ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranya Rao Case: ರನ್ಯಾ ಮದುವೆಗೆ ಸಚಿವ ಪರಮೇಶ್ವರ್‌ 25 ಲಕ್ಷ ಗಿಫ್ಟ್‌ ನೀಡಿದ್ರಾ?; ಡಿಕೆಶಿ ಹೇಳಿದ್ದೇನು?

Ranya Rao Case: ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ. ದಾಳಿ ನಡೆದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ನಾಯಕರು ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ ಗೃಹಸಚಿವರಿಗೆ ಬೆಂಬಲ ಸೂಚಿಸಿದ್ದಾರೆ.

ರನ್ಯಾಗೆ ಸಚಿವ ಪರಮೇಶ್ವರ್‌ 25 ಲಕ್ಷ ಗಿಫ್ಟ್‌; ಡಿಕೆಶಿ ಹೇಳಿದ್ದೇನು?

Profile Prabhakara R May 22, 2025 4:34 PM

ಬೆಂಗಳೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ. ದಾಳಿ ಬಗ್ಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದು, ಇದು ರಾಜಕೀಯ ಪ್ರೇರಿತ ಕ್ರಮ ಎಂದು ಆರೋಪಿಸಿದ್ದಾರೆ. ಈ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ನಾಯಕರು ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ ಗೃಹಸಚಿವರಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ರನ್ಯಾ ರಾವ್‌ ಪ್ರಕರಣ (Ranya Rao Case) ಹಾಗೂ ಇಡಿ ದಾಳಿಗೂ ಲಿಂಕ್‌ ಇರಬಹುದು ಎಂಬ ಮಾತುಗಳು ಕೇಳಿಬರುತ್ತಿರುವ ಸಮಯದಲ್ಲಿ ಮಾಧ್ಯಮಗಳ ಮುಂದೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಪರಮೇಶ್ವರ್ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ) ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆಶಿ ಅವರು, ನಾನು ಪರಮೇಶ್ವರ ಅವರ ಹತ್ತಿರ ಮಾತನಾಡಿದ್ದೇನೆ. ಅವರು 15 ರಿಂದ 25 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ನಾವೆಲ್ಲಾ ಸಾರ್ವಜನಿಕ ಜೀವನದಲ್ಲಿ ಇರುವವರು. ಮದುವೆ ಅಥವಾ ಯಾವುದೋ ಕಾರ್ಯಕ್ರಮಕ್ಕೆ ಗಿಫ್ಟ್‌ಗಳು ಕೊಟ್ಟಿರಬಹುದು. ಆ ಹೆಣ್ಣುಮಗಳು (ರನ್ಯಾ ರಾವ್) ಯಾರೋ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮವಾಗಲಿ. ಗಿಫ್ಟ್‌ ಏನಾದರೂ ಕೊಟ್ಟಿದ್ರೆ ಮದುವೆಗೆ ಕೊಟ್ಟಿರಬಹುದು.

ಪರಮೇಶ್ವರ ಅವರು ಗೌರವಾನ್ವಿತ ವ್ಯಕ್ತಿ. ಅವರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ನಾವು ಅವರ ಜತೆ ಇರುತ್ತೇವೆ. ಪರಮೇಶ್ವರ್‌ ಆರೋಗ್ಯವಾಗಿದ್ದು, ಕ್ಯಾಬಿನೆಟ್‌ಗೆ ಬರುತ್ತಾರೆ ಎಂದು ಡಿಕೆಶಿ ಹೇಳಿದರು.

ಇನ್ನು ಇಡಿ ದಾಳಿ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ಬುಧವಾರ ಸುದ್ದಿಗೋಷ್ಠಿ ನಡೆಸಿ, ರನ್ಯಾರಾವ್ ವಿದೇಶದಿಂದ ಚಿನ್ನ ತಂದು ಹಲವು ಪ್ರಮುಖರಿಗೆ ನೀಡಿರುವ ಮಾಹಿತಿಯಿದೆ. ಈ ಹಣ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತಿದ್ದ ಬಗ್ಗೆ ಇಡಿ ಮಾಹಿತಿ ಸಂಗ್ರಹಿಸಿರಬಹುದು ಎಂದು ಆರೋಪಿಸಿದ್ದರು. ಅಲ್ಲದೇ ಪ್ರಕರಣದಲ್ಲಿ ಪರಮೇಶ್ವರ್ ಪಾತ್ರ ಸಾಬೀತಾದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದರು.

ಈ ಸುದ್ದಿಯನ್ನೂ ಓದಿ | Madenuru Manu: ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪ; ನಟ ಮಡೆನೂರು ಮನು ಅರೆಸ್ಟ್

ಇಡಿ ಅಧಿಕಾರಿಗಳಿಗೆ ತನಿಖೆಗೆ ಸಹಕಾರ ಕೊಟ್ಟಿದ್ದೇವೆ: ಪರಮೇಶ್ವರ

ಇ.ಡಿ. ಅಧಿಕಾರಿಗಳು ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಅಧಿಕಾರಿಗಳು ನಡೆಸಿದ ದಾಳಿ ಸಂದರ್ಭದಲ್ಲಿ ಸಂಸ್ಥೆಯ ಬ್ಯಾಂಕ್ ಅಕೌಂಟ್ಸ್ ವಿವರ ಕೇಳಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿರುವ ಅವರು, ಗುರುವಾರ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಇಡಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಯಾವ ಸೂಚನೆ ಮೇಲೆ ಭೇಟಿ ಅಂತ ಗೊತ್ತಿಲ್ಲ. ನಮ್ಮ ಅಕೌಂಟ್ಸ್ ಕೇಳಿದ್ದಾರೆ. ನಾನು ಅಕೌಂಟ್ ಕೊಡಲು ಹೇಳಿದ್ದೇನೆ. ಯಾವ ವರ್ಷಗಳ ಲೆಕ್ಕ ಕೇಳಿದ್ದಾರೆ, ಅದನ್ನು ಕೊಡಿ ಅಂದಿದ್ದೇನೆ ಎಂದರು.

ಇ.ಡಿ ಅಧಿಕಾರಿಗಳಿಂದ ಇವತ್ತು ಕೂಡ ವಿಚಾರಣೆ ಮುಂದುವರೆದಿದೆ. ಅವರ ಉದ್ದೇಶ ನಮಗೆ ಗೊತ್ತಿಲ್ಲ. ಅವರ ತನಿಖೆಗೆ ಸಹಕಾರ ಕೊಟ್ಟಿದ್ದೇವೆ. ಯಾವುದನ್ನೂ ಮುಚ್ಚಿಟ್ಟಿಲ್ಲ. ನಾನು ಕಾನೂನಿಗೆ ಬೆಲೆ ಕೊಟ್ಟು ಬಂದವನು. ಎಲ್ಲರಿಗೂ ಒಂದೆ ಕಾನೂನು ಇದೆ. ನಾನು ಕಾನೂನಿಗೆ ಗೌರವ ಕೋಡುತ್ತೇನೆ ಎಂದರು.