹುತೇಕ ಜನರು ವೈದ್ಯರು. ಕೆಲವರು ಎಂಜಿನಿಯರ್‌ಗಳು. ಕೆಲವರು ಶ್ರೀಮಂತ ಕುಟುಂಬದ ಹಿನ್ನೆಲೆ ಉಳ್ಳವರು. ಇವರು ಯಾಕೆ ಭಯೋತ್ಪಾದಕರಾದರು? ಭಯೋತ್ಪಾದಕರನ್ನು ತಯಾರಿಸುವ ಸಾಫ್ಟ್‌ವೇರ್ ಯಾವುದು ಎಂದು ಕೇಳಿದರು.

ಈ ಸುದ್ದಿಯನ್ನೂ ಓದಿ | Delhi Blast: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಾರು ಸ್ಫೋಟದ ವಿಡಿಯೋ; ಇಲ್ಲಿದೆ ನೋಡಿ

ಭಾರತದಲ್ಲಿ ಇರುವಷ್ಟು ಧಾರ್ಮಿಕ ಸ್ವಾತಂತ್ರ್ಯ ಇನ್ನೆಲ್ಲೂ ಇಲ್ಲ. ಗಣೇಶನ ಮೆರವಣಿಗೆ ಆದರೂ ಆತಂಕದಲ್ಲಿ ನಡೆಯಬೇಕಾಗುತ್ತದೆ. ಇಲ್ಲಿ ಈದ್ ಮಿಲಾದ್ ಯಾವತ್ತೂ ಆತಂಕದಲ್ಲಿ ನಡೆದಿಲ್ಲ ಎಂದು ಹೇಳಿದರು. ಆದರೂ ಬಾಂಬ್ ಇಡಬೇಕೆಂದು ಅವರಿಗೆ ಹೇಗೆ ಅನಿಸುತ್ತದೆ ಎಂದು ಪ್ರಶ್ನಿಸಿದರು. ಅಮಾಯಕರನ್ನು ಕೊಲ್ಲುವುದನ್ನು ಇಸ್ಲಾಂ ಒಪ್ಪುವುದಿಲ್ಲ. ಹೀಗೆ ಕೊಲ್ಲುವವರು ನಿಜವಾದ ಮುಸಲ್ಮಾನರಲ್ಲ ಎಂದು ಒಬ್ಬರು ಮೌಲ್ವಿಯ ಹೇಳಿಕೆಯನ್ನು ನಿನ್ನೆ ಗಮನಿಸಿದ್ದೇನೆ. ಅವರ ಹೇಳಿಕೆ ನಿಜ ಆಗಿದ್ದರೆ ಇವರೆಲ್ಲರೂ ಭಯೋತ್ಪಾದನೆ ಮಾಡುತ್ತಿರುವುದೇ ಇಸ್ಲಾಂ ವಿಸ್ತರಣೆಗೆ; ಯಾವ ಇಸ್ಲಾಂ ಸತ್ಯ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕೇಳಿದರು.