ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Election 2025 : ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ; ತೃತೀಯ ಲಿಂಗಿಗಳಿಗೆ ಮೀಸಲಾತಿ-ಮಹಿಳೆಯರಿಗೆ 2,500 ರೂ!

ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಇಂದು (ಜ.29) ತನ್ನ ಪ್ರಣಾಳಿಕೆಯನ್ನು ರಿಲೀಸ್‌ ಮಾಡಿದೆ. ದೆಹಲಿ ಕಾಂಗ್ರೆಸ್ ಅಧ್ಯಕ್ಷರಾದ ದೇವೇಂದ್ರ ಯಾದವ್ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡಲಾಗಿದ್ದು,ಮಹಿಳೆಯರಿಗೆ ಮಾಸಿಕ 2,500 ರೂಪಾಯಿಗಳನ್ನು ನೀಡುವ ಭರವಸೆಯನ್ನು ನೀಡಿದೆ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಒಟ್ಟು 22 ಭರವಸೆಗಳಿವೆ.

ದೆಹಲಿ ಚುನಾವಣೆ-ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಭರ್ಜರಿ ಆಫರ್‌!

Delhi Election 2025

Profile Deekshith Nair Jan 29, 2025 4:02 PM

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ(Delhi Election 2025) ಸಂಬಂಧಿಸಿ ಕಾಂಗ್ರೆಸ್ ಪಕ್ಷವು ಇಂದು(ಜ.29) ತನ್ನ ಪ್ರಣಾಳಿಕೆ(Congress Manifesto) ಬಿಡುಗಡೆ ಮಾಡಿದ್ದು, ತೃತೀಯ ಲಿಂಗಿಗಳಿಗೆ(Quota For Transgender) ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಘೋಷಿಸಿದೆ. ಮಹಿಳೆಯರಿಗೆ ಮಾಸಿಕ 2,500 ರೂ. ನೀಡುವುದಾಗಿ ಭರವಸೆ ನೀಡಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಟ್ಟು 22 ಭರವಸೆಗಳನ್ನು ನೀಡಿದೆ. 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್‌, ಉಚಿತ ರೇಷನ್ ಕಿಟ್ ನೀಡುವುದಾಗಿಯೂ ಭರವಸೆ ನೀಡಿದೆ.

ಕಾಂಗ್ರೆಸ್‌ ಪಕ್ಷದ ಭರವಸೆಗಳು

  • ಅಧಿಕಾರಕ್ಕೆ ಬಂದರೆ ಜಾತಿಗಣತಿ
  • ಪೂರ್ವಾಂಚಲದವರಿಗಾಗಿ ಸಚಿವಾಲಯ
  • ಮಹಿಳೆಯರಿಗೆ ಮಾಸಿಕ ₹2,500
  • 300 ಯುನಿಟ್‌ವರೆಗೆ ಉಚಿತ ವಿದ್ಯುತ್
  • ₹500ಗೆ ಎಲ್‌ಪಿಜಿ ಸಿಲಿಂಡರ್
  • ₹25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ
  • ಉಚಿತ ರೇಷನ್ ಕಿಟ್
  • ನಿರುದ್ಯೋಗಿ ವಿದ್ಯಾವಂತ ಯುವಜನತೆಗೆ ಒಂದು ವರ್ಷದವರೆಗೆ ಮಾಸಿಕ ₹8,500
  • 100 ಇಂದಿರಾ ಕ್ಯಾಂಟೀನ್ (₹5ಗೆ ಊಟ)
  • ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ


ಚುನಾವಣೆ ಹತ್ತಿರ ಬಂದಾಗ ಎಲ್ಲಾ ಪಕ್ಷಗಳು ಸಾಮಾನ್ಯವಾಗಿ 'ಗ್ಯಾರಂಟಿ' ಪದವನ್ನು ಬಳಸುತ್ತಿವೆ. ಆದರೆ ಈ ಪದವನ್ನು ಕಾಂಗ್ರೆಸ್ ಪಕ್ಷವು ಕರ್ನಾಟಕ ಚುನಾವಣೆಯಲ್ಲಿ ಯಶಸ್ವಿಯಾಗಿ ಬಳಸಿದೆ. ಕಾಂಗ್ರೆಸ್ ಪಕ್ಷವು ಹೇಳಿದ್ದನ್ನೇ ಮಾಡುತ್ತದೆ ಎಂಬ ಸಂದೇಶವನ್ನು ನಾವು ಸಾರ್ವಜನಿಕರಿಗೆ ನೀಡಲು ಬಯಸಿದ್ದೇವೆ. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಆಗಿದ್ದಾಗ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ರೂಪದಲ್ಲಿ 'ನರೇಗಾ' ಕಾನೂನನ್ನು ಜಾರಿಗೆ ತಂದಿತು. ಗ್ಯಾರಂಟಿ ಎಂದರೆ ಅದು ಸಾರ್ವಜನಿಕರ ಹಕ್ಕು. ದೆಹಲಿಯ ಜನರಿಗೆ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಹೇಳಿದರು.

ಈ ಸುದ್ದಿಯನ್ನೂ ಓದಿ:Delhi Election 2025: ದೆಹಲಿ ಚುನಾವಣೆ;ಬಿಜೆಪಿಯ ಮತ್ತೊಂದು ಪ್ರಣಾಳಿಕೆ ರಿಲೀಸ್‌- ಉಚಿತ ಶಿಕ್ಷಣ ಘೋಷಣೆ

ದೆಹಲಿಯಲ್ಲಿ ಕರ್ನಾಟಕ ಮಾದರಿಯ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್‌ ಬಿಡುಗಡೆಗೊಳಿಸಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ತೋರಿಸಿದೆ.



ಫೆಬ್ರವರಿ 5ಕ್ಕೆ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣೆ ಫಲಿತಾಂಶವು ಫೆಬ್ರವರಿ 8ಕ್ಕೆ ಪ್ರಕಟವಾಗಲಿದೆ.