Bagepally News: ವಯೋ ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಪುಸ್ತಕ ಬಿಡುಗಡೆ
ರಾಮಚಂದ್ರಪ್ಪ ಒಬ್ಬ ಶಿಸ್ತಿನ ಸಿಪಾಯಿ ಇದ್ದಂತೆ. ನೇರ ನುಡಿ, ಮಿತ ಭಾಷೆ, ಸರಳ ವ್ಯಕ್ತಿತ್ವ, ಸದಾ ವೈಜ್ಞಾನಿಕ ಚಿಂತನೆ ಹಾಗೂ ಸಮಾಜವಾದಿ ಚಿಂತನೆಗಳಿಂದ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡವರು. ಡಾ| ಹೆಚ್. ನರಸಿಂಹಯ್ಯ, ಕಾಂ॥ ಜಿ.ವಿ. ಶ್ರೀ ರಾಮರೆಡ್ಡಿ ಹಾಗೂ ಅವರ ಒಡನಾಡಿ ಹಾಗೂ ರವರ ಆಲೋಚನೆಗಳಿಂದ ಪ್ರಭಾವಿತರಾದವರು.
-
Ashok Nayak
Nov 2, 2025 12:16 AM
ಬಾಗೇಪಲ್ಲಿ: ಶಿಕ್ಷಣ ಕದಿಯಲಾಗದ ಸಂಪತ್ತು" ಶಿಕ್ಷಣವು ಹಣದ ಅಥವಾ ಭೌತಿಕ ಸಂಪತ್ತಿನಂತೆ ಕಳ್ಳತನ ಮಾಡಲು, ಕಳೆದುಕೊಳ್ಳಲು ಅಥವಾ ಯಾರಾದರೂ ಕಸಿದುಕೊಳ್ಳಲು ಸಾಧ್ಯವಿಲ್ಲದ ಅಮೂಲ್ಯವಾದ ಮತ್ತು ಶಾಶ್ವತವಾದ ಆಸ್ತಿ. ಶಿಕ್ಷಣವು ವ್ಯಕ್ತಿಯನ್ನು ಸಮಾಜದಲ್ಲಿ ಉತ್ತಮ ನಾಗರಿಕನನ್ನಾಗಿ ರೂಪಿಸುತ್ತದೆ ಮತ್ತು ಜೀವನದ ಎಲ್ಲಾ ಸವಾಲುಗಳನ್ನು ಎದುರಿಸಲು ಬೇಕಾದ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ ಎಂದು ವಯೋ ನಿವೃತ್ತಿ ಶಿಕ್ಷಕ ವಿ.ರಾಮಚಂದ್ರಪ್ಪ ಹೇಳಿದರು.
ಅವರು ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ವಯೋ ನಿವೃತ್ತಿ ಹೊಂದಿದ್ದು ಅವರ ಬಿಳ್ಕೊಡಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇದನ್ನೂ ಓದಿ: Bagepally News: ಭಾರತ ಪ್ರಪಂಚದಾದ್ಯಂತ ರಾಷ್ಟ್ರೀಯ ಐಕ್ಯತೆ ಸಾರಿದ ದೇಶ: ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ
ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಕೆ.ವಿ.ಶ್ರೀನಿವಾಸ್ ಶ್ರೀನಿವಾಸ್ ಮಾತನಾಡಿ, ರಾಮಚಂದ್ರಪ್ಪ ಒಬ್ಬ ಶಿಸ್ತಿನ ಸಿಪಾಯಿ ಇದ್ದಂತೆ. ನೇರ ನುಡಿ, ಮಿತ ಭಾಷೆ, ಸರಳ ವ್ಯಕ್ತಿತ್ವ, ಸದಾ ವೈಜ್ಞಾನಿಕ ಚಿಂತನೆ ಹಾಗೂ ಸಮಾಜವಾದಿ ಚಿಂತನೆಗಳಿಂದ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡವರು. ಡಾ| ಹೆಚ್. ನರಸಿಂಹಯ್ಯ, ಕಾಂ॥ ಜಿ.ವಿ. ಶ್ರೀ ರಾಮರೆಡ್ಡಿ ಹಾಗೂ ಅವರ ಒಡನಾಡಿ ಹಾಗೂ ರವರ ಆಲೋಚನೆಗಳಿಂದ ಪ್ರಭಾವಿತರಾದವರು. ಪ್ರಶ್ನಿಸದೆ ಏನನ್ನು ಒಪ್ಪಬೇಡಿ' ಎಂಬ ಡಾ|| ಹೆಚ್.ಎನ್. ರವರ ವೈಚಾರಿಕ ಚಿಂತನೆಯಂತೆ ರಾಮಚಂದ್ರಪ್ಪರವರು ಎಲ್ಲವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ತಾರ್ಕಿಕವಾಗಿ ಯೋಚಿಸುವರು.
ಮೌಡ್ಯತೆ, ಕಂದಾಚಾರ, ಮೂಢನಂಬಿಕೆಗಳಿಂದ ಸದಾ ದೂರವಿರುವ ಇವರು ವೈಜ್ಞಾನಿಕ ಮನೋ ಭಾವ ಹಾಗೂ ಮಾನವೀಯ ಮೌಲ್ಯಗಳಿಂದ ತಮ್ಮ ಬದುಕನ್ನು ಕಟ್ಟಿಕೊಂಡವರು. ವೃತ್ತಿಜೀವನ ದಲ್ಲಿ ತಮ್ಮ ವಿದ್ಯಾರ್ಥಿಗಳಿಗೂ ಅದನ್ನೇ ಬೋಧಿಸುತ್ತಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ವಿ.ರಾಮಚಂದ್ರಪ್ಪ ವಿರಚಿತ ನಿವೃತ್ತಿಯ ನೆನಪು ಎಂಬ ಪುಸ್ತಕವನ್ನು ಬಿಇಓ ವೆಂಕಟೇಶಪ್ಪ ಹಾಗೂ ಗಣ್ಯರು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ವೆಂಕಟೇಶ್,ಬಿ.ಎಸ್.ಕೃಷ್ಣ,ನಾರಾಯಣಪ್ಪ, ಸೌಮ್ಯ, ಮುನಿರಾಜು, ಪ್ರಮಕುಮಾರಿ, ಸಿಬ್ಬಂದಿ ವರ್ಗ ರಘು ಇಂದಿರಮ್ಮ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.