'ಸರ್ವೋದಯ ತೆಲಂಗಾಣ' ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಮಾಜಿ ಸಂಸದೆ ಕವಿತಾ
ಹೊಸ ರಾಜಕೀಯ ಪಕ್ಷ "ಸರ್ವೋದಯ ತೆಲಂಗಾಣ' ವನ್ನು ಸ್ಥಾಪಿಸುವುದಾಗಿ ತೆಲಂಗಾಣ ಜಾಗೃತಿ ಸಂಸ್ಥಾಪಕಿ ಮತ್ತು ಮಾಜಿ ಸಂಸದೆ ಕಲ್ವಕುಂಟ್ಲ ಕವಿತಾ ಅವರು ಶುಕ್ರವಾರ ಘೋಷಿಸಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ "ಹೊಸ ಯುಗ"ದ ಆರಂಭ ಎಂದು ಬಣ್ಣಿಸಿದ ಅವರು ಈ ಕುರಿತು ನಿಜಾಮಾಬಾದ್‌ನಲ್ಲಿರುವ ತೆಲಂಗಾಣ ಜಾಗೃತಿ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಸಂಗ್ರಹ ಚಿತ್ರ -
ತೆಲಂಗಾಣ: ಮಾಜಿ ಸಂಸದೆ (Former MP Kavita), ತೆಲಂಗಾಣ ಜಾಗೃತಿ ಸಂಸ್ಥಾಪಕಿ (Telangana Jagruthi founder), ಬಿಆರ್‌ಎಸ್ (BRS) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (k. chandrashekar rao) ಅವರ ಪುತ್ರಿ ಕಲ್ವಕುಂಟ್ಲ ಕವಿತಾ (Kalvakuntla Kavitha) ಅವರು 'ಸರ್ವೋದಯ ತೆಲಂಗಾಣ' (Sarvodaya Telangana) ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಏಪ್ರಿಲ್ 25 ರಂದು ಮೆಡ್ಚಲ್‌ನಲ್ಲಿ ಪಕ್ಷದ ಚಟುವಟಿಕೆಯನ್ನು ಪ್ರಾರಂಭಿಸುವುದಾಗಿ ಹೇಳಿದರು. ಈ ಕುರಿತು ನಿಜಾಮಾಬಾದ್‌ನಲ್ಲಿರುವ ತೆಲಂಗಾಣ ಜಾಗೃತಿ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ನಮ್ಮ ಈ ಹೊಸ ಪಕ್ಷವು ತೆಲಂಗಾಣ ಕೇಂದ್ರಿತ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲಿದ್ದು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲರ ಅಭಿವೃದ್ಧಿಗೆ ಒತ್ತು ನೀಡಲಿದೆ ಎಂದು ತಿಳಿಸಿದರು.
ಸರ್ವೋದಯ ತೆಲಂಗಾಣ ಪಕ್ಷದ ಸ್ಥಾಪನೆಯು ರಾಜ್ಯದ ರಾಜಕೀಯದಲ್ಲಿ ಹೊಸ ಯುಗದ ಆರಂಭ ಎಂದು ಬಣ್ಣಿಸಿದ ಅವರು, ಏಪ್ರಿಲ್ 25ರಂದು ಬೆಳಗ್ಗೆ 10 ಗಂಟೆಗೆ ಮೆಡ್ಚಲ್‌ನಲ್ಲಿ ನಡೆಯುವ ಅದ್ವಯ ಸಮಾವೇಶದಲ್ಲಿ ಪಕ್ಷವನ್ನು ಔಪಚಾರಿಕವಾಗಿ ಪ್ರಾರಂಭಿಸುವುದಾಗಿ ತಿಳಿಸಿದರು. ಹೈದರಾಬಾದ್‌ನ ಹೊರವಲಯದಲ್ಲಿ ನಡೆಯಲಿರುವ ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಹೆಸರು ಮತ್ತು ಧ್ವಜವನ್ನು ಅಧಿಕೃತವಾಗಿ ಅನಾವರಣಗೊಳಿಸುವುದಾಗಿ ತಿಳಿಸಿದರು.
ನೋಯ್ಡಾ ವಿಮಾನ ನಿಲ್ದಾಣದ ಮೊದಲ ಹಂತ ಇಂದಿನಿಂದ ಆರಂಭ; ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಮಹಾತ್ಮಾ ಗಾಂಧಿಯ "ಸರ್ವೋದಯ" ಕಲ್ಪನೆಯನ್ನು ಒಳಗೊಂಡಿರುವ ನಮ್ಮ ಪಕ್ಷ ಸಾರ್ವತ್ರಿಕ ಉನ್ನತಿ ಮತ್ತು ಕಲ್ಯಾಣವನ್ನು ಸೂಚಿಸುತ್ತದೆ. ಸಮಗ್ರ ಅಭಿವೃದ್ಧಿ ಮತ್ತು ಸ್ವಾವಲಂಬನೆಯೇ ಪಕ್ಷದ ಮೂಲ ತತ್ತ್ವವಾಗಿದೆ. ರಾಜ್ಯ ರಚನೆಯಾದ ಒಂದು ದಶಕದ ಬಳಿಕವೂ ಈಡೇರದ ತೆಲಂಗಾಣ ಜನರ ಆಕಾಂಕ್ಷೆಗಳನ್ನು ಈಡೇರಿಸುವುದು ನಮ್ಮ ಆಶಯವಾಗಿದೆ ಎಂದು ಹೇಳಿದರು.
ತೆಲಂಗಾಣ ಚಳವಳಿಯ ಆಧಾರವಾಗಿದ್ದ ನೀಲು, ನಿಧಿಗಳು, ನಿಯಮಕಲು, ನೀರು, ನಿಧಿಗಳು ಮತ್ತು ಉದ್ಯೋಗಗಳಲ್ಲಿ ನಾವು ಸಾಧನೆ ಮಾಡಿಲ್ಲ. ಸರ್ಕಾರಗಳು ರೈತರು, ಯುವಕರು, ಕೈಗಾರಿಕೋದ್ಯಮಿಗಳು ಮತ್ತು ಅಂಚಿನಲ್ಲಿರುವ ಸಮುದಾಯಗಳ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿವೆ ಎಂದು ಆರೋಪಿಸಿದ ಅವರು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಂದ ಹಿಡಿದು ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರಂತಹ ಅಲ್ಪಸಂಖ್ಯಾತರು ಕೂಡ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ರಾಜಕೀಯ ಮತ್ತು ನೀತಿ ನಿರೂಪಣೆಯಲ್ಲಿ ಮಹಿಳೆಯರು ಪ್ರಾತಿನಿಧ್ಯ ಕಡಿಮೆ ಇದೆ. ಅವರನ್ನೆಲ್ಲ ಕೇವಲ ಮತ ಬ್ಯಾಂಕ್‌ಗಳಾಗಿ ಪರಿಗಣಿಸಲಾಗುತ್ತಿದೆ ಎಂದರು.
ನಾನು ತೆಲಂಗಾಣದ ಮಗಳು ಎಂದು ಹೇಳಿದ ಅವರು, ಮಹಿಳೆಯ ನೇತೃತ್ವದ ಹೊಸ, ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ಶಕ್ತಿಯನ್ನು ನಾವು ಕಾಣಬೇಕು. ಪುರುಷರ ನೇತೃತ್ವದ ಸಾಕಷ್ಟು ಪಕ್ಷಗಳನ್ನು ನೋಡಿದ್ದೇವೆ. ನಿಜವಾದ ಸರ್ವೋದಯ ತೆಲಂಗಾಣವನ್ನು ಸಾಧಿಸಲು ಮಹಿಳಾ ನೇತೃತ್ವದ ರಾಜಕೀಯ ಚಳುವಳಿಯ ಅವಶ್ಯಕತೆಯಿದೆ ಎಂದು ತಿಳಿಸಿದರು.
ಬದಲಾವಣೆಗಾಗಿ ನಾವು ಇತರರನ್ನು ಅವಲಂಬಿಸಲು ಸಾಧ್ಯವಿಲ್ಲ. ತೆಲಂಗಾಣದ ಭವಿಷ್ಯವನ್ನು ನಾವೇ ಬದಲಾಯಿಸಬೇಕು ಎಂದ ಅವರು ನಮ್ಮ ಪಕ್ಷವು ತೆಲಂಗಾಣದ ಹಲವು ಪ್ರಮುಖ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸಲಿದೆ. ಇದಕ್ಕೆ ಸಂಬಂಧಿಸಿ ಎದುರಾಗುವ ರಾಷ್ಟ್ರೀಯ ಸಮಸ್ಯೆಗಳನ್ನು ನಿಭಾಯಿಸಲು ರಾಷ್ಟ್ರೀಯ ಸಮಿತಿಯನ್ನು ಸಹ ಪಕ್ಷ ಹೊಂದಲಿದೆ ಎಂದರು.
Sub Registrar Office: ರಾಜ್ಯದಲ್ಲಿ ಇಂದು, ನಾಳೆ ರಜೆ ಇದ್ದರೂ ಉಪನೋಂದಣಾಧಿಕಾರಿ ಕಚೇರಿ ಓಪನ್
ತೆಲಂಗಾಣದಲ್ಲಿ ಈಗ ಯಾವುದೇ ಪ್ರಾದೇಶಿಕ ಪಕ್ಷವಿಲ್ಲ. ಆದ್ದರಿಂದ, ನಮ್ಮ ಜಾಗೃತಿ ಪ್ರತಿ ಮನೆಯ ಪಕ್ಷವಾಗಿರುತ್ತದೆ. ಅದು ತೆಲಂಗಾಣದ ಪ್ರಾದೇಶಿಕ ಪಕ್ಷವಾಗಿರುತ್ತದೆ. ಯಾವುದೇ ರಾಷ್ಟ್ರೀಯ ಮಟ್ಟದ ನಾಯಕರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸುವುದಿಲ್ಲ. ತಮ್ಮ ಪಕ್ಷವು ಅಧಿಕಾರಕ್ಕಾಗಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.